

ಶ್ರೀನಿವಾಸಪುರ : ಹಗಲಿರುಲು ದುಡಿಯುವವರು ಕಾರ್ಮಿಕರೇ , ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯಗಳ ಬಗ್ಗೆ ಇಂದು ಮೆಟ್ಟಿನಿಲ್ಲಬೇಕಾಗಿದೆ. ಪ್ರಪಂಚಾದ್ಯಾಂತ ಕಾರ್ಮಿಕರು ಇದ್ದು, ಇಂದು ಒಂದಿಲ್ಲ ಒಂದು ಸಮಸ್ಯೆಗಳಿಂದ ಬಳುತ್ತಿದ್ದಾರೆ. ಸಮಸ್ಯೆಗಳ ಬಗ್ಗೆ ಹೋರಾಟಗಳು ನಡೆಯುತ್ತಲೇ ಇರುತ್ತದೆ. ಎಂದು ಕೆಪಿಆರ್ಎಸ್ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯ ಮುಂಭಾಗ ಗುರುವಾರ ಸಿಐಟಿಯು ವತಿಯಿಂದ ನಡೆದ ಕಾರ್ಮಿಕರ ದಿನಾಚರಣೆಯ ಬಹಿರಂಗಸಭೆಗೆ ಚಾಲನೆ ನೀಡಿ ಮಾತನಾಡಿದರು.
ಚಿಕಾಗೋ ನಗರದ ಬಂಡವಾಳಿ ಶಾಹಿ ವರ್ಗದವರು ಕಾರ್ಮಿಕರಿಗೆ ಹೆಚ್ಚಿನ 12 ಗಂಟೆ ಸಮಯ ದುಡಿಯಲು ಒತ್ತಡ ಹೇರುತ್ತಿದ್ದರು. ಇದರಿಂದ ಕುಟುಂಬದೊಂದಿಗೆ ಇರಲು ಸಾಧ್ಯವಾಗುತ್ತಿರಲಿಲ್ಲ. 12 ಗಂಟೆ ಸಮಯ ದುಡಿಯಲು ನಮ್ಮಿಂದ ಆಗುವುದಿಲ್ಲ ಎಂದು ಹೇಳಿ 8 ಗಂಟೆ ಸಮಯ ದುಡಿಯುತ್ತೇವೆ ಎಂದು ಚಿಕಾಗೋ ಬಂಡವಾಳಿ ಶಾಹಿಗಳಿಗೆ ಎಚ್ಚರಿಕೆ ಕೊಟ್ಟಿದ್ದರು ಹಾಗು ಕೇಂದ್ರ , ರಾಜ್ಯ ಸರ್ಕಾರದ ಕಾರ್ಮಿಕರ ವಿರೋಧಗಳ ದೋರಣೆಗಳ ಬಗ್ಗೆ ತಿಳಿಸಿಕೊಟ್ಟರು. ಕಾರ್ಮಿಕರ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.
ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಲಿ ಸದಸ್ಯರು ಪಾತೋಕೋಟೆ ನವೀನ್ಕುಮಾರ್ ಮಾತನಾಡಿ ತಾಲೂಕಿನಲ್ಲಿ ನೋಂದಿತ ಕಾರ್ಮಿಕರಿಗಿಂತ ಅನೋಂದಿತ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಅಸಂಘಟಿತ ಕಾರ್ಮಿಕರಿಗೆ ಸರ್ಕಾರದಿಂದ ಬರಬೇಕಾದ ಸೌಲಭ್ಯಗಳ ಸಿಗುತ್ತಿಲ್ಲ ಎಂದರು. ಅಂಗನವಾಡಿ, ಕಟ್ಟಡ ಕಾರ್ಮಿಕರ ಸಂಘ, ಗ್ರಾ.ಪಂ ಸಿಬ್ಬಂದಿಗಳ ಸಮಸ್ಯೆಗಳನ್ನು ಆಲಿಸಿ , ಅವರ ಸಮಸ್ಯೆಗಳ ಬಗ್ಗೆ ಅನೇಕ ಹೋರಾಟಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಮಾಹಿತಿ ನೀಡಿದರು.
ಇದೇ ಸಮಯದಲ್ಲಿ ಮುಳಬಾಗಿಲು ವೃತ್ತದಿಂದ ಮೆರವಣಿಗೆಯು ಹೊರಟು ಎಂಜಿ ರಸ್ತೆಯ ಮೂಲಕ ಅಂಬೇಡ್ಕರ್ ಉದ್ಯಾನವನದ ಬಳಿ ಸಿಐqಟಿಯು ದ್ವಜಾರೋಃನವನ್ನು ಹಮ್ಮಿಕೊಳ್ಳಲಾಯಿತು.