ಕೋಲಾರ,ಅ.30: ಹಿಂದಿನ ದಿನಕ್ಕಿಂತ ನಾಳೆಯೇ ಲೇಸು ಎಂಬ ನುಡಿಯು ಅರ್ಥಪೂರ್ಣವಾಗಿದೆ. ವ್ಯಕ್ತಿತ್ವ ವಿಕಸನಕ್ಕೆ ಅರೋಗ್ಯಕರ ಮನಸ್ಸು ಅಗತ್ಯವಿದೆ. ಭಾಷೆಗೂ ಭಾವನೆಗೂ ಅವಿನಭಾಜ್ಯ ಸಂಬಂಧವಿದೆ. ಕನ್ನಡ ಭಾಷೆ ಸಂವಾಹನ ಅಭಿವ್ಯಕ್ತವಾಗುತ್ತಿದೆ ಎಂದು ಡಾ. ಕೆ.ರಾಜಕುಮಾರ್ ಅಭಿಪ್ರಾಯಪಟ್ಟರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕೋಲಾರದ ಅಂತರಗಂಗೆ ರಸ್ತೆಯ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಸಲುವಾಗಿ ಕನ್ನಡ ಪರಿಚಾರಕ-2024 ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿ, ಕನ್ನಡ ಪರಿಚಾರಕ ಎಂಬುವುದಕ್ಕಿಂತ ನುಡಿ ಪರಿಚಾರಕ ಎಂಬುವುದು ಸೂಕ್ತವಾಗಿದೆ ಎಂದು ಸಲಹೆ ನೀಡಿದರು.
ಭಾಷೆ ಎಂಬುವುದು ಭಾವನೆಗೆ ಸಂಬಂಧಿಸಿದ್ದಾಗಿದೆ. ಕನ್ನಡಕ್ಕೆ ಅನೇಕ ಸಮಸ್ಯೆಗಳು ಎದುರಾಗಿದ್ದು ಎಳೆಯ ತಲೆಮಾರುಗಳಲ್ಲಿ ಕನ್ನಡವನ್ನು ಕಡಿದು ಹಾಕುತ್ತಿದೆ. ಆಂಗ್ಲಮಾಧ್ಯಮದಲ್ಲಿ ಪ್ರಾರಂಭಿಕ ಶಿಕ್ಷಣ ಕ್ರಮ ಒತ್ತು ನೀಡುತ್ತಿರುವುದು ಅಪಾಯಕಾರಿಯಾಗಿದೆ. ಕನ್ನಡಭಾಷೆಯಲ್ಲಿ ಪ್ರಾಥಮಿಕ ಹಂತದವರೆಗೆ ಕಡ್ಡಾಯವಾಗ ಬೇಕೆಂಬ ಮನವಿಯಲ್ಲಿ ಉಂಟಾದ ಒಂದು ಪದದ ವ್ಯತ್ಯಾಸದಿಂದಾದಾಗ ಕಡ್ಡಾಯದ ಆದೇಶವು ಕೊಚ್ಚಿ ಹೋಯಿತು ೪ನೇ ತರಗತಿ ಬದಲಾಗಿ ೫ನೇ ತರಗತಿವರೆಗೆ ಎಂದಿದ್ದರಿಂದ ಅದೇಶವನ್ನು ತಿರಸ್ಕರಿಸಲಾಯಿತು ಕೇಂದ್ರ ಸರ್ಕಾರವು 1ರಿಂದ 4 ವರೆಗೆ ಕನ್ನಡ ಕಡ್ಡಾಯ ಜಾರಿಗೆ ತರುವಂತಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಾವು ಪತ್ರಿಕಾ ಕ್ಷೇತ್ರಕ್ಕೆ ಬರಲು ಅಂದಿನ ಸಮಸ್ಯೆಗಳನ್ನು (1978) ತಾವು ಬರೆದ ಸುದ್ದಿ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ನನಗೆ ಪ್ರೇರಣೆ ಉಂಟಾಯಿತು. 1969 ಚಲನ ಚಿತ್ರದ ಸಮೀಕ್ಷೆಯ ವಿಸ್ಕೃತ ವರದಿಯು ಧಾರವಾಹಿ ಮಾದರಿಯಲ್ಲಿ ಪ್ರಕಟಗೊಂಡಿತು, ನಂತರ ತಾವು ಜಿಲ್ಲಾ ವಿವಿಧ ಪತ್ರಿಕೆಗಳಲ್ಲಿ ಹಾಗೂ ತಾವು ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ ಸಂದರ್ಭಗಳನ್ನು ಮೆಲುಕು ಹಾಕಿದರು.
