‘ಮೋದಿಗೆ ಮಾಡಲಿಕ್ಕೆ ಇರುವ  ಈ 5 ಕೆಲಸಗಳು ಮಾತ್ರ – ರಾಹುಲ್ ಗಾಂಧಿ ಪಟ್ಟಿ ಟ್ವೀಟ್

JANANUDI.COM NETWORK

ನವದೆಹಲಿ(31-03-2022): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ಬಗ್ಗೆ ಪೆಟ್ರೋಲ್ ಡಿಸೇಲ್. ಗ್ಯಾಸ್ ಸಿಲಿಂಡರ್ ಬೆಲೆಯೇರಿಕೆ ಕುರಿತು ಟೀಕಿಸಿ ಟ್ವೀಟನ್ನು ಮಾಡಿದ್ದು, ಪ್ರಧಾನಿಗೆ ದಿನನಿತ್ಯ ಇರುವುದು 5 ಕೆಲಸ ಎಂದು ಕೆಲ ವಿಚಾರವನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. / ರಾಹುಲ್ ಗಾಂಧಿ ರೋಜ್‌ಸುಬಾಕಿಬಾತ್ ಎಂದು ಹ್ಯಾಶ್ ಟ್ಯಾಗ್ ಹಾಕಿ ಪ್ರಧಾನ ಮಂತ್ರಿಗಳ ದೈನಂದಿನ ಕೆಲಸದ ಪಟ್ಟಿಯನ್ನು ಟ್ವೀಟ್ ಮಾಡಿದ್ದಾರೆ. 1 ನಾನು ಪೆಟ್ರೋಲ್-ಡೀಸೆಲ್-ಗ್ಯಾಸ್ ದರವನ್ನು ಎಷ್ಟು ಹೆಚ್ಚಿಸಬೇಕು?. 2 ಜನರ ‘ಚಾ ಪೇ ಚರ್ಚಾ’ವನ್ನು ಹೇಗೆ ನಿಲ್ಲಿಸಬೇಕು?. 3 ಯುವಕರಿಗೆ ಉದ್ಯೋಗ ಕೊಡದೆ ಸುಳ್ಳು ಕನಸುಗಳನ್ನು ತೋರಿಸುವುದು ಹೇಗೆ?. 4 ನಾನು ಇಂದು ಹೇಗೆ ಸರ್ಕಾರಿ ಕಂಪನಿಯನ್ನು ಮಾರಾಟ ಮಾಡಲಿ ?. 5 ರೈತರನ್ನು ಹೆಚ್ಚು ಅಸಹಾಯಕರನ್ನಾಗಿ ಮಾಡುವುದು ಹೇಗೆ?. ಎಂದು ಟ್ವೀಟ್ ಮಾಡಿದ್ದಾರೆ.