

ಶ್ರೀನಿವಾಸಪುರ : ಕ್ರೀಡೆಗಳಲ್ಲಿ ದ್ವೇಷ, ಅಸೂಯೆ, ಸೇಡು ಎಂಬುವುದೇ ಇಲ್ಲ, ಬದಲಾಗಿ ಪರಸ್ಪರ ಪ್ರೀತಿ , ಒಗ್ಗಟಿನ ಬಲ ,ಏಕಾಗ್ರತೆ ,ಕ್ರೀಯಾಶೀಲತೆ , ಬುದ್ದಿವಂತಿಕೆಯನ್ನು ಚುರುಕುಗೊಳಿಸುವಂತಹ ಶಕ್ತಿ ತುಂಬಿವೆ ಎಂದು ನೆಲವಂಕಿ ಗ್ರಾ.ಪಂ ಪಿಡಿಒ ವಿ.ಚಂದ್ರಶೇಖರ್ ಹೇಳಿದರು.
ತಾಲೂಕಿನ ಲಕ್ಷೀಪುರ ಕ್ರಾಸ್ನ ಮಿನರ್ವ ವಿದ್ಯಾಮಂದಿರದಲ್ಲಿ ಸೋಮವಾರ ನೆಲವಂಕಿ ಗ್ರಾಮಪಂಚಾಯಿತಿ ಮಟ್ಟದ 2024 25 ನೇ ಸಾಲಿನ ಕ್ರೀಡಾಕೂಟವನ್ನು ಉದ್ಗಾಟಿಸಿ ಮಾತನಾಡಿದರು.
ಕ್ಲಸ್ಟರ್ ಸಿಆಆರ್ಪಿ ಟಿ.ವಿ.ನಟರಾಜ್ ರವರ ನೇತೃತ್ವದಲ್ಲಿ ನಡೆಸಲಾಯಿತು ಕ್ರೀಡಾಕೂಟದಲ್ಲಿ ಕ್ಲಸ್ಟರ್ ವ್ಯಾಪ್ತಿಯ ಐದು ಪ್ರಾಥಮಿಕ ಶಾಲಾ ಮಕ್ಕಳು ಭಾಗವಹಿಸಿ ವಿವಿಧ ಆಟೋಟ ಗಳಲ್ಲಿ ಸ್ಪರ್ಧಿಸಿ ಬಹುಮಾನಗಳಿಸಿದರು. ಶಿಕ್ಷಣ ಸಂಯೋಜಿಕರಾದ ಜಿಎನ್ ಕೋದಂಡಪ್ಪ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.