ದೃಶ್ಯ ಮಾದ್ಯಮಗಳಿಗಿಂತ ಮುದ್ರಣ ಮಾಧ್ಯಮಗಳು ಪರಿಣಾಮಕಾರಿಯಾಗಿದೆ. ಸಮಾಜದ ಸಮಸ್ಯೆಗಳನ್ನು ಮಾದ್ಯಮಗಳು ಎತ್ತಿ ಹಿಡಿದು ಪರಿಹರಿಸಿದಾಗ ಮಾತ್ರ ಸಾರ್ಥಕತೆ ಕಾಣಲು ಸಾಧ್ಯ. ಅದರೆ ಇಂದಿನ ಡಿಜಿಟಲ್ ಯುಗದಲ್ಲಿ ಪತ್ರಿಕೆಗಳು ಎಷ್ಟು ವರ್ಷ ಉಳಿವು ಸಾಧ್ಯ ಎಂಬ ಚಿಂತನೆಯನ್ನು ಕಾಣುವಂತಾಗಿದೆ ಎಂಬ ಕಳವಳ ವ್ಯಕ್ತಪಡಿಸಿದರು.
ಸ್ನೇಹವು ನಿತ್ಯ ಸತ್ಯ ಎಂಬುವುದಕ್ಕೆ ತಾವು ಅನಾರೋಗ್ಯಕ್ಕೆ ಒಳಗಾದ ಸಂದರ್ಭದಲ್ಲಿ ವಿವಿದ ಕರೆಯಿಂದ ಬಾಲ್ಯ ಸ್ನೇಹಿತರು ಭೇಟಿಯಾಗಿದ್ದು ನನ್ನ ಅರೋಗ್ಯಕ್ಕೆ ಉತ್ತೇಜೇನ ಬಂದು ಬೇಗ ಗುಣಮುಖನಾದೆ ಕನ್ನಡದ ಕೆಲಸಗಳು ಮಾಡಲು ಹೆಚ್ಚು ಪ್ರೇರಣೆ ನೀಡಿತು, ಗೋಕಾಕ್ ಚಳುವಳಿಯಲ್ಲಿ ಡಾ. ರಾಜಕುಮಾರ್ ಅವರಿಗೆ ಗೋಕಾಕ್ ಸಮರ್ಪವಾಗಿ ಮಾಹಿತಿಯ ಅರಿವು ನೀಡಿದ್ದು, ಸರೋಜಿನಿ ಮಹಿಷಿ ಹೋರಾಟ, ನ್ಯಾಯಮೂರ್ತಿ ಸಂತೋಷ ಹೆಗಡೆ ಸಂವಾದದಲ್ಲಿ ನ್ಯಾಯಮೂರ್ತಿಗಳ ಪ್ರಶ್ನೆಗಳಿಗೆ ನೆರವು ನೀಡಿದ್ದ ಸಂದರ್ಭಗಳನ್ನು ನೆನಪಿಸಿದರು.
