ಶ್ರೀನಿವಾಸಪುರ :ಕೋಲಾರ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ ಐ ಎನ್ ಟಿ ಯು ಸಿ ಸಂಯೋಜಿತ ಶ್ರೀನಿವಾಸಪುರ ತಾಲ್ಲೂಕು ಸಮಿತಿ ವತಿಯಿಂದ ರಾಯಲ್ಪಾಡು ಹೋಬಳಿ ಸಮಾವೇಶದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶಾಸಕ ಕೆ.ಆರ್.ರಮೇಶ್ ಕುಮಾರ್ ರವರು ಕಾರ್ಮಿಕರ ಗುರುತಿನ ಚೀಟಿ ನೀಡುವುದರ ಮೂಲಕ ಉದ್ಘಾಟಿಸಿದರು.
ಶಾಸಕ ಕೆ.ಆರ್ ರಮೇಶ್ ಕುಮಾರ್ ಮಾತನಾಡಿ ನೆಹರು ರವರು ಪ್ರಧಾನ ಮಂತ್ರಿಯಾಗಿದಾಗ ಮಹಾವೀರ ತ್ಯಾಗಿ ಎಂಬುವರು ಆಗ ಕಾರ್ಮಿಕ ಸಚಿವರಾಗಿದ್ದಗಿನಿಂದ ಕಾರ್ಮಿಕ ಇಲಾಖೆ ಕೆಲಸ ಮಾಡಿಕೊಂಡು ಬರುತ್ತಿದೆ. ಮಲ್ಲಿಕಾರ್ಜುನ ಖರ್ಗೆ ರವರು ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿದ್ದಾಗ ಕೆಲವು ಯೋಜನೆಗಳನ್ನು ಜಾರಿ ಮಾಡಿದ್ದರು. ಮಕ್ಕಳು ಓದುವುದಕ್ಕೆ, ಆಸ್ಪತ್ರೆಗೆ ಪ್ರತಿಯೊಂದಕ್ಕೂ ಇದರಲ್ಲಿ ಹಣ ಇದೆ. ಆ ಹಣವನ್ನು ಕಾರ್ಮಿಕರಿಗೆ ಸೇರಿಸುವವರು ಬೇಕು ಪಾಪ ಯಲ್ಲಪ್ಪ ಈ ಒಳ್ಳೆ ಕೆಲಸವನ್ನು ಮಾಡುತ್ತಿದ್ದಾರೆ ಅವರನ್ನು ಅಭಿನಂದಿಸುತ್ತೇನೆ ಬ್ರೋಕರ್ ಗಳು ಬರುತ್ತಾರೆ ಉಷಾರಾಗಿರಿ 2 ಸಾವಿರ 3 ಸಾವಿರ ಕೇಳುತ್ತಾರೆ ಅವರ ಮಾತನ್ನು ಕೇಳಬೇಡಿ. ಬರೀ 300 ರೂ ಮಾತ್ರ ಅಷ್ಟೇ ಕೊಟ್ಟು ಸದಸ್ಯತ್ವವನ್ನು ಪಡೆದುಕೊಳ್ಳಿ. ನೀವು ಈ ಕಾರ್ಯಕ್ರಮದಿಂದ ಹೋದಾಗ ನಮ್ಮವರು ಇನ್ನೂ ಯಾರು ಕಾರ್ಮಿಕರ ಕಾರ್ಡು ಮಾಡಿಕೊಳ್ಳದೇ ಇರುತ್ತಾರೋ ಅಂಥವರಿಗೆ ತಿಳಿಸಿ. ಬೆವರು ಸುರಿಸಿ ಕೆಲಸ ಮಾಡುವರೆಲ್ಲ ಕಾರ್ಮಿಕರೆ ಎಂದು ತಿಳಿ ಹೇಳಿದರು.
ಕೋಲಾರ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಕಾರ್ಯದರ್ಶಿ ಯಲ್ಲಪ್ಪ ಮಾತನಾಡಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ .ನಮ್ಮ ಸಂಘದಲ್ಲಿ ಯಾವುದೇ ಜಾತಿ ಭೇದವಿಲ್ಲ ನಮ್ಮಲ್ಲಿ ಕಷ್ಟಪಟ್ಟು ಕೆಲಸ ಮಾಡುವವರಿಗೆ ನೀಡಲಾಗುವುದು.
ಮಕ್ಕಳ ವಿದ್ಯಾಭ್ಯಾಸಕ್ಕೆ ಚಿಕ್ಕ ವಯಸ್ಸಿನಿಂದ ಹಿಡಿದು ಐಎಎಸ್ ಐಪಿಎಸ್ ಮಾಡುವತನಕ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಧನಸಹಾಯವನ್ನು ಕಟ್ಟಡ ಕಾರ್ಮಿಕ ಹಾಗೂ ಇತರೆ ನಿರ್ಮಾಣ ಇಲಾಖೆ ಮಂಡಳಿ ವತಿಯಿಂದ ನೀಡಲಾಗುತ್ತದೆ. ಅಪಘಾತಗಳು ನಡೆದ ಸಮಯದಲ್ಲಿ ಮಕ್ಕಳಿಗೆ ಜನ್ಮ ನೀಡುವಂತಹ ಸಮಯದಲ್ಲಿಯೂ ಹಣವನ್ನು ನೀಡಲಾಗುತ್ತದೆ. ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಹಾಗೂ ಗ್ರಾಮದಲ್ಲಿನ ಕಾರ್ಮಿಕರಿಗೆ ತಿಳಿಸಿ ಮಂಡಳಿಯಿಂದ ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮಾಹಿತಿ ನೀಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ದಿಂಬಲ್ ಅಶೋಕ್, ಸಂಜಯ್ ರೆಡ್ಡಿ, .ಕೆ.ಕೆ.ಮಂಜುನಾಥ್, ತಾಲ್ಲೂಕು ಅಧ್ಯಕ್ಷ ಚಂದ್ರಪ್ಪ, ಗೌರವಾಧ್ಯಕ್ಷ ಕ್ರಿಷ್ಣಪ್ಪ, ಖಜಾಂಜಿ ವೆಂಕಟರಾಮರೆಡ್ಡಿ, ನೇರ್ನಹಳ್ಳಿ ಸರಿತಮ್ಮ, ಹೋಗಳಗೆರೆ ನಾಗರಾಜ್, ಗಾಂಡ್ಲಹಳ್ಳಿ ನಾರಾಯಣಸ್ವಾಮಿ, ಗುರುಮೂರ್ತಿ ಹಾಗೂ ಉಪಸ್ಥಿತರಿದ್ದರು.