ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ : ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಮುಂದಿನ 15 ವರ್ಷಗಳಲ್ಲಿ ಮಾನವೀಯ ಮೌಲ್ಯಗಳನ್ನು ತುಂಬುವ ಕಾರ್ಯ ನಡೆಯಬೇಕಿದೆ . ಇದಕ್ಕಾಗಿ ಪ್ರತಿ ವ್ಯಕ್ತಿಯ ಮನಗಳಲ್ಲಿ , ಮನೆಗಳಲ್ಲಿ , ಮತಗಳಲ್ಲಿ ಬದಲಾವಣೆ ಆಗಲೇ ಬೇಕಿದೆ ಈ ಕಾರ್ಯಕ್ಕೆ ನಮ್ಮಲ್ಲರಲ್ಲೂ ಸಣ್ಣ ಬದಲಾವಣೆ ಮಾಡಿಕೊಳ್ಳಲೇಬೇಕಿದೆ ಎಂದು ಬರಹಗಾರ , ಚಿಂತಕ , ಹೆಚ್.ಕೆ. ವಿವೇಕಾನಂದ ಹೇಳಿದರು .
ಮಾನವೀಯ ಮೌಲ್ಯಗಳ ಜಾಗೃತಿ ಹಾಗೂ ಪುನರುತ್ಥಾನ ಜ್ಞಾನ ಬಿಕ್ಷ ಪಾದಯಾತ್ರೆ ಮೂಲಕ 10520 ಕಿ.ಮೀ. ಕಾಲ್ನಡಿಗೆ ಜಾಥ ಮೂಲಕ 352 ನೇ ದಿನ ಶ್ರೀನಿವಾಸಪುರಕ್ಕೆ ಆಗಮಿಸಿ ಕರ್ನಾಟಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿ ಗಳೆಯರ ಬಳಗದಿಂದ ಏರ್ಪಡಿಸಿದ್ದ , ಸನ್ಮಾನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಿವೇಕಾನಂದ ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ತುಂಬುವ ಕೆಲಸ ಆಗಲೇ ಬೇಕಾಗಿದೆ . ಈ ದೇಶದಲ್ಲಿ ಆಡಳಿತ ಅಭಿವೃದ್ಧಿಯಾಗಿದೆ . ಚಂದ್ರಲೋಕದವರಿಗೂ ತೆರಳುವ ಆಧ್ಯಾಯನವಾಗಿದೆ . ಹೇರ್‌ಸ್ಟೈಲ್ ಬಗ್ಗೆಯು ಅದ್ಯಾಯನ ನಾಡುವ ಡಿಪ್ಲೋಮಾ ಪದವಿಗಳು ಬಂದಿವೆ ಇಷ್ಟೆ ಅಲ್ಲ ಅನೇಕ ಸಂಶೋದನೆಗಳು , ತಾಂತ್ರಿಕತೆಗಳೂ ಬಂದಿವೆ ಅಗಿದ್ದರೂ ಮಾನವನು ಖುಷಿಯಾಗಿದ್ದಾನ ? ಎನ್ನುವ ಪ್ರಶ್ನೆ ಹಾಕಿಕೊಳ್ಳಬೇಕಾಗಿದೆ . ಮಾನವೀಯ ಮೌಲ್ಯ ಕಳೆದುಕೊಳ್ಳುತ್ತೀರುವುದೆ ಇಂದಿನ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ . ಈಗ ಇದಕ್ಕೆಲ್ಲಾ ಕಾರಣ ಹುಡಿಕಿ ಸರಿಪಡಿಸಬೇಕಾಗಿದೆ . ಈ ಜವಬ್ದಾರಿ ನಮ್ಮ ಮೇಲಿದೆ ಮುಂದಿನ 15 ವರ್ಷಗಳಿಗೆ ಈ ವ್ಯವಸ್ಥೆ ಸರಿಪಡಿಸಬೇಕಾಗಿದೆ ಎಂದರು .
