JANANUDI.COM NETWOR
ಬೆಂಗಳೂರು : ಅಕಾಲಿಕ ಮಳೆಯಿಂದ ಕೃಷಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಪರಿಣಾಮ ಮಾರುಕಟ್ಟೆಯಲ್ಲಿ ಟೊಮೆಟೊ ದರ ಕೆಜಿಗೆ 150 ರೂ ನಂತೆ ಮಾರಾಟವಾಗುವ ಮೂಲಕ ದಾಖಲೆ ಬರೆದಿದೆ.
ಭಾರೀ ಮಳೆಯ ಕಾರಣ ಹೊಲದಲ್ಲಿಯೇ ಟೊಮೋಟೊ ಸೇರಿ ವಿವಿಧ ಬೆಳೆ ನಾಶವಾಗಿದ್ದು, ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಟೊಮೇಟೊ ಪೂರೈಕೆಂiÀi ಪರಿಣಾಮ ಟೊಮೆಟೊ ದರ ಮುಗಿಲು ಮುಟ್ಟಿದೆ. ಚಿಲ್ಲರೆ ಮಳಿಗೆಗಳಲ್ಲಿ ಒಂದು ಕೆಜಿಗೆ 150 ರೂ.ನಂತೆ ಮಾರಾಟವಾಗಿದೆ.
ಕಳೆದ 15 -20 ದಿನಗಳಿಂದ ಟೊಮೆಟೊ ದರ ಏರುಗತಿಯಲ್ಲಿ ಸಾಗುತ್ತಿದೆ. ಚಿಲ್