ಶ್ರೀನಿವಾಸಪುರ : ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ಆಡಳಿತ ಮಾಡುತ್ತಿದ್ದು ಈ ದೇಶವು ಜ್ಯಾತೀತ ರಾಷ್ಟ್ರ ನೂರಾರು ಜಾತಿಗಳು ದೇಶದಲ್ಲಿ ಬದುಕುತ್ತಿದ್ದಾರೆ. ಬದುಕು ಬೇರೆ ಬಾವನೆಗಳು ಬೇರೆ. ಬಾವನೆ ಎಂದರೆ ನನ್ನ ಧರ್ಮ, ನನ್ನ ಅಣ್ಣ ತಮ್ಮಂದಿರುಗಳು ಇಂತಹದು. ಬದುಕು ಎಂದರೆ ಪ್ರತಿಯೊಬ್ಬ ಪ್ರಜೆಯು ಬದಕಬೇಕು. ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ದಳಸನೂರು ಗೋಪಾಲಕೃಷ್ಣ ಹೇಳಿದರು.
ತಾಲೂಕಿನ ದಳಸನೂರು ಗ್ರಾಮದ ದಳಸನೂರು ಗೋಪಾಲಕೃಷ್ಣ ನಿವಾಸದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಕೆಳೆದ ೧೪ ನೇ ಮಾವಿನ ಕಾಯಿ ಮಂಡಿಯಲ್ಲಿ ಶ್ರೀನಿವಾಸಪು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷ ಕಾರ್ಯಕರ್ತರ ಪ್ರಚಾರ ಸಭೆ ನಡೆಯಿತು. ಕೆ.ಎಚ್.ಮುನಿಯಪ್ಪ ರವರು ನಿಮ್ಮನ್ನು ಮಾತನಾಡಲು ತಿಳಿಸಿದರು. ನನಗೂ ತಿಳಿಸಿದರು ಅವರನು ಗೆಲ್ಲಿಸಬೇಕು ಅವರಿಗೆ ಸಂಪೂರ್ಣ ಬೆಂಬಲಿದೆ ಎಂದಿದ್ದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೌತಮ್ರವರು ಮೊಬೈಲ್ ಮೂಲಕ ಸಂಪರ್ಕ ಮಾಡಿ ನಿಮ್ಮ ಸಹಕಾರ ಬೆಂಬಲ ಬೇಕು ಎಂದು ಮನವಿ ಮಾಡಿದರು. ಖಂಡಿತವಾಗಿ ನನ್ನ ಸಹಕಾರ ಬೆಂಬಲ ಇದ್ದೇ ಇರುತ್ತದೆ. ನಾನು ಮೂಲತಃ ಕಾಂಗ್ರೆಸ್ ಪಕ್ಷದವನು .ನಾನು ೪೦ ವರ್ಷಗಳಿಂದಲೂ ಸಕ್ರಿಯವಾಗಿ ಇರುವ ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತ ನಾನು ಯಾವುತ್ತೂ ಪಕ್ಷದ ಸಿದ್ದಾಂತಗಳ ಮೇಲೆ ರಾಜಕೀಯ ಮಾಡಿದವನು. ನನ್ನ ಸಂಪೂರ್ಣ ಬೆಂಬಲವಿದೆ ಎಂದು ಶುಭಹಾರೈಸಿದೆ ಎಂದರು. ಅವರಿಗೆ ಹೆಚ್ಚಿನ ಬಹುಮತ ನೀಡಬೇಕಿದೆ ಎಂದು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದರು.