ಸಾಮಾಜಿಕ ಮೌಲ್ಯಗಳನ್ನು ಮುಂದಿನ ಜನಾಂಗಕ್ಕೆ ತಲುಪಿಸಿ ಪುನರ್ ಸ್ಥಾಪಿಸುವ ಅಗತ್ಯವಿದೆ . ಇಂದು ಈಗ 40 ರಿಂದ 60 ವರ್ಷನ ವಯಸ್ಸಿನ ಮಂದಿ ಹೆಚ್ಚು ಅನಾರೋಗ್ಯಕ್ಕೆ ಒಳಗಾದರೆ 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಂದಿ ಆರೋಗ್ಯದಿಂದ ಇದ್ದಾರೆ ಎಂದರೆ ಕಳೆದ 20 ವರ್ಷಗಳಲ್ಲಿ ಜಾಗತೀಕರಣದ ನಂತರ ಭಾರತದಲ್ಲಿ ಮಾನವೀಯ ಮೌಲ್ಯಗಳು ಹಾಗೂ ಜನರ ಸಹಜತೆಯಲ್ಲಿ ಬದಲಾಗಿದೆ ಎನ್ನುವುದು ಸ್ಪಷ್ಟವಾಗಿದೆ . ಬದಲಾಗಿ ಕಳ್ಳರಿದ್ದಾರೆ ಎಚ್ಚರಿಕೆ ಎನ್ನುವ ಸ್ಥಿತಿ ಬಂದಿರುವುದು ನಾಗರೀಕೆಯಾ ? ಇಂತಹ ಕುಸಿತಗಳು ಎಲ್ಲಾ ಕ್ಷೇತ್ರಗಳಲ್ಲೂ ಆಗಿದೆ . ಪ್ರಮುಖವಾಗಿ ದೃಶ್ಯ ಮಾಧ್ಯಮಗಳು , ದಾರ್ಮಿಕ , ವೈದ್ಯಕೀಯ , ರಾಜಕೀಯ ವಿವಿದ ಕ್ಷೇತ್ರಗಳಲ್ಲಿ ಕುಸಿತವಾಗಿದೆ . ದಟ್ಟ ಅರಣ್ಯ ಕಾಡಿನಲ್ಲಿಯೂ ಕೂಡಾ ಮಧ್ಯದ ಬಾಟಲ್ ಲಭ್ಯವಾಗುತ್ತದೆ ಎಂದರು . ಮೌಲ್ಯಗಳು ಕುಸಿದು ಎಷ್ಟಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ . ಇದೆಲ್ಲಾ ಕಾರಣದಿಂದ ಮನಸ್ಸು ಹಾಗೂ ಆರೋಗ್ಯ ಕೆಡುತ್ತದೆ . ಇದು ಸರಿಯಾಗದೆ ಇದ್ದರೆ ಭವಿಷ್ಯವು ಅತಂಕ ಇದೆ ಎಂದು ವ್ಯಕ್ತಪಡಿಸಿದರು .
ಮಾನವೀಯ ಮೌಲ್ಯಗಳನ್ನು ತುಂಬಬೇಕಾದ ಮಠಗಳು ಜಾತಿಗಳ ಕೇಂದ್ರವಾಗಿದೆ . ಒಬ್ಬ ಸಾಮೀಜಿಯು ತಂದೆ , ಕುಟುಂಬ , ಆಸ್ತಿ ಎಲ್ಲವೂ ಪೂರ್ವಶ್ರಮವಾದರೆ ಜಾತಿಯಕ್ಕೆ ಪೂರ್ವಶ್ರಮವಲ್ಲ ಎಂದ ಪ್ರಶ್ನಿಸಿದ ವಿವೇಕಾನಂದ ಮಠಗಳ ಜಾತಿ ವ್ಯವಸ್ಥೆಯನ್ನಲ್ಲ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕಾದ್ದು ಮಠಗಳು ಇದ್ದರೆ ಜಾತಿಗಳು ಒರವಾರದು , ಜಾತಿಗಳ ಇರುವುದಾದರೆ ಮಠಗಳು ಏಕೆ ಎಂದು ಪ್ರಶ್ನಿಸಿದರು . ಈಗ ಸಾಮಾನ್ಯ ಜನರು ಎಚ್ಚೆತ್ತುಕೊಳ್ಳಬೇಕು ಮಾನವೀಯ ಮೌಲ್ಯಗಳನ್ನು ಮುಂದಿನ 15 ವರ್ಷಗಳಲ್ಲಿ ಪುನರ್‌ಸ್ಥಾಪಿಸಲು ಸಾಮಾನ್ಯನೂ ಜಾಗೃತವಾಗಬೇಕು . ಇದಕ್ಕಾಗಿ ಇಂದಿನಿಂದಲೇ ಒಳ್ಳೆಯರನ್ನು ಗುರುತಿಸೋಣ ಹಾಗೂ ಬೆಂಬಲಿಸೋಣ ಕೆಟ್ಟವರನ್ನು ನಿರ್ಲಕ್ಷಸೋಣ ನಮ್ಮ ಒಳ್ಳೆಯದಕ್ಕಾಗಿ ಒಳ್ಳೆಯದರ ಕಡೆಗೆ ಸಾಗೋಣ . ಒಳ್ಳೆಯದನ್ನು ಒಳ್ಳೆಯದು ಎಂದು ಹೇಳಲು ಯಾವ ಭಯವೂ ಬೇಕಾಗಿಲ್ಲ ಎಂದರು . ಕೋಲಾರ ಜಿಲ್ಲೆಯ ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು
