ಅಣ್ಣನ ಮಗನ ಸಾವಿಗೆ ತೆರಳಿದ ಇಬ್ಬರು ಸಹೋದರರ ದುರಂತ ಸಾವು. ಅಪಘತದಲ್ಲಿ ಸ್ಥಳದಲ್ಲೆ ಮ್ರತ್ಯು.


ಕೊಟೇಶ್ವರ ಚರ್ಚಿನ ಫಾದರ್ ಸಿರಿಲ್ ಮಿನೇಜೆಸ್ ಅದೇ ಬಸ್ಸಿನಲ್ಲಿ ಪ್ರಯಾಣ ಮಾಡುತಿದ್ದರು

ಉಪ್ಪಿನಂಗಡಿ,ಮಾ. 19: ನಿನ್ನೆ ವೇಣೂರಿನ ಪಡಂಗಡಿ ಗ್ರಾಮದ ಗರ್ಡಾಡಿ ನಂದಿಬೆಟ್ಟಬಳಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಸ್ಕೂಟರ್‌ ನಡುವೆ ನಡೆದ ಘೋರ ಅಪಘಾತದಲ್ಲಿ ಹಿರೆಬಂಡಾಡಿಯ ಸಹೋದರರಿಬ್ಬರು ಸ್ಥಳದಲ್ಲೇ ಮೃತಪಟ್ಟರು.. ಹಬ್ಬದ ದಿನವೇ ಘಟನೆ ನಡೆದಿದ್ದು ‌ಉಪ್ಪಿನಂಗಡಿಯ ಹಿರೆಬಂಡಾಡಿ ಭಾಗದಲ್ಲಿ ಜನರಲ್ಲಿ‌ ಶೋಕ ಮುಡುಗಟ್ಟಿತ್ತು.
ಉಪ್ಪಿನಂಗಡಿ ಸನಿಹದ ಹಿರೆಬಂಡಾಡಿ ನಿವಾಸಿ, ನಿವೃತ ಶಿಕ್ಷಕ ಅಬ್ದುಲ್‌ ರಝಾಕ್‌ ಪುತ್ರರಾದ ಹಮ್ಮಬ್ಬ ಸಿರಾಜ್ (28 )ಮತ್ತು ಕಜುತುಬುದ್ದೀನ್‌ ಸಾದಿಕ್‌ (32) ಆಗಿದ್ದಾರೆ.ಗುರುವಾರ ವೇಣೂರಿನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದ ನಾಲ್ಕು ವರ್ಷ ಪ್ರಾಯದ ಅವರ ಅಣ್ಣನ ಮಗನ ಮರಣದ ಮನೆಗೆ ಹೋಗಿ ವಾಪಾಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ.
ತಕ್ಷಣ ಗಂಭೀರ ಸ್ಥಿತಿಯಲ್ಲಿದ್ದವರನ್ನು ಸ್ಥಳೀಯ ಗೋಳಿಯಂಗಡಿಯ ಸಾರ್ವಜನಿಕರು ಇನ್ನಿತರ ಸಹಕಾರದೊಂದಿಗೆ ಗಾಯಾಳುಗಳನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆತಂದರೂ ಅದಾಗಲೇ ಅವರು ಮೃತಪಟ್ಟಿದ್ದರು..ಇಬ್ಬರೂ ಸಹೋದರರು ವಿದೇಶದಲ್ಲಿ ಉದ್ಯೋಗಿಗಳಾಗಿದ್ದು, ಕಳೆದ ಐದು ತಿಂಗಳ ಹಿಂದೆ ಊರಿಗೆ ಮರಳಿದ್ದರೆಂದು ತಿಳಿದುಬಂದಿದೆ, ಇವರು. ತಾಯಿ, 8 ಸಹೋದರರು ಮತ್ತು 6 ಸಹೋದರಿಯರನ್ನು ಅಗಲಿದ್ದಾರೆ.
ಇದೇ ಬಸ್ಸಿನಲ್ಲಿ ಕೊಟೇಶ್ವರ ಚರ್ಚಿನ ಧರ್ಮಗುರು ವಂ।ಸಿರಿಲ್ ಮಿನೇಜೆಸ್ ಪ್ರಯಾಣಿಸುತಿದ್ದು, ಅವರಿಗೆ ಯಾವುದೇ ಅಪಾಯವಾಗಿಲ್ಲ. ಅಪಘಾತದಲ್ಲಿ ಸಿಕ್ಕಿ ಹಾಕಿಕೊಂಡು ಅವರು ಕೊಟೇಶ್ವರ ತಲಪುವಾಗ ರಾತ್ರಿ ಒಂದುವರೆ ಗಂಟೆಯಾಗಿತ್ತು ಎಂದು ಮಾದ್ಯಮಕ್ಕೆ ತಿಳಿಸಿದರು.