JANANUDI.COM NETWORK
ಕುಂದಾಪುರ, ಮೇ,1; ಕುಂದಾಪುರ ಸರಕಾರಿ ಆಸ್ಪತ್ರೆಯ ವತಿಯಿಂದ ಕಲಾಮಂದಿರದಲ್ಲಿ ನೀಡುವ ಕೋವಿಡ್ ಲಸಿಕೆಯಲ್ಲಿ ಕೊರತೆ ಇದೆ, ಅದಾಗ್ಯೂ ಲಸಿಕೆ ಎಷ್ಟು ಲಭ್ಯ ಇರುತ್ತೊ ಅಷ್ಟೊಂದು 45 ವರ್ಷ ದಾಟಿದ ನಾಗರಿಕರಿಗೆ ಕೋವಿಡ್ ಲಸಿಕೆಯನ್ನು ಆಸ್ಪತ್ರೆಯ ಹತ್ತಿರ ಇರುವ ಸರಕಾರಿ ಜೂನಿಯರ್ ಕಾಲೇಜ್ ಆವರಣದಲ್ಲಿರುವ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಉಚಿತವಾಗಿ ನೀಡಲಾಗುತ್ತದೆ.
ದಿನವಾರು ಕಲಾಮಂದಿರದಲ್ಲಿ 200, 300, ಲಸಿಕೆ ನೀಡುತಿದ್ದರು, ಈಗ ಲಸಿಕೆಗಳ ಕೊರತೆಯಿಂದ ಲಭ್ಯ ಇದ್ದಷ್ಟು ಲಸಿಕೆಗಳನ್ನು ನೀಡಲಾಗುತ್ತದೆ, ಇಂದು ಮೇ ಒಂದರಂದು ಲಭ್ಯವಿದ್ದ ಸುಮಾರು 90 ಲಸಿಕೆಗಳನ್ನು ನೀಡಲಾಯಿತು.
ಆಸ್ಪತ್ರೆಯ ವೈದ್ಯರು, ನರ್ಸಗಳು ಮತ್ತು ಸಿಬಂದ್ದಿಯು ಲಸಿಕೆ ಕೊಡುವ ಅಭಿಯಾನದಲ್ಲಿ ತಮ್ಮ ಸೇವೆ ನೀಡುತ್ತಾರೆ. ಅಲ್ಲದೆ ಸ್ವಂಯ ಸೇವಕರಂತೆ, ಕುಂದಾಪುರ ಕಲಾ ಕ್ಷೇತ್ರ ಸಂಘದ ಕೀಶೊರ್ ಕುಮಾರ್, ರಾಜೇಶ್ ಕಾವೇರಿ, ಶ್ರೀಧರ ಸುವರ್ಣ, ಪ್ರಶಾಂತ್ ಸಾರಂಗ, ಹೇಮಾ, ಅನಿಲ್ ಉಪುಂದ, ಸತ್ಯ ಕೋಟೇಶ್ವರ, ರಾಘವೇಂದ್ರ ಭಟ್, ಸುಬ್ರಮ್ಹಣ್ಯ ಕುಂದಾಪುರ, ಇವರುಗಳು ಲಸಿಕೆ ಅಭಿಯಾನದಲ್ಲಿ ತಮ್ಮನ್ನು ಸೇವಕರಂತೆ ತೊಡಗಿಸಿಕೊಂಡು, ಉತ್ತಮ ರೀತಿಯಾಗಿ ಕಾರ್ಯ ನಿರ್ವಹಿಸುತಿದ್ದಾರೆ.
ಲಸಿಕೆಗಳ ಕೊರತೆಯಿಂದ ನಾಗರಿಕರಿಗೆ ತೊಂದರೆಯಾಗಿ, ಲಸಿಕೆ ಕೇಂದ್ರಕ್ಕೆ ಬಂದು ವಾಪಸು ಹೋಗುವ ಪರಿಸ್ಥಿತಿ ಉದ್ಭವಿಸಿದ್ದರಿಂದ, ಲಸಿಕೆ ಹಾಕಿ ಕೊಳ್ಳಲು ಇಚ್ಚಿಸುವರು, ಸಹಯಾವಾಣಿ 9449012730 ಕ್ಕೆ ಫೋನ್ ಮಾಡಿ, ಒಂದು ವೇಳೆ ಈ ನಂಬರ್ ನಿಂದ ನಿಮಗೆ ಉತ್ತರ ಬರದೆ ಇದ್ದರೆ 9844783053 ಅಥವ 9448373273 ಇದಕ್ಕೆ ಫೋನ್ ಮಾಡಿ ಇವರು ಕಲಾ ಕ್ಷೇತ್ರದ ತಂಡದವರಾಗಿದೆ.