ಕೋಲಾರ ನಗರದ ಗಡಿಯಾರ ಗೋಪುರದಲ್ಲಿ ಅಲ್ಪಸಂಖ್ಯಾತ ಮುಖಂಡರ ಸಹಕಾರದೊಂದಿಗೆ ತ್ರಿವರ್ಣ ಧ್ವಜರೋಹಣ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ: ನಗರದಗಡಿಯಾರಗೋಪುರದಲ್ಲಿ ಶನಿವಾರ ಸ್ಥಳೀಯ ಅಲ್ಪಸಂಖ್ಯಾತ ಮುಖಂಡರ ಸಹಕಾರದೊಂದಿಗೆ ಜಿಲ್ಲಾಡಳಿತ ಹಾಗೂ ಪೊಲೀಸ್‍ ಇಲಾಖೆಯುತ್ರಿವರ್ಣಧ್ವಜ ಹಾರಿಸುವಲ್ಲಿ ಯಶಸ್ವಿಯಾಯಿತು.
ಎರಡು ದಿನಗಳ ಹಿಂದಷ್ಟೇ ಸಂಸದಎಸ್.ಮುನಿಸ್ವಾಮಿ ಸುದ್ದಿಗೋಷ್ಠಿ ನಡೆಸಿ, ಗಡಿಯಾರಗೋಪುರಕ್ಕೆತ್ರಿವರ್ಣವನ್ನು ಬಳಿಸಿ, ಗೋಪುರದ ಮೇಲ್ಭಾಗದಲ್ಲಿತ್ರಿವರ್ಣಧ್ವಜವನ್ನು ಹಾರಿಸುವ ಸಲುವಾಗಿ ತಾವುಏಕಾಂಗಿಯಾಗಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದರು.144 ಸೆಕ್ಷನ್‍ಅವಧಿ ಮುಗಿದ ಮಾ.21 ರ ನಂತರ ನೂರಾರು ಸಂಖ್ಯೆಯ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸುವುದಾಗಿ ಘೋಷಿಸಿ ಈ ಕುರಿತು ಡಿಸಿ ಮತ್ತು ಎಸ್ಪಿಗೆ ಮನವಿ ಸಲ್ಲಿಸಿದ್ದರು.
ಗಡಿಯಾರಗೋಪುರ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಹಾಗೂ ಕೋಲಾರದಲ್ಲಿ ಹಿಜಾಬ್ ಸಂಬಂಧ 144 ಸೆಕ್ಷನ್‍ಜಾರಿಯಲ್ಲಿರುವುದರಿಂದ ಸಂಸದರ ಪ್ರತಿಭಟನೆಗೆ ಪೆÇಲೀಸ್ ವರಿಷ್ಠಾಧಿಕಾರಿದೇವರಾಜ್‍ಅನುಮತಿಯನ್ನು ನಿರಾಕರಿಸಿದ್ದರು.
ಆನಂತರ ಪ್ರಕರಣ ಸೂಕ್ಷ್ಮತೆಯನ್ನುಅರಿತು ಡಿಸಿ ವೆಂಕಟ್‍ರಾಜಾ ಮತ್ತು ಎಸ್ಪಿ ದೇವರಾಜ್‍ತಾವೇ ರಂಗಕ್ಕಿಳಿದರು.ಈ ವೇಳೆಗಾಗಲೇ ಗಡಿಯಾರಗೋಪುರ ಸುತ್ತಮುತ್ತಲಿನ ಅಲ್ಪಸಂಖ್ಯಾತ ಮುಖಂಡರುತ್ರಿವರ್ಣಧ್ವಜ ಹಾರಿಸುವ ವಿಚಾರದಲ್ಲಿತಮ್ಮದೇನುಅಭ್ಯಂತರಆಕ್ಷೇಪವಿಲ್ಲ, ಇಲ್ಲಿಗೆಯಾರೂ ಬಂದುರಾಜಕೀಯ ಲಾಭ ಪಡೆದುಕೊಳ್ಳುವ ಅಗತ್ಯವಿಲ್ಲ, ತಾವೇ ಈ ಕಾರ್ಯಕ್ಕೆ ಬೆಂಬಲ ನೀಡುವುದಾಗಿ ಜಿಲ್ಲಾಡಳಿತದ ಅಧಿಕಾರಿಗಳಿಗೆ ಭರವಸೆ ನೀಡಿದರು.
ಈ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಗಡಿಯಾರಗೋಪುರಕ್ಕೆ ಬಿಳಿ ಬಣವನ್ನು ಬಳಿಸಿ, ಮಧ್ಯಭಾಗತ್ರಿವರ್ಣವನ್ನು ಅರಳಿಸಿ, ಗೋಪುರದ ಮೇಲ್ಭಾಗಇಪ್ಪತ್ತುಅಡಿಯ ಕಂಬವನ್ನು ವೆಲ್ಡಿಂಗ್ ಮಾಡಿಸಿ ಮಧ್ಯಾಹ್ನದ ವೇಳೆಗೆ ಸಕಲಗೌರವಗಳೊಂದಿಗೆ ತ್ರಿವರ್ಣಧ್ವಜವನ್ನು ಹಾರಿಸುವಲ್ಲಿ ಯಶಸ್ವಿಯಾದರು.
ಈ ಸಂದರ್ಭದಲಿ ಅಂಜುಮಾನ್‍ಅಧ್ಯಕ್ಷಜಮೀರ್‍ಅಹಮದ್ ಮತ್ತು ಸ್ಥಳೀಯ ಅಲ್ಪಸಂಖ್ಯಾತ ಮುಖಂಡರುಇಡೀ ದಿನ ಜಿಲ್ಲಾಡಳಿತ ಹಾಗೂ ಪೆÇಲೀಸ್‍ಇಲಾಖೆಯೊಂದಿಗೆ ಹಾಜರಿದ್ದು ಈ ಕಾರ್ಯ ಸುಗಮವಾಗಿ ಸಾಗಿಸಲು ಸಹಕರಿಸಿದರು.
ಈ ಸಂದರ್ಭದಲ್ಲಿಯಾವುದೇಅಹಿತರ ಘಟನೆಗಳು ನಡೆಯದಂತೆ ಸುಮಾರು 500 ಕ್ಕೂ ಹೆಚ್ಚು ಪೆÇಲೀಸರನ್ನು ಬಂದೋಬಸ್ತ್‍ಗೆ ವ್ಯವಸ್ಥೆ ಮಾಡಲಾಗಿತ್ತು.ಗಡಿಯಾರಗೋಪುರದ ಮೂಲಕ ಇಡೀ ದಿನ ಸಂಚಾರವನ್ನು ನಿರ್ಬಂಧಿಸಲಾಗಿತ್ತು.ಗೋಪುರದ ಸುತ್ತಲೂ100 ಮೀಟರ್ ಪ್ರದೇಶದಲ್ಲಿಜನರಓಡಾಟಕ್ಕೆ ಅವಕಾಶ ನೀಡಿರಲಿಲ್ಲ.