ಬಿ.ವಿ. ಗೋಪಿನಾಥ್ ಮಾತನಾಡಿ ಇವತ್ತಿನ ಕಾರ್ಯಕ್ರಮ ತುಂಬ ಚನ್ನಾಗಿದೆ . ಸಮಾಜದಲ್ಲಿ ಮಾನವೀಯ ಮೌಲ್ಯಗಳ ಪುನರುತ್ತಾನಕ್ಕಾಗಿ ಸಾಮಾಜಿಕ ಹೋರಾಟಗಾರ ಹೆಚ್.ಕೆ. ವಿವೇಕಾನಂದ ಕೈಗೊಂಡಿರುವ ಪಾದಯಾತ್ರೆ ಶ್ಲಾಘನಿಯವಾಗಿದೆ . ಎಂದ ಇವರು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಪುನರ್‌ಜೀವನಗೊಳಿಸುವ ಮೂಲಕ ಯುವಜನಾಂಗವು ಭವಿಷ್ಯದಲ್ಲಿ ಉತ್ತಮ ಬದುಕನ್ನು ಕಟ್ಟಿಕೊಳ್ಳುವ ದಿಸೆಯಲ್ಲಿ ಭವ್ಯ ಭಾರತ ನಿರ್ಮಾಣಕ್ಕೆ ಸಂಕಲ್ಪ ಕೊಡಬೇಕು ಎಂದರು . ಸಮಾಜದಲ್ಲಿ ಮೌಡ್ಯ ಹಾಗೂ ಭಷ್ಟ ಮುಕ್ತ ಮತ್ತು ಸಮ ಸಮಾಜ ನಿರ್ಮಾಣ ದೇಶದ ಸಮಗ್ರತೆ , ಏಕತೆ , ಹಾಗೂ ಸ್ವಚ್ಚ ಪರಿಸರ ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಕೈಗೊಂಡಿರುವ ಈ ಜನಜಾಗೃತಿ ಜ್ಞಾನ ಬಿಕ್ಷ ಪಾದಯಾತ್ರೆಯು ಯಶಸ್ವಿಯಾಗಲಿ ಈ ಕೈಗೊಂಡಿರುವ ಈ ಪಾದಯಾತ್ರೆಯಿಂದ ಸಮಗ್ರ ಭಾರತ ಜನರ ಸುಸ್ಥಿರ ಬದಕು , ಸಮಾಜದಲ್ಲಿ ಶಾಂತಿ – ಸಾಮರಸ್ಯ ನೆಲಿಸಲು ಇಟ್ಟಿರುವ ಹೆಜ್ಜೆಯು ಮುಂದೆ ಹೆಮ್ಮರವಾಗಿ ಬೆಳೆಯಲಿ ಎಂದು ಶುಭ ಕೋರಿದರು . ಈ ಸಂವಾದ ಕಾರ್ಯಕ್ರಮದಲ್ಲಿ ಪಶುಪಾಲನೆಯ ನಿವೃತ್ತ ಉಪನಿರ್ದೇಶಕ ಡಾ || ಟಿ . ಜಯರಾಮ್ , ನಿವೃತ್ತ ಅಪರ ನಿರ್ದೇಶಕ ಡಾ || ಟಿ.ಶ್ರೀನಿವಾಸರೆಡ್ಡಿ , ರೋಟರಿ ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷ ಡಾ || ವೈ.ವಿ. ವೆಂಕಟಾಚಲ , ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯ ಬೈರೆಗೌಡ , ಕಂಬಾಲಪಲ್ಲಿ ಶ್ರೀನಿವಾಸ್ , ಆನಂದರೆಡ್ಡಿ , ಸುರೇಶ್ , ವಕೀಲ ಜಯರಾಮ್ , ಸೀತಾರೆಡ್ಡಿ ಸುಬ್ರಮಣಿ , ಪ್ಯಾರಮೆಡಿಕಲ್ ವಿದ್ಯಾರ್ಥಿಗಳು ಶಿಕ್ಷಕರು , ಉಪಸ್ಥಿತರಿದ್ದರು .