ಭಾಷಾ ವಿಷಯದಲ್ಲಿ ಆಲ್ಪಸಂಖ್ಯಾತರು ಹಾಲಿನ ಕಲ್ಲಾಗದೆ ಕಲ್ಲು ಸಕ್ಕರೆಯಾಗಬೇಕು ಭಾಷಾ ಸಾಮರಸ್ಯ ಕೋಮು ಸಾಮರಸ್ಯಗಳಿಗೆ ನಮ್ಮ ಸುಲೇಮಾನ್ ಖಾನ್, ಗೌರಿಪೇಟೆಯಲ್ಲಿ ಬೆಮೆಲ್ ನೌಕರ ದಿ. ತಾಜ್ ಪೀರ್ ಇವರ ಭಾಷೆ ಉರ್ದು ಅಗಿದ್ದರೂ ಅಪಾರವಾದ ಕನ್ನಡ ಪ್ರೇಮಿಗಳಾಗಿದ್ದು ತಮ್ಮ ಕುಟುಂಬಕ್ಕಿಂತ ಹೆಚ್ಚಾಗಿ ನಾಡು ನುಡಿಯನ್ನು ಪ್ರೀತಿಸುವವರು ಆಗಿದ್ದರು ಎಂದು ನೆನಪಿಸಿಕೊಂಡ ಅವರು ಕನ್ನಡ ಸಾಮರಸ್ಯ ನಿತ್ಯ ನಿರಂತರವಾಗಿದ್ದರು ಪರಿಹಾರ ಕಾರ್ಯಗಳು ರಾಷ್ಟ್ರೀಯ ಹೆದ್ದಾರಿಯಂತಿರಬೇಕು ಎಂದು ಅಭಿಪ್ರಾಯಪಟ್ಟರು.
ಕೋಲಾರ ಜಿಲ್ಲೆಯು ಬಂಗಾರ ನೆಲದಲ್ಲಿನ ಚಿನ್ನವು ಬಹುತೇಕ ಲಂಡನ್ಗೆ ಹೋಗಿದೆ. ರಾಜ್ಯದಲ್ಲಿ ೬೨ ಕಡೆ ಚಿನ್ನದ ನಿಕ್ಷೇಪಗಳು ಗದಗ್ ಸೇರಿದಂತೆ ವಿವಿಧಡೆ ಇದೆಯೆಂದು ಸಂಶೋಧನ ವರದಿಗಳು ತಿಳಿಸಿದೆ. ಇದರ ಜೂತೆಗೆ ಗಂಧದ ನಾಡು ಸೇರಿದಂತೆ ಬೌಗೋಳಿಕವಾದ ವಿಸ್ಮಯಗಳು ನಮ್ಮ ರಾಜ್ಯದಲ್ಲಿ ಕಂಡು ಬರುತ್ತದೆ ಎಂದ ಅವರು ಜ್ಞಾನ ಪೀಠ ಪ್ರಶಸ್ತಿಗಳು ಅಧುನಿಕ ಶ್ರೀಮಂತಿಕೆ ಅಳೆಯುವ ಅಳತೆಗೋಲು ಅಗಿದೆ ಎಂದರು.
ಆಡಳಿತದಲ್ಲಿ ಕನ್ನಡ, ಕಾನೂನುಗಳಲ್ಲಿ ಕನ್ನಡ, ಭಾಷ ದೋಷಗಳಿಗೆ, ಸ್ವಷ್ಟವಾದ ಕನ್ನಡಕ್ಕಾಗಿ ಅನೇಕ ಕಮ್ಮಟಗಳನ್ನು ನಡೆಸಿದೆ. ಪತ್ರಕರ್ತರ ಸಂಘದಲ್ಲೂ ತರಭೇತಿಯನ್ನು ನೀಡಿದೆ. ನಿರ್ಭಾಗ್ಯ ಪ್ರಶಸ್ತಿಗಳು ಬೇಡಾ ಸೌಭಾಗ್ಯ ಪ್ರಶಸ್ತಿಗಳನ್ನು ಪಡೆಯುವಂತಾಗಬೇಕು ರೋಲ್ ಮಾಡಲ್ ವ್ಯಕ್ತಿಗಳನ್ನು ಗುರುತಿಸುವಂತಾಗಬೇಕು ಎಂದು ಕಿವಿ ಮಾತು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಿಜ ಪರಿಚಾರಕ ಆರ್ಹರಿಗೆ ಪ್ರಶಸ್ತಿಗಳು ತಲುಪಿದಾಗ ಮಾತ್ರ ಸಾರ್ಥಕವಾಗುತ್ತದೆ ಎಂದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿಯೇ ಮೈಸೂರು ಚಲೋ, ಭಾಷ್ಯವಾರು ಪ್ರಾಂತ್ಯಗಳ ವಿಂಗಡಣೆ, ಬಾರಿಸು ಕನ್ನಡ ಡಿಂ.ಡಿಂವ, ಉದಯವಾಗಲಿ ಕನ್ನಡ ನಾಡು, ಕಾಳಿಂಗರಾಯರ ಉದಯವಾಯಿತು ಕನ್ನಡ ನಾಡು ಎಂಬ ಹಾಡುಗಳ ರಚಿಸಿ ಸಂಘಟನೆ ಮಾಡಲಾಯಿತು, 1956ರ ಏಕೀಕರಣ, 1973ರಲ್ಲಿ ಮೈಸೂರು ಕರ್ನಾಟಕವಾಗಿ ನಾಮಕರಣ, ಚನ್ನವೀರ ಕಣವಿಯ ಕರ್ನಾಟಕ ಉಸಿರಾಯಿತು ಎಂಬ ಗೀತೆಗಳ ರಚನೆಯ ಮೂಲಕ ಕನ್ನಡಿಗರನ್ನು ನಾಡು ನುಡಿಗಳ ಕುರಿತು ಪ್ರೇರೇಪಿಸಿದರು ಎಂದರು.
ವಿ.ಕೃ ಗೋಕಾಕ್ ಅವರ ಗೋಕಾಕ್ ವರದಿ ಜಾರಿಯ ಬೃಹತ್ ಚಳುವಳಿಯಲ್ಲಿ ಗೋಕಾಕ್ ಅವರು ಮರೆತ ಕೆಲವು ಅಂಶಗಳನ್ನು ಕೋಲಾರದ ಕೆ. ರಾಜಕುಮಾರ್ ಅವರು ಪುನರ್ ಮನನ ಮಾಡಿಸಿದರು, ಚಿತ್ರ ನಟ ಡಾ.ರಾಜ್ ಕುಮಾರ್ ಅವರಿಗೆ ಗೋಕಾಕ್ ವರದಿಯ ಮಾಹಿತಿ ಮನನ ಮಾಡಿಸಿದರು. ಸಂತೋಷ್ ಹೆಗಡೆ ಅವರಿಗೆ ನ್ಯಾಯಾಲಯದಲ್ಲಿ ಗೋಕಾಕ್ ವರದಿ ಮಂಡನೆಗೆ ನೀಡಿದ ಸಹಕಾರ ಸಾಹಿತ್ಯ ಕ್ಷೇತ್ರದಲ್ಲಿ ಗೌರವ ಕಾರ್ಯದರ್ಶಿಯಾಗಿ ಸಲ್ಲಿಸಿದ ಸೇವೆ, ಕ.ಸಾ.ಪ ಪತ್ರಿಕೆಯ ಗೌರವ ಸಂಪಾದಕರಾಗಿ ಸಲ್ಲಿಸಿದ ಸೇವೆಗಳನ್ನು ಮತ್ತು ನಿವೃತ್ತ ಶಿಕ್ಷಕ ಸುಲೇಮಾನ್ ಖಾನ್ ಅವರು ಭಾವಗೀತೆಗಳು ಕನ್ನಡ ಕಾರ್ಯಕ್ರಮಗಳಲ್ಲಿ ಸ್ವಯಂ ಪ್ರೇರಿತರಾಗಿ ಸಲ್ಲಿಸುತ್ತಿದ್ದ ಸೇವೆಯು ಕನ್ನಡದ ನಿಜ ಪರಿಚರತ್ವಗಳಿಗೆ ಮಾದರಿಯಾಗಿದ್ದರು ಎಂದು ಶ್ಲಾಘಿಸಿದರು.
