ಸ್ತ್ರೀಶಕ್ತಿ ಸಾಲ ಮನ್ನಾ ಮಾಡುತ್ತೇವೆಂದು ಮಾತು ನೀಡಿ ಮತ ಪಡೆದು ಮನ್ನಾ ಮಾಡದಿದ್ದಕ್ಕೆ ಪ್ರತಿಭಟನೆ

ಕೋಲಾರ, ಜೂ.13: ಪ್ರಜಾಯಾತ್ರೆ ಸಮಾವೇಶಗಳಲ್ಲಿ ಸಾವಿರಾರು ಮಹಿಳೆಯರ ಸಮ್ಮುಖದಲ್ಲಿ ನಮ್ಮ ಪಕ್ಷಕ್ಕೆ ಮಹಿಳೆಯಾದ ನೀವು ಮತ ನೀಡಿದರೆ ಸಹಕಾರ ಬ್ಯಾಂಕ್‍ಗಳಲ್ಲಿ ಪಡೆದಿರುವ ಸ್ತ್ರೀಶಕ್ತಿ ಸಾಲ ಮನ್ನಾ ಮಾಡುತ್ತೇವೆಂಧು ಮಾತು ನೀಡಿ ಮತ ಪಡೆದ ಸಿದ್ದರಾಮಯ್ಯನವರ ಸರ್ಕಾರ ಸ್ತ್ರೀಶಕ್ತಿ ಸಾಲ ಮನ್ನಾ ಮಾಡದೆ ಇರುವುದು ಮಹಿಳೆಯರಿಗೆ ಮಾಡಿದ ದ್ರೋಹವನ್ನು ಖಂಡಿಸಿ ಹೊಸಮಟ್ನಹಳ್ಳಿ ಮತ್ತು ಮಂಗಸಂದ್ರ ಗ್ರಾಮಗಳಲ್ಲಿ ಸ್ತ್ರೀ ಶಕ್ತಿ ಸಂಘಗಳ ಸಾಲ ವಸೂಲಾತಿಗೆ ನಮ್ಮ ಗ್ರಾಮಕ್ಕೆ ಬರಬೇಡಿ ಎಂದು ಬೋರ್ಡ ಹಾಕಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು.

ನಳಿನಿಗೌಡ ಮಾತನಾಡಿ ಸಿದ್ದರಾಮಯ್ಯನವರೇ, ಕೊಟ್ಟ ಮಾತಿನಂತೆ ನಡೆಯುವ ನೀವು ಮಹಿಳೆಯರ ಸ್ತ್ರೀಶಕ್ತಿ ಸಾಲ ಮನ್ನಾ ಮಾಡದಿರಲು ಕಾರಣವೇನು? ಇಡೀ ರಾಜ್ಯದಲ್ಲಿ ಸಹಕಾರ ಸಂಘಗಳಲ್ಲಿ ಪಡೆದಿರುವ ಸಾಲ ಅಹಿಂದ ವರ್ಗದ ಹಾಗೂ ಬಡ ರೈತಾಪಿ ಕುಟುಂಬಗಳ ಹೆಣ್ಣು ಮಕ್ಕಳೇ ಹೊರತು ಶ್ರೀಮಂತರಲ್ಲ ಮಾನ್ಯ  ಸಿದ್ದರಾಮಯ್ಯರವರು  ಅರ್ಥ ಮಾಡಿಕೊಳ್ಳಬೇಕು.
ಸಿದ್ದರಾಮಯ್ಯನವರು ಸಾಲ ಮನ್ನಾ ಮಾಡಲು ರೆಡಿಯಾಗಿದ್ದರೂ ಕೋಲಾರ ಜಿಲ್ಲೆಯ ಕೆಲವೇ ಕೆಲವು ಅಘೋಷಿತ ಕಾಂಗ್ರೆಸ್ ನಾಯಕರು ಮತ್ತು ಸಹಕಾರಿ ಸಂಘಗಳಲ್ಲಿರುವ ಕೆಲವು ವ್ಯಕ್ತಿಗಳು ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡಿದರೆ ಯಾರಿಗೋ ಸಾಲ ಮನ್ನಾ ಮಾಡಿಸಿದ ಕೀರ್ತಿ ಬಂದು ಬಿಡುತ್ತೆ ಎಂಬ ದುರುದ್ದೇಶ ಇಟ್ಟುಕೊಂಡು ಮುಖ್ಯಮಂತ್ರಿಗಳಿಗೆ ಇಲ್ಲಸಲ್ಲದ ದೂರುಗಳನ್ನು ಹೇಳಿಕೊಂಡು ಸಾಲ ಮನ್ನಾ ಮಾಡಿಸದೆ ಇಬ್ಬಾಗಿ ನಿತಿಯನ್ನು ಅನುಸರಿಸುತ್ತಿರುವ ಈ ಮುಖಂಡರ ವರ್ತನೆ ಇದೇ ರೀತಿ ಮುಂದುವರೆದರೆ ಮಹಿಳೆಯರು ಬುದ್ದಿ ಕಲಿಸಬೇಕಾಗುತ್ತದೆ ಎಂದು ಹೆಚ್ಚರಿದರು 
