

ಧಾರವಾಡ: ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಪ್ರದರ್ಶನ ಧಾರವಾಡದಲ್ಲಿ ನಡೆಯುತ್ತಿದೆ. ಧಾರವಾಡ ತೋಟಗಾರಿಕೆ ಇಲಾಖೆಯ ಮಾವು ಮೇಳದಲ್ಲಿ ಪ್ರದರ್ಶನದಲ್ಲಿ ಜಪಾನಿನ ಮಿಯಾ ಜಾಕಿ ಎಂಬ ಒಂದು ಮಾವು ಕೂಡ ಇದೆ.
ಮಾವು ಮಾರಾಟ ಮೇಳದಲ್ಲಿ ಸುಮಾರು 30 ಜನ ಮಾವು ಬೆಳೆಗಾರರು ಮಳಿಗೆಗಳನ್ನು ಹಾಕಿದ್ದಾರೆ. ಸಾರ್ವಜನಿಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಇದು ರೈತರಿಗೆ ಮತ್ತು ಮಾವು ಬೆಳೆಗಾರರಿಗೆ ಅನುಕೂಲವಾಗುತ್ತದೆ. ಸಾರ್ವಜನಿಕರಿಗೆ ಅದರಲ್ಲೂ ಗ್ರಾಹಕರಿಗೆ ಉತ್ತಮ ಬೆಲೆಗೆ, ರುಚಿಕರವಾದ ಮಾವು ಸಿಗುವುದಕ್ಕೆ ಇದೊಂದು ಸುವರ್ಣ ಅವರಾಶವಾಗಿದೆ.
ಈ ಒಂದು ಮಿಯಾ ಜಾಕಿ ಮಾವಿನ ಹಣ್ಣಿಗೆ: 10 ಸಾವಿರ ರೂಪಾಯಿ ಬೆಲೆ ಆಗಿದೆ. ಧಾರವಾಡ ಕಲಕೇರಿ ಗ್ರಾಮದಲ್ಲಿ ಪ್ರಮೋದ ಗಾಂದಕರ್ ಎಂಬ ರೈತ ಮಿಯಾ ಜಾಕಿ ಹಣ್ಣನ್ನು ಬೆಳೆದಿದ್ದಾರೆ.
ಕಳೆದ ನಾಲ್ಕು ವರ್ಷದಿಂದ ಕೇವಲ 4 ರಿಂದ 5 ಮಾವು ಬಿಡುತಿದ್ದ ಮಿಯಾ ಜಾಕಿ ಮರ, ಈ ವರ್ಷ ಬಂಪರ್ ಬೆಳೆ ನೀಡಿದೆ. 25 ಮಿಯಾಜಾಕಿ ಮಾವು ಬಿಟ್ಟಿದೆ. ಆ ಮೂಲಕ ಒಂದೇ ಮಾವಿನ ಮರದಿಂದ ಮಾಲೀಕ ಭರ್ಜರಿ ಲಾಭ ಮಾಡಿದ್ದಾರೆಂದು ತಿಳಿದು ಬಂದಿದೆ.
ಧಾರವಾಡ ಜಿಲ್ಲೆಯಲ್ಲಿ, ಮಾವು ಒಂದು ಪ್ರಮುಖ ಬೆಳೆಯಾಗಿದ್ದು ಒಟ್ಟು 29610 ಎಕರೆಗಳಲ್ಲಿ ಸುಮಾರು 8881ರೈತರು ಮಾವು ಬೆಳೆಯುತ್ತಿದ್ದಾರೆ.