JANANUDI.COM NETWORK
ಹೈದರಾಬಾದ್, ಜೂ.16. ಹೈದರಾಬಾದಿನ ಯೋಗೇಶ್ ಮತ್ತು ರೂಪಲ್ ದಂಪತಿಯ ಮಗ ಅಯಾಂಶ್ ವಂಶವಾಹಿ ಸಮಸ್ಯೆಯಾದ ಸ್ಪೈನಲ್ ಮಸ್ಕುಲರ್ ಅಟ್ರೋಫಿ (ಎಸ್‌ಎಂಎ) ಎಂಬ ಕಾಯಿಲೆಯಿಂದ ಬಳಲುತ್ತಿದ್ದ. ಈ ಸಮಸ್ಯೆಯಿಂದಾಗಿ ಮಗು ನಡೆದಾಡುವುದು ಕಷ್ಟವಾಗಿತ್ತು. ಒಂದು ವೇಳೆ ಚಿಕಿತ್ಸೆ ನೀಡದಿದ್ದರೇ, ಜೀವಕ್ಕೇ ಅಪಾಯವಿತ್ತು. ಆದರೆ ಈ ಸಮಸ್ಯೆಗೆ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಔಷಧವಿಲ್ಲ. ಆದ್ದರಿಂದ ಅಮೆರಿಕದಿಂದ ಔಷಧವನ್ನು ಖರೀದಿ ಮಾಡಬೇಕಿತ್ತು. ಆದರೆ ಇದರ ಸಿಂಗಲ್ ಡೋಸ್ ಔಷಧಿಗೆ ಜೆಎಸ್‌ಟಿ ಹೊರತಾಗಿ 16 ಕೋಟಿ ರೂಪಾಯಿ ಆಗುತಿತ್ತು.
ಜಗತ್ತಿನ ಅತ್ಯಂತ ದುಬಾರಿ ಮೆಡಿಕಲ್ ಡ್ರಗ್ ಎಂದೇ ಪರಿಗಣಿತವಾದ ಜ಼ಾಲ್ಗೆನ್‌ಸ್ಮಾದ ಸಿಂಗಲ್-ಡೋಸ್ನನ್ನು ಬಾಲಕನಿಗೆ ಚಿಕಿತ್ಸೆಗಾಗಿ ಇಷ್ಟೊಂದು ಹಣ ಅವರು ವ್ಯವಸ್ಥೆ ಮಾಡಲಾಗದೆ ಚಿಂತಿತರಾಗಿದ್ದರು.
ನಂತರ ಈ ದಂಪತಿಗಳು ಗೋಫಂಡ್‌ಮೀ ಮುಖಾಂತರ ಕ್ರೌಡ್ ಫಂಡಿಂಗ್‌ಗೆ ಮುಂದಾಗಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಈ ಮಗುವಿನ ಚಿಕಿತ್ಸೆಗಾಗಿ ಸುಮಾರು 65 ಸಾವಿರ ಮಂದಿ ದೇಣಿಗೆ ಹಣ ನೀಡಲು ಮುಂದೆ ಬಂದು, ಇದೀಗ ಅವರ ಮಗುವಿನ ಚಿಕಿತ್ಸೆಯ ಔಷಧದ ಸಂಪೂರ್ಣ ವೆಚ್ಚ ಸಿಕ್ಕಿದ್ದಕ್ಕೆ ದಂಪತಿಗಳು ಖುಷಿ ಪಟ್ಟಿದ್ದಾರೆ.