ಮಂಗಸಂದ್ರ ಚೌಡಮ್ಮ ಮಾತನಾಡಿ ನಿಯತ್ತಾಗಿ ಮಾಡಿದ ಸಾಲವನ್ನು ಮರುಪಾವತಿ ಮಾಡುವುದು ನಾವೇ ಆಗಿದ್ದೇವೆ, ಹಾಗೂ ನಿಮ್ಮ ಮಾತಿಗೆ ಬೆಲೆ ಕೊಟ್ಟು ಕಾಂಗ್ರೇಸ್ ಸರ್ಕಾರವನ್ನು ನಮ್ಮ ಎಲ್ಲಾ ಮಹಿಳೆಯರು ಬೆಂಬಲಿಸಿ ಮತ ನೀಡಿ ನಿಮ್ಮನ್ನು ಮುಖ್ಯಮಂತ್ರಿ ಮಾಡಿದ್ದೇವೆ ಎಂಬುದನ್ನು ಮರೆಯಬೇಡಿ ಸಿದ್ದರಾಮಣ್ಣ, ಸಾಲ ಮನ್ನಾ ಆಗುವವರೆಗೂ ನಾವು ಸಾಲ ಕಟ್ಟುವುದಿಲ್ಲ. ಸಹಕಾರಿ ಬ್ಯಾಂಕ್‍ಗಳ ಸಿಬ್ಬಂದಿ ಏನಾದರೂ ಸಾಲ ವಸೂಲಿ ಹೆಸರಿನಲ್ಲಿ ಮಹಿಳೆಯರಾದ ನಮ್ಮ ಮೇಲೆ ಮನೆ ಬಳಿ ಬಂದು ಸಾಲ ಹೆಸರಿನಲ್ಲಿ ದೌರ್ಜನ್ಯ ಮಾಡಿದರೆ ಆಗ ಆಗುವ ಎಲ್ಲಾ ರೀತಿಯ ಅನಾಹುತಗಳಿಗೂ ಮಾನ್ಯ ಸಿದ್ದರಾಮಣ್ಣ ನೀವೇ ಜವಬ್ದಾರಿ ಆಗಿರುತ್ತೀರಿ 
ಸಹಕಾರಿ ಸೊಸೈಟಿ ಮತ್ತು ಬ್ಯಾಂಕ್ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಸಾಲ ವಸೂಲಿ ಹೆಸರಿನಲ್ಲಿ ಮಹಿಳೆಯರಿಗೆ ನಾವು ಕಿರುಕುಳ ನೀಡಿ ವಸೂಲಿ ಮಾಡಲು ಮುಂದಾಗುತ್ತೇವೆ ಎಂಬ ಆಲೋಚನೆ ಇದ್ದರೆ ಬಿಟ್ಟುಬಿಡಿ ಬಲವಂತ ವಸೂಲಿಗೆ ಮುಂದಾದರೆ ಮಹಿಳೆಯರ ನಾರಿ ಶಕ್ತಿ ಏನೂ ಎಂಬುದು ಮಾರಿ ಹಬ್ಬ ಮಾಡುವ ಮೂಲಕ ತಮಗೆ ತೋರಿಸಬೇಕಾಗುತ್ತೇ ಎಚ್ಚರವಿರಲಿ ನಿಮ್ಮ ಸಾಲ ವಸೂಲಿ ಆಗಬೇಕಾದರೆ ಮಾತು ಕೊಟ್ಟು ವೋಟು ಪಡೆದಿರುವ ಮಾನ್ಯ ಸಿದ್ದರಾಮಣ್ಣ ಮತ್ತು ರಾಜ್ಯದ ಕಾಂಗ್ರೇಸ್ ಮುಖಂಡರಿಂದ ವಸೂಲಿ ಮಾಡಿಕೊಳ್ಳಿ ಮನ್ನಾ ಆಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆಂದರು 
ಕೊಟ್ಟ ಮಾತಿನಂತೆ ನಿಮ್ಮ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದೇವೆ ನೀವು ನಮಗೆ ಕೊಟ್ಟ ಮಾತಿನಂತೆ ನಮ್ಮ ಮಹಿಳಾ ಸಾಲವನ್ನು ಮನ್ನಾ ಮಾಡಿ ಕೊಟ್ಟ ಮಾತಿಗೆ ತಪ್ಪದೆ ನಡೆದುಕೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಸಿದರು. 
ಈ ತಿಂಗಳಿನಿಂದ ನಾವು ಸಾಲ ಕಟ್ಟುವುದಿಲ್ಲ , ನೀವು ಕೊಟ್ಟ ಮಾತಿನಂತೆ ಸಾಲ ಮನ್ನಾ ಮಾಡಲೇಬೇಕು ಎಂದು ಹೊಸಮಟ್ನಹಳ್ಳಿ ಮತ್ತು ಮಂಗಸಂದ್ರ ಗ್ರಾಮಗಳ ಸ್ತ್ರೀಶಕ್ತಿ ಸಂಘದ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ  ರತ್ನಮ್ಮ, ಚೌಡಮ್ಮ, ನಳಿನಿ, ಪ್ರಮೀಳಾದೇವಿ, ಮಂಜುಳಾ ಕಾವ್ಯ, ಶಕುಂತಲ, ಶಾರದಮ್ಮ, ಸುರೇಖಾ, ಮುನಿಯಮ್ಮ, ವೆಂಕಟಮ್ಮ, ಸುನಿತಾ, ಸುಧಾ,ಅನಿತಾ, ರಾಮಕ್ಕ, ಪಾರ್ವತಿ,  ಲಕ್ಷಮ್ಮ, ಜಯಲಕ್ಷ್ಮೀ, ಪದ್ಮಮ್ಮ, ರಾಧ, ಶೋಭ, ಮುಂತಾದ ನೂರಾರು ಮಹಿಳಾ ಸಂಘದ ಸದಸ್ಯರು ಇದ್ದರು.