ಎಲ್ಲರೂ ಕನ್ನಡದ ಸೇವೆಗೆ ಕೈ ಜೋಡಿಸುವಂತಾಗ ಬೇಕು ಆಗಾ ಮಾತ್ರ ಕನ್ನಡದ ಬೆಳವಣಿಗೆ ಮತ್ತಷ್ಟು ಬೆಳೆಯಲು ಪೂರಕವಾಗಲಿದೆ. ಜೆ.ಪಿ.ರಾಜರತ್ನಂ ಅವರ ಹೆಂಡ ಹೋಗಲಿ, ಹೆಂಡತಿ ಹೋಗಲಿ,,,,, ಎಂಬ ಗೀತೆಯು ಕನ್ನಡದ ಮೇಲಿನ ಅಪಾರವಾದ ಅಭಿಮಾನವನ್ನು ವ್ಯಕ್ತಪಡಿಸುತ್ತದೆ ಎಂದ ಅವರು ಪ್ರತಿ ವರ್ಷ ಕನ್ನಡ ಪರಿಚರಕರನ್ನು ಗುರುತಿಸಿ ಅಭಿನಂದಿಸುವುದು ಕನ್ನಡ ಸೇವೆಗೆ ಪ್ರೇರಣೆ ನೀಡಿದಂತಾಗುವುದು ಇಂಥಹ ಕಾರ್ಯಕ್ರಮಗಳು ಎಲ್ಲಾ ಕನ್ನಡ ಪರ ಸಂಘಟನೆಗಳಿಗೆ ಮಾದರಿಯಾಗಲಿ ಎಂದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದ 2ನೇ ವರ್ಷದ ಕನ್ನಡ ಪರಿಚಾರಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವಾಗಿದ್ದು ಮೊದಲ ವರ್ಷದಲ್ಲಿ ಕನ್ನಡ ಪರಿಚಾರಕರಾದ ಸುರೇಶ್ ಹಾಗೂ ರಮೇಶ್ ಎಂಬ ಮುಗ್ದರಿಗೆ ನೀಡಲಾಯಿತು, ಕನ್ನಡದ ಅಭಿಮಾನವು ಸ್ವಯಂ ಪ್ರೇರಿತವಾಗಿ ಇರುವಂತ ಅಭಿಮಾನ, ಅಂತರಾತ್ಮದಲ್ಲಿರುವ ಅಭಿಮಾನ ಇರುವಂತ ನಿಜವಾದ ಕನ್ನಡ ಪ್ರೇಮಿಗಳು, ಇಂತಹ ಎಲೆ ಮರೆಯ ಕಾಯಂತೆ ಸೇವೆ ಸಲ್ಲಿಸುತ್ತಿರುವವರನ್ನು ನಮ್ಮ ಸಂಘ ಸಂಘದ ಅಧ್ಯಕ್ಷರು ಗುರುತಿಸಿ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ಸಾಧಕರನ್ನು ಪ್ರಶಸ್ತಿಗಳು ಹುಡುಕಿಕೊಂಡು ಹೋಗುತ್ತದೆ ಎಂಬುವುದಕ್ಕೆ ಡಾ. ಕೆ.ರಾಜಕುಮಾರ್ ಹಾಗೂ ನಿವೃತ್ತ ಶಿಕ್ಷಕ ಸುಲೇಮಾನ್ ಖಾನ್ ಅವರಾಗಿದ್ದಾರೆ. ಡಾ.ರಾಜಕುಮಾರ್ ಅವರು ಲೇಖಕರು, ಕನ್ನಡದ ಚಿಂತಕರು, ಕನ್ನಡದ ಭೋದಕರು, ವಿಮರ್ಶಕರು, ಅಧ್ಯಾಯನಶೀಲರು ಶಗಿದ್ದು ರಾಜ್ಯದ ಕಾರ್ಯಾಂಗದ ಐ.ಎ.