

ಶ್ರೀನಿವಾಸಪುರ : ಇದು ನಮ್ಮ ತಾಲೂಕು ನನಗೆ ಜನ್ಮ ನೀಡಿದ ಸ್ಥಳ . ನಮ್ಮ ಮನೆ ಶುದ್ಧವಾಗಿರಬೇಕು ಆಗ ಬೇರೆಯವರಿಗೆ ಹೇಳಲು ಸಾಧ್ಯ. ನಮ್ಮ ತಾಲೂಕಿನ ಅಧಿಕಾರ ವರ್ಗದವರು ಸಾರ್ವಜನಿಕರ ಕೆಲಸಗಳು ಸರಿಯಾಗಿ ಮಾಡಿ . ಬೇರೆಯವರಿಗೆ ಮಾದರಿಯಾಗಬೇಕು ಎಂದು ಉಪಲೋಕಾಯುಕ್ತ ವೀರಪ್ಪ ತಿಳಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಆಗ ರಾಜ್ಯದಲ್ಲಿ ನಾನು ಯಾವ ತಾಲೂಕು, ಜಿಲ್ಲೆಗಳಲ್ಲಿ ಓಡಾಡಲು ಸಾಧ್ಯ . ಅಲ್ಲಿನ ಅಧಿಕಾರಿಗಳಿಗೆ ಸೂಚನೆ ನೀಡಲು ಸಾಧ್ಯ. ಇಲ್ಲವಾದಲ್ಲಿ ನನ್ನ ಕಡೆ ಬೆರಳು ತೋರಿಸುತ್ತಾರೆ ಅದು ಆಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಲೋಕಾಯುಕ್ತ ಇಲಾಖೆ ಯಾವುದೇ ಸರ್ಕಾರದ ಅದೀನದಲ್ಲಿ ಇಲ್ಲ. ದೇಶದಲ್ಲಿಯೇ ಒಂದು ಬಲಿಷ್ಠವಾದ ಇಲಾಖೆ. ಸ್ವಯತ್ತತೆಯ ಸಂಸ್ಥೆ ಇದ್ದು, ಸಮಾಜದಲ್ಲಿ ಭ್ರಷ್ಟ, ದುರಾಡಳಿತನ್ನು ಹೋಗಾಡಿಸುವುದೇ ನಮ್ಮ ಉದ್ದೇಶ. ಅಧಿಕಾರಿಗಳಲ್ಲಿನ ಮಂದಗತಿ ಕೆಲಸಕ್ಕಾಗಿ ಜನರು ಬೇಸತ್ತಿದ್ದಾರೆ. ಅಧಿಕಾರಿಗಳು ಕಾನೂನು ಬದ್ದವಾಗಿ ಕೆಲಸ ಮಾಡಿಕೊಡಿ. ಕಾನೂನು ವಿರುದ್ಧವಾಗಿ ಕೆಲಸ ಮಾಡಬೇಡಿ.
ಪಟ್ಟಣದಲ್ಲಿ ಅಂದಾಜು 2 ಲಕ್ಷ ಜನಸಂಖ್ಯೆ ಇರಬಹುದು. ಆದರೆ ಎಲ್ಲರೂ ಅಧಿಕಾರಿಗಳು ಆಗಲು ಸಾಧ್ಯವಿಲ್ಲ. ಕೆಲವರಿಗೆ ಮಾತ್ರ ಜನರ ಸೇವೆ ಮಾಡಲು ಅವಕಾಶ ಅಷ್ಟೆ ಅದನ್ನ ಸದ್ಭಳಕೆ ಮಾಡಿಕೊಳ್ಳಬೇಕು ಅಷ್ಟೆ. ರಾಜ್ಯದಲ್ಲಿ ಅಂದಾಜು 7 ಕೋಟಿ ಜನಸಂಖ್ಯೆ ಇದ್ದು , ಅದರಲ್ಲಿ 5 ಸಾವಿರ ಜನಸಂಖ್ಯೆ ಅಧಿಕಾರಿಗಳು ಇದ್ದೇವೆ. ಉಳಿದ ಜನಸಂಖ್ಯೆಗೆ ಸೇವೆ ಮಾಡುವ ಅವಕಾಶ ಸಿಕ್ಕದೆ ಅದನ್ನು ಸದುಪಯೋಗ ಮಾಡಿಕೊಳ್ಳಬೇಕು . ಈ ಹಿಂದೆ ನಮ್ಮ ದೇಶವು ಸಂಸ್ಕಾರಯುತ ದೇಶ ಎಂಬ ಹೆಗ್ಗಳಿಕೆ ಹೊಂದಿತ್ತು. ಆದರೆ ಅಧಿಕಾರದ ಲೈಸನ್ಸ್ ಸಿಕ್ಕಿ ಮೇಲೆ ಭ್ರಷ್ಟರಾಗಿ ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಬಲಿಷ್ಟ ಲೋಕಾಯುಕ್ತ ಸಂಸ್ಥೆ ಅಧಿಕಾರ ಇರುವ ಮುಖ್ಯಮಂತ್ರಿ, ಇತರೆ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲಾಗಿರುವ ಉದಾಹಣೆ ಇದೆ. ನಾವು ಒಂದು ತಿಂಗಳ ಮುಂಚ್ಚೆಯೇ ಅಧಿಕಾರಿಗಳಿಗೆ ಪರಿಶೀಲಿನೆ ಬರುವುದಾಗಿ ತಿಳಿಸಲಾಗುತ್ತದೆ ಆದರೂ ಅಧಿಕಾರಿಗಳಿಗೆ ಶಿಕ್ಷೆ ನೀಡಲಾಗುತ್ತದೆ.
ಜನರನ್ನು ಕಚೇರಿಗೆ ಅಲಿಸಬೇಡಿ ಜನರ ಸೇವೆಯನ್ನು ಕಾಲ ಕಾಲಕ್ಕೆ ಕಾರ್ಯನಿರ್ವಹಸಿ . ಅಧಿಕಾರಿಗಳು ಜನರ ಕೈಗೆ ಸಿಗುವಂತೆ ಇರಬೇಕು .ಅವರ ಕೆಲಸಗಳನ್ನು ಅಂದೇ ಮುಗಿಸಿ, ಪ್ರಪಂಚಕ್ಕೆ ನಮ್ಮ ತಾಲೂಕು ಮಾವು ಬೆಳೆಗೆ ಪ್ರಸಿದ್ಧಿ ಹೊಂದಿದೆ. ಅದೇ ರೀತಿಯಾಗಿ ರಾಜ್ಯದಲ್ಲಿ ತಾಲೂಕಿನ ಅಧಿಕಾರಿಗಳು ಜನರ ಕಾರ್ಯಗಳನ್ನು ಅಂದಿನ ಕೆಲಸ ಅಂದೇ ಮುಗಿಸುತ್ತಿದ್ದಾರೆ ಎಂಬ ಹೆಗ್ಗಳಿಕೆಯಾಗಿ ರಾಜ್ಯಕ್ಕೆ ಮಾದರಿಯಾಗಬೇಕು ಎಂದರು.
ನಮ್ಮ ತಾಲೂಕಿನ ಅಧಿಕಾರಿಗಳು ಯಾರ ಬಳಿ ಕೈಚಾಚುವುದಿಲ್ಲ ಎಂಬ ಹೆಗ್ಗಳಿಕೆ ಇದ್ದಾಗ ನಾನು ರಾಜ್ಯದಲ್ಲಿ ಓಡಾಡಲು ಪ್ರಶಂಸೆಯಾಗುತ್ತದೆ. ಇಂದು ವಿದ್ಯಾವಂತರೇ ಮೋಸಗಾರರಾಗಿಬಿಟ್ಟಿದ್ದಾರೆ. ಡಿ.ವಿ.ಗುಂಡಪ್ಪ ತಮ್ಮ ಮಂಕತಿಮ್ಮನ ಕಗ್ಗದಲ್ಲಿ ಹೇಳಿರುವಂತೆ ದೇಶವು ಅದೋ ಗತಿ ಹೋಗಲು ವಿದ್ಯಾವಂತರಿಂದಲೇ ಎಂದು ಹೇಳಿದ್ದರು . ಆದರೆ ನೀವು ನನ್ನ ಆಶಯದೊಂದಿಗೆ ಕೈಜೋಡಿಸಿ , ನಮ್ಮ ತಾಲೂಕುನ್ನು ಭ್ರಷ್ಟ, ದುರಾಡಳಿತ ಮುಕ್ತವನ್ನಾಗಿ ಮಾಡಿ ಮಾದರಿಯನ್ನಾಗಿ ಮಾಡೋಣ ಎಂದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕಳೆದ ಎರಡು ಮೂರು ಬೇಟಿ ನೀಡಿದಾಗ ರಾಜ್ಯದಲ್ಲಿಯೇ ಮಾದರಿ ಕೇಂದ್ರವಾಗಿತ್ತು ಆದರೆ ಇಂದು ಅವವ್ಯಸ್ಥೆ ಗೂಡಾಗಿದೆ. ಸ್ವಯಂ ಕೇಸು ಮಾಡುತ್ತೇನೆ. ನಿಮ್ಮ ಇಲಾಖೆಯಲ್ಲಿ ನಾಲ್ಕು ಶಾಲ ಕಟ್ಟಡಗಳು ಬಿದ್ದು ಹೋಗಿವೆ. ಅಲ್ಲದೆ ನಾಲ್ಕು ವರ್ಷಗಳಿಂದ ಶೌಚಾಲಯಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ನಿನ್ನೆಯೇ ನಿಮ್ಮ ಅಧಿಕಾರಿಗೆ ತಿಳಿಸಲಾಗಿದೆ. ಅಲ್ಲದೆ ಕೆಲ ಶಿಕ್ಷಕರು ಬಡ್ಡಿ ವ್ಯಾಪಾರ ಮಾಡುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ ಅಂತವರ ಬಗ್ಗೆ ಎಚ್ಚರಿಕೆ ನೀಡಿ. ಬಿಸಿಯೂಟ ಸಮಯದಲ್ಲಿ ಮಕ್ಕಳಿಗೆ ಸರಿಯಾಗಿ ಬಡಿಸಿ . ಶಾಲೆಗಳಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಅತಿ ಶೀಘ್ರವಾಗಿ ಸರಿಪಡಿಸುವಂತೆ ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ ರವರಿಗೆ ತಿಳಿಸಿದರು.
ಕಚೇರಿಗಳಲ್ಲಿ ದೇವರ ಪೋಟೋ, ಮಹನೀಯರ ಪೋಟೋಗಳು ಇಟ್ಟುಕೊಂಡು ಆವರ ಆಶಯಗಳನ್ನು ದೂರಮಾಡಬೇಡಿ . ನಿಮ್ಮ ಸಂಬಳ ಬಿಟ್ಟು ಬೇರಯಲ್ಲವೂ ವಿಷ. ಸಕಾಲಕ್ಕೆ ಜನರ ಸೇವೆ ಮಾಡಿ . ನಾನು ತುಂಬಾ ಒಳ್ಳೇಯವನು ಆದರೆ ನನ್ನ ಕೆಣಕಬೇಡಿ. ನೀವು ಒಳ್ಳೇಯ ಕೆಲಸ ಮಾಡಿ ನಾನು ನಿಮ್ಮೊಂದಿಗೆ ಇರುತ್ತೇನೆ .
ಪೊಲೀಸರು ಸಮಾಜದಲ್ಲಿ ಯಾವ ರೀತಿ ಇರುಬೇಕು ಎಂದು ನಾನು 2017 ರಲ್ಲಿ ಪುಸ್ತಕವನ್ನು ಬರೆದಿದ್ದೇನೆ. ಪೊಲೀಸರು ಸಮಾಜದಲ್ಲಿ ಕಾನೂನು ವ್ಯವಸ್ಥೆ ಸರಿಪಡಿಸಿ, ಜನರೊಂದಿಗೆ ಸ್ನೇಹಮಯದೊಂದಿಗೆ ವ್ಯವಹರಿಸಬೇಕು. ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಕ್ಕೆ ಬಿಡಬೇಡಿ ಅರಣ್ಯ ಅಧಿಕಾರಿಗೆ ಸೂಚಿಸಿದರು . ಕಚೇರಿಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳಿಗೆ , ಸಭೆಗೆ ನಿಗದಿತ ಸಮಯಕ್ಕೆ ಹಾಜರಾಗದ ಬೇಜವ್ದಾರಿ ಅಧಿಕಾರಿಗಳ ವಿರುದ್ಧ ಗರಂ ಆದರು .
ಲೋಕಾಯುಕ್ತ ಎಸ್ಪಿ ವಿ.ಧನಂಜಯ್, ಲೋಕಾಯುಕ್ತ ನ್ಯಾಯದೀಶ ಅರವಿಂದ್, ಡಿವೈಎಸ್ಪಿ ಸುದೀರ್, ತಹಶೀಲ್ದಾರ್ ಜಿ.ಎನ್.ಸುದೀಂದ್ರ, ಇಒ ಎಸ್.ಶಿವಕುಮಾರಿ, ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್ , ಪೊಲೀಸ್ ಇನ್ಸ್ಪೆಕ್ಟರ್ ಮಹ್ಮದ್ ಗೊರವನಕೊಳ್ಳ ಇದ್ದರು.