ದಳಸನೂರು ಗ್ರಾಮದಲ್ಲಿ ೨೦೦೦ ಜನಸಂಖ್ಯೆ ೧೩೦೦ ಮತ ಇದೆ ಅದರಲ್ಲಿ ೯೦೦ ಒಕ್ಕಲಿಗರ ಮತವನ್ನ ಹೊಂದಿದ್ದೇವೆ ಎಂದು ಮಾಹಿತಿ ನೀಡಿದರು. ಇಷ್ಟು ಮತವನ್ನು ಹೊಂದಿದ್ದರೂ ಸಹ ಇದುವೆರಗೂ ನಾವು ಗ್ರಾಮದಲ್ಲಿ ಯಾವುದೇ ರೀತಿಯಾದ ದಬ್ಬಾಳಿಕೆ ನಡೆಸಿಲ್ಲ. ಎಲ್ಲರನ್ನು ಸರಿಸಮಾನವಾಗಿ ನೋಡಿಕೊಂಡು ಹೋಗುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಜಾತಿ ವಿಚಾರದಲ್ಲಿ ರಾಜಕೀಯ ಮಾಡಲಿಲ್ಲ. ಬಡವಬಲ್ಲಿದ ಎಲ್ಲರಿಗೂ ರಕ್ಷಣೆ ಕೊಡಬೇಕೆನ್ನುವುದೆ ಅಂಬೇಡ್ಕರ್ ಸಿದ್ದಾಂತಗಳ ಬಗ್ಗೆ ಅರಿತು ಎಲ್ಲಾ ಜಾತಿಗಳ ರಕ್ಷಣೆ ಕೊಡಬೇಕೆನ್ನುವುದೇ ನಮ್ಮ ಉದ್ದೇಶ.
ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಎಲ್ಲಾ ದೊಡ್ಡ ನಾಯಕರಿಂದ ಹಿಡಿದು ಕಾರ್ಯಕರ್ತರಿಗೂ ಅಧಿಕಾರವಿದೆ. ವರಿಷ್ಟರು ನಿರ್ಧಾರ ಮಾಡಿದವರಿಗೆ ನಾವೆಲ್ಲರೂ ಬೆಂಬಲವನ್ನು ನೀಡಬೇಕು. ಅದರಂತೆ ಪಕ್ಷದ ಸಿದ್ದಾಂತಗಳAತೆ ಒಪ್ಪುವ ಕೆಲಸವಾಗಬೇಕಿದೆ.
ಕಳೆದ ೨೦ ದಿನಗಳ ಹಿಂದೆ ಅಭ್ಯರ್ಥಿ ಗೌತಮ್ ರವರನ್ನ ದೂರವಾಣಿ ಮೂಲಕ ಸಂಪರ್ಕ ಮಾಡಿ ಬರುವಂತೆ ತಿಳಿಸಿದೆ ೮ ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರಚಾರ ಒತ್ತಡ ಮೇಲೆ ಬಂದು ಮಾತನಾಡಲು ಸಾಧ್ಯವಾಗಿಲ್ಲಿಲ್ಲ ಎಂದರು. ನಾನ ಅವರ ಸಮಸ್ಯೆ ಅರಿತು ನಾನು ಗೌತಮ್ಪರವಾಗಿ ಮತಯಾಚನೆಯನ್ನು ಮಾಡುತ್ತಿದ್ದೇನೆ ಎಂದರು.
ಪ್ರತಿ ಪಕ್ಷದಲ್ಲಿ ಸಣ್ಣ ಪುಟ್ಟ ಮನಸ್ತಾಪಗಳು ಇದ್ದುಇದ್ದೆ ಒಂದು ಕುಟುಂವದಲ್ಲಿ ಗಂಡ ಹೆಂಡತಿ, ಅಣ್ಣ ತಮ್ಮಂದಿರ ಒಳ್ಳೇಯ ಸ್ನೇಹಿತರ ಮಧ್ಯೆ ಸಣ್ಣ ಪುಟ್ಟ ಮನಸ್ತಾಪಗಳು ಇರುತ್ತವೆ. ಮನಷ್ಯನ ಸಹಜ ಗುಣ. ಎಲ್ಲವನ್ನು ತಿದ್ದುಕೊಂಡು ಹೋಗುವುದು ಮುಖ್ಯ. ಪಕ್ಷದಲ್ಲಿ ನಿಷ್ಟಾವಂತ ಕಾರ್ಯಕರ್ತನಾಗಿ ೪೦ ವರ್ಷಗಳಿಂದ ಕಾರ್ಯಕರ್ತನಾಗಿ ಸೇವೆ ಮಾಡಿರುವುದರಿಂದ, ಪಕ್ಷ ನನಗೆ ಸಿಗಬೇಕಾದಂತಹ ಹಿರಿತನಕ್ಕೆ , ನನ್ನ ಸೇವೆಗೆ, ನನಗೆ ಸಿಗಬೇಕಾದ ಸ್ಥಾನ ಮಾನ ಸಿಗದಿದ್ದರೂ ಸಹ ನಿಷ್ಟಾವಂತನಾಗಿ ಇಂದು ಇರುತ್ತೇನೆ , ಮುಂದೆಯೂ ಇರುತ್ತೇನೆ ನಡೆದುಕೊಳ್ಳುತ್ತೇನೆ.