ಎಸ್. ಅಧಿಕಾರಿಗಳಿಗೆ ಆಡಳಿತದಲ್ಲಿ ಕನ್ನಡವನ್ನು ತರಭೇತಿ ನೀಡುವವರು ಅಗಿದ್ದಾರೆ. ಇಂಥಹವರು ನಮ್ಮ ಕೋಲಾರದ ಕೆ. ರಾಜಕುಮಾರ್ ಎಂಬುವುದಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದ ಅವರು, ಕೋಲಾರದ ರಾಜ್ಯೋತ್ಸವವು ಹಿಂದಿನ ವೈಭವಕ್ಕೆ ಮರಳುವಂತಾಗಿ ಎರಡನೇ ದಸರಾ ಎಂಬ ಕೀರ್ತಿಗೆ ಪಾತ್ರವಾಗಬೇಕೆಂದು ಆಶಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದ ಎಲೆ ಮರೆಯ ಕಾಯಂತೆ ಇರುವವರನ್ನು ಬೆಳಕಿಗೆ ತಂದು ಪೋತ್ಸಾಹಿಸುವುದು ಪತ್ರಕರ್ತರ ಜವಾಬ್ದಾರಿಯಾಗಿದೆ. ಕೆ.ಜಿ.ಎಫ್.ನಲ್ಲಿ ಬೆಮೆಲ್ ಕಾರ್ಖಾನೆಯಾಗದಿದ್ದರೆ ಕನ್ನಡ ಎಂಬುವುದು ಆ ಪ್ರದೇಶದಲ್ಲಿ ಕಾಣಲು ಸಾಧ್ಯವಾಗುತ್ತಿರಲಿಲ್ಲ. ಕನ್ನಡದ ಬೆಳವಣಿಗೆಗೆ ಗೋಕಾಕ್ ಚಳುವಳಿ ಪ್ರೇರಣಿ. ಚಂಪಾ, ಪಾಟೀಲ್ ಪುಟ್ಟಪ್ಪ ಜೊತೆ ಡಾ.ರಾಜಕುಮಾರ್ ಕೈ ಜೋಡಿಸಿದ್ದು ಕನ್ನಡದ ಚಳುವಳಿಗೆ ಪ್ರೇರಣಿಯಾಗಿ ಪರಿಣಾಮಕಾರಿಯಾಯಿತು. ಸರ್ಕಾರ ಕನ್ನಡ ರಾಜ್ಯೋತ್ಸವ ಕಡ್ಡಾಯವೆಂದು ಘೋಷಿಸಿದೆ. ಕನ್ನಡ ಪರಿಚಾರಕರು, ಕಟ್ಟಾಳುಗಳು ಸಂಖ್ಯೆ ಹೆಚ್ಚಾಗಬೇಕು ಎಂದು ಕರೆ ನೀಡಿದರು.
ರಾಜ್ಯ ಪತ್ರಕರ್ತರ ಸಂಘದ ಖಜಾಂಚಿ ಎಂ.ವಾಸುದೇವಹೊಳ್ಳ, ಡಾ.ರಾಜಕುಮಾರ್ ಅವರ ಗೆಳೆಯರ ಬಳಗದ ಡಾ.ಜಯರಾಂ. ಪ್ರಸನ್ನಕುಮಾರ್, ಕೆ.ವಿ.ನಂಜಾಮರಿ, ಮುರಳಿ ಮುಂತಾದವರು ಮಾತನಾಡಿ, ಡಾ.ರಾಜಕುಮಾರ್ ಅವರೊಂದಿಗಿನ ನೆನಪುಗಳನ್ನು ಬಿಚ್ಚಿಟ್ಟರು.
ಕೋ.ನಾಪ್ರಭಾಕರ್ ಪ್ರಾರ್ಥಿಸಿ, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಸ್ವಾಗತಿಸಿ, ಖಜಾಂಚಿ ಎ.ಜಿ.ಸುರೇಶ್ ಕುಮಾರ್ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಕೆ.ರಾಜಕುಮಾರ್ ಅವರ ಗೆಳೆಯರು, ಎಲ್ಲಾ ಪತ್ರಕರ್ತರು ಉಪಸ್ಥಿತರಿದ್ದರು.