ಇಂದು ರಾಜ್ಯದಲ್ಲಿ 39,998 ಕೋವಿಡ್ ಪ್ರಕರಣಗಳು 507 ಸಾವು, ದೇಶದಲ್ಲಿ 3,48,421 ಹೊಸ ಕೋವಿಡ್ ಪ್ರಕರಣಗಳು ಮತ್ತು 4,205 ಸಾವು

JANANUDI.COM NETWORK

ಬೆಂಗಳೂರು:  ದೇಶದಲ್ಲಿ ಕರೋನಾ ಪ್ರಕರಣಗಳು  ಒಟ್ಟು 37,04,099 ದಾಖಲಾಗಿದ್ದು, ನಿನ್ನೆಯ ಲೆಕಾಚಾರ ಹಿಡಿದರೆ  11,122 ಪ್ರಕರಣಗಳು ಇಳಿಕೆಯಾಗಿವೆ.. ಇವತ್ತು ದೇಶದಲ್ಲಿ 3,48,421 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು 4,205 ಸಾವುಗಳು ಸಂಭವಿಸಿಯೆಂದು ವರದಿಯಾಗಿದೆ.  ಸತತ ಎರಡನೇ ದಿನ ದೈನಂದಿನ ಪ್ರಕರಣಗಳಲ್ಲಿ ಸ್ವಲ್ಪ ಕುಸಿತ ಕಂಡುಬಂದಿದೆ.

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 39,998 ಜನರಿಗೆ ಹೊಸದಾಗಿ ಕರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಸಕ್ರೀಯ ಸೋಂಕಿತರ ಸಂಖ್ಯೆ 5,92,182ಕ್ಕೆ ಏರಿಕೆಯಾಗಿದೆ. ಅಲ್ಲದೇ ಸೋಂಕಿತರಾದಂತ 517 ಜನರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. .ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 16286 ಜನರು ಸೇರಿದಂತೆ ರಾಜ್ಯಾಧ್ಯಂತ 39998 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.

   ಉಡುಪಿ ಜಿಲ್ಲೆಯಲ್ಲಿ 909 ಪ್ರಕರಣಗಳು, 6 ಜನರ ಸಾವು,ದ.ಕನ್ನಡ ಜಿಲ್ಲೆಯಲ್ಲಿ 1077 ಪ್ರಕರಣಗಳು ದಾಖಲಾಗಿ ಕೇವಲ 2 ಮಾತ್ರ ಸಾವಿಗಿಡಾಗಿದ್ದಾರೆ.     ಶಿವಮೊಗ್ಗ  ಜಿಲ್ಲೆಯಲ್ಲಿ ಕೋವಿಡ್ ಅಬ್ಬರ ಮುಂದುವರೆದಿದ್ದು ಸೋಂಕಿತರ ಸಂಖ್ಯೆ 1067 ಆಗಿದೆ. ಒಂದೇ ದಿನ ಮಹಾಮಾರಿಗೆ ಬರೋಬ್ಬರಿ 26 ಮಂದಿ ಬಲಿಯಾಗಿದ್ದಾರೆ. ಇದರಿಂದ ಇದುವರೆಗೆ ಸಾವಿಗೀಡಾದವರ ಸಂಖ್ಯೆ 542ಕ್ಕೇರಿದೆ. 556 ಮಂದಿ ನಿಗದಿತ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 492 ಮಂದಿ ಸೋಂಕಿಗೆ ತುತ್ತಾಗಿ ದಾಖಲಾಗಿದ್ದಾರೆ. 4154 ಮಂದಿ ಮನೆಯಲ್ಲಿಯೆ ಐಸೋಲೇಷನ್ ಆಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ತಾಲೂಕುವಾರು ಇಂದು: ಶಿವಮೊಗ್ಗ : 333 ಭದ್ರಾವತಿ : 177 ಶಿಕಾರಿಪುರ : 81 ತೀರ್ಥಹಳ್ಳಿ : 78 ಸೊರಬ : 107 ಸಾಗರ : 193 ಹೊಸನಗರ : 59 ಮ್ರತರಾಗಿದ್ದಾರೆ