ಶ್ರೀನಿವಾಸಪುರ : ಅಕ್ಟೋಬರ್ 28ರಂದು ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಮತದಾರರ ಪಟ್ಟಿಯಲ್ಲಿ ಬಹಳಷ್ಟು ಲೋಪ ದೋಷಗಳಾಗಿವೆ ಎಂದು ಕಲಾ ಶಂಕರ್ ಆರೋಪಿಸಿದರು.
ಗುರುವಾರ ತಾಲೂಕು ದಂಡಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ಮಾಡಿ ಪ್ರಸ್ತುತ ಇರುವಂತಹ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೈಲಾ ನಿಯಮದಂತೆ ಮತದಾರರ ಪಟ್ಟಿಯನ್ನು 22 ದಿನಗಳ ಮುಂಚಿತವಾಗಿ ಪ್ರಕಟಣೆ ಮಾಡಬೇಕು ಆದರೆ ಪ್ರಕಟಿಸಿಲ್ಲ, ಎಂ ಬೈರೇಗೌಡರು ಪ್ರಸ್ತುತ ನೌಕರರ ಸಂಘದ ನಿರ್ದೇಶಕರಾಗಿದ್ದು ಪ್ರೌಢಶಾಲಾ ವಿಭಾಗದಲ್ಲಿ ಎರಡು ಬಾರಿ ಸ್ಪರ್ಧಿಸಿ ವಿಜೇತರಾಗಿದ್ದರು ಆದರೆ ಈಗ ಅವರ ಹೆಸರನ್ನು ಪ್ರಾಥಮಿಕ ಶಾಲಾ ವಿಭಾಗದ ಪಟ್ಟಿಯಲ್ಲಿ ಸೇರಿಸಲಾಗಿದೆ ಇದರ ಹಿಂದಿನ ಉದ್ದೇಶವೇನು ಎಂದು ಸಹ ಪ್ರಶ್ನಿಸಿದರು.
ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮುರಳಿಬಾಬು ಮಾತನಾಡಿ 2024 ಜೂನ್ ತಿಂಗಳಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನಾಲ್ಕು ಶಿಕ್ಷಕರು ನಿವೃತ್ತಿಯಾಗಿದ್ದು ಇಬ್ಬರ ಹೆಸರನ್ನು ಮಾತ್ರ ಮತದಾರರ ಪಟ್ಟಿಯಲ್ಲಿ ಉಳಿಸಿದ್ದು ಇಬ್ಬರ ಹೆಸರನ್ನು ತೆಗೆದಿದ್ದೇಕೆ,ತರಾತುರಿಯಲ್ಲಿ ಕಾರ್ಯಕಾರಿಣಿ ಸಮಿತಿ ಸಭೆ ಕರೆಯದೆ ಮತದಾರರ ಪಟ್ಟಿ ತಯಾರಿಕೆ ಮಾಡಲು ಕಾರಣವೇನು..? ಪ್ರಸ್ತುತ ಚುನಾವಣಾ ದಿನಾಂಕದೊಳಗೆ ಅಧ್ಯಕ್ಷರು ಮತದಾರರ ಪಟ್ಟಿಯಲ್ಲಿ ಆಗಿರುವಂತಹ ಲೋಪದೋಷಗಳನ್ನು ಸರಿಪಡಿಸದೆ ಹೋದರೆ ಪ್ರತಿಭಟನೆ ಎಚ್ಚರಿಕೆಯನ್ನು ನೀಡಿ ಅಧ್ಯಕ್ಷರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ನೇಮಿಸಿರುವ ಚುನಾವಣಾ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಹ ಸಲ್ಲಿಸಿದರು.ಈ ಸಂದರ್ಭದಲ್ಲಿ ಕಲಾಶಂಕರ್,ಜಿ ಎಂ ಕೃಷ್ಣಪ್ಪ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ, ಪೃಥ್ವಿರಾಜ್,ಉಪಾಧ್ಯಕ್ಷರಾದ ಸಿ ಎನ್ ವೆಂಕಟರವಣಪ್ಪ, ಅಮರನಾಥ್ ಹಾಗೂ ಹಲವು ಶಿಕ್ಷಕರು ಉಪಸ್ಥಿತರಿದ್ದರು.