ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಮರ ; ಸಾಧನೆ ಎಂಬುವುದು ಸಾಧಕರ ಸ್ವತ್ತು ಸೋಮಾರಿಯ ಸ್ವತ್ತಲ್ಲ . ಪ್ರಜಾಪ್ರಭುತ್ವದಲ್ಲಿ 4 ಅಂಗಗಳಲ್ಲಿ ಪತ್ರಿಕಾ ರಂಗವೂ ಒಂದಾಗಿದೆ . ಶಾಸಕಾಂಗ , ಕಾರ್ಯಾಂಗ , ನ್ಯಾಯಾಂಗ ಈ ಮೂರು ಅಂಗಗಳನ್ನು ಮೀರಿ ಸತ್ವ ಮತ್ತು ಶಕ್ತಿ ಇರುವ ಯಾವುದಾದರೂ ಒಂದು ಸಂಸ್ಥೆ ಇದೆ ಅಂದರೆ ಅದು ಪತ್ರಿಕಾ ಸಂಸ್ಥೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ || ವೈ.ಎ. ನಾರಾಯಣಸ್ವಾಮಿ ತಿಳಿಸಿದರು . ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ದತ್ತಿನಿಧಿಯ ಸಂಘದ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿರುವ ಶ್ರೀನಿವಾಸಪುರದ ಹಿರಿಯ ಪತ್ರಕರ್ತ ಮುನಿವೆಂಕಟೇಗೌಡರವರನ್ನು ಅಭಿನಂಧಿಸಿ ಮಾತನಾಡಿದ ಅವರು ಪತ್ರಿಕಾ ರಂಗದಲ್ಲಿ ಇದು ವಿಶೇಷ ಅಧ್ಯಯನ ಮತ್ತು ಅಭ್ಯಾಸ ಮಾಡಿ ಮತ್ತಷ್ಟು ಪ್ರಶಸ್ತಿಗಳನ್ನು ಪಡೆಯಲಿ ಎಂದು ಶುಭ ಹಾರೈಸಿದರಲ್ಲದೆ ತಾಲೂಕಿನ ಹಿರಿಮೆ – ಗರಿಮೆಯನ್ನು ಹೆಚ್ಚಿಸಲಿ ಎಂದು ಸಿದರು . ಮುಂದಿನ ದಿನಮಾನಗಳಲ್ಲಿ ಮುನಿವೆಂಕಟೇಗೌಡರಂತೆ ಈ ತಾಲೂಕಿನ ಎಲ್ಲ ಪತ್ರಕರ್ತರು ಹತ್ತು ಹಲವಾರು ಪ್ರಶಸ್ತಿಗಳಿಗೆ ಮತ್ತು ಗೌರವಗಳಿಗೆ , ಸಾಧನೆಗಳ ಸರದಾರರಾಗಿ ಹೊರಹೊಮ್ಮಬೇಕು . ನಿಮ್ಮಲ್ಲಿ ಶಕ್ತಿ ಮತ್ತು ವಿದ್ವತ್ ಇದೆ . ಶಿಸ್ತು ಮತ್ತು ಸಂಯಮ ಮತ್ತು ಜವಾಬ್ದಾರಿಯನ್ನು ಜಾಸ್ತಿ ಮೈಗೂಡಿಸಿಕೊಂಡಾಗ ಎಲ್ಲ ಪ್ರಶಸ್ತಿಗಳು ಹುಡುಕಿಕೊಂಡು ಬರಲು ಸಾಧ್ಯ ಹಾಗೆಯೇ ಇನ್ನು ಹೆಚ್ಚಿನ ಪ್ರಶಸ್ತಿಗಳು ನಮ್ಮ ತಾಲೂಕಿಗೆ ಹರಿದು ಬರಲಿ ಎಂದು ಆಶಯವನ್ನು ವ್ಯಕ್ತಪಡಿಸಿದರು . ಅಕ್ಟೋಬರ್ 21 ರಿಂದ ಶಾಲೆಗಳು ಪ್ರಾರಂಭಗೊಳ್ಳುತ್ತವೆ . ಕೊವಿಡ್ ಮೂರನೇ ಹಂತ ಬರುವುದಿಲ್ಲ ಎಂಬ ವಿಶ್ವಾಸ ನನಗಿದೆ . ಸರ್ಕಾರಕ್ಕೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುವುದೇನೆಂದರೆ ಎರಡು ವರ್ಷಗಳ ಕಾಲ ಸರ್ಕಾರಕ್ಕೆ ಬರುವ ಸಿ.ಎಸ್.ಆರ್ . ಅಡಿಯಲ್ಲಿ ಬರುವ ಕಾರ್ಪೋರೇಟ್ಗಳ ಹಣ ಬರಿ ಸರ್ಕಾರಿ ಶಾಲೆಗಳು ಅಭಿವೃದ್ಧಿಪಡಿಸಲು ಮಾತ್ರ ಚಿಂತನೆ ಮಾಡಬೇಕು . ಆಗ ಶಿಕ್ಷಣ ರಂಗದಲ್ಲಿ ಕ್ರಾಂತಿ ಮೂಡುತ್ತದೆ . ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಎಂದರಲ್ಲದೆ ಹೊಸ ಶಿಕ್ಷಣ ಪದ್ಧತಿ ಜಾರಿಗೆ ಬರುತ್ತಿದೆ . ಈ ವರ್ಷ ಅದಕ್ಕೆ ಸಹಕಾರ ಮಾಡಬೇಕು ಎಂದು ಮನವಿ ಮಾಡಿದರು .
ಈ ಸಂಧರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಕೆ.ಕೆ. ಮಂಜು , ದಲಿತ ಮುಖಂಡ ಚಲಿಗಾನಹಳ್ಳಿ ಮುನಿವೆಂಕಟಪ್ಪ , ಕಲ್ಲೂರು ರತ್ನಪ್ಪ , ಜಿಲ್ಲಾ ಪತ್ರಕರ್ತ ಸಂಘದ ಕಾರ್ಯದರ್ಶಿ ಶಬೀರ್ ಅಹಮದ್ , ತಾಲ್ಲೂಕು ಹಿಂದುಳಿದ ವರ್ಗಗಳ ಅಧ್ಯಕ್ಷ ಎಸ್ . ವೇಣುಗೋಪಾಲ್ , ತಾಲ್ಲೂಕು ಪತ್ರಕರ್ತ ಸಂಘದ ಉಪಾಧ್ಯಕ್ಷರಾದ ಹೆಚ್ . ರಮೇಶ್ , ಕೃಷ್ಣಮೂರ್ತಿ , ಖಜಾಂಚಿ ಆ . ಬಾಬು ಸೇರಿದಂತೆ ಪತ್ರಕರ್ತರು ಉಪಸ್ಥಿತರಿದ್ದರು ..