ಯಾರಿಗೂ ಗೊಂದಲ ಬೇಡ ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಬೇಕು. ಅವರು ಗೆಲ್ಲಬೇಕಾದರೆ ೮ ವಿಧಾನ ಸಭಾ ಕ್ಷೇತ್ರಗಳಲ್ಲಿ ಹೆಚ್ಚ ಮತದಾರರು ಹೆಚ್ಚು ಮತವನ್ನ ನೀಡಬೇಕು ಎಂದು ಮನವಿ ಮಾಡುತ್ತಾ, ಲೋಕಾ ಸಭಾ ಸದಸ್ಯರಾಗಿ ಆಯ್ಕೆ ಆಗಬೇಕು. ನಮ್ಮ ಪಕ್ಷ ರಾಷ್ಟç ಮಟ್ಟದಲ್ಲಿ ಕಷ್ಟದಲ್ಲಿ ಇದೆ ಆಂದರು. ಚುನಾಯಿತ ಪ್ರತಿನಿಧಿಗಳಿಗೆ, ಚುನಾಯಿತ ಸರ್ಕಾರ ನಡೆಸುವ ಪಕ್ಷಕ್ಕೆ ಜನರಲ್ಲಿ ಶಾಂತಿ, ನೆಮ್ಮದಿ ಕೊಡಬೇಕಾಗಿದೆ.
ಕಾಂಗ್ರೆಸ್ ಪಕ್ಷವು ದೇಶದಲ್ಲಿ ಎಲ್ಲ ಜಾತಿ, ಧರ್ಮದವರನ್ನ ಸರಿಸಮಾನವಾಗಿ ನೋಡುತ್ತಿದ್ದವರು. ನಮ್ಮ ದೇಶದಲ್ಲಿ ಎಲ್ಲಾ ವಿಷಯಗಳಲ್ಲಿ ಮುಂದೆ ಹೋಗುತ್ತಿದ್ದೇವೆ, ಜಾತಿ ಧರ್ಮದಲ್ಲಿ ರಾಜಕೀಯ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು?
ಈ ಸಂದರ್ಭದಲ್ಲಿ ಕೋಚಿಮುಲ್ ನಿರ್ದೇಶಕ ಎನ್. ಹನುಮೇಶ್, ದಳಸನೂರು ಎಫ್ಸಿಎಸ್ ಬ್ಯಾಂಕ್ ಅಧ್ಯಕ್ಷ ಡಿ.ಎಸ್ ಶಶಿಕುಮಾರ್, ಕೆಪಿ.ಸಿಸಿ. ಶಿಕ್ಷಕರ ಘಟಕ ದ ಜಿಲ್ಲಾಧ್ಯಕ್ಷ ಕೆ.ಎಚ್.ಸಂಪತ್ ಕುಮಾರ್ ದಳಸನೂರು ಗ್ರಾ.ಪಂ.ಅಧ್ಯಕ್ಷ ಶ್ರೀನಿವಾಸ್, ಮಾಸ್ತೇನ ಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್ ಗ್ರಾ.ಪಂ ಸದಸ್ಯ ಪ್ಯಾರೇಜಾನ್, ಮುಖಂಡರಾದ ಶೆಟ್ಟಿಹಳ್ಳಿ ದೇವಾರಾಜ್, ಶಂಕರಪ್ಪ, ಹೂವುಹಳ್ಳಿ ಶ್ರೀನಿವಾಸ್ , ಚಂದ್ರೇಗೌಡ, ವೆಂಕಟಾಚಲಪತಿ, ಜಗದೀಶ್, ಕುಪ್ಪಹಳ್ಳಿ ನಾಗರಾಜ್ , ತರ್ನಹಳ್ಳಿ ರವಿ, ವೀರಭದ್ರರೆಡ್ಡಿ, ರೋಜರ್ ನಹಳ್ಳಿ ಮುರಳಿ, ಉಪಸ್ಥಿತರಿದ್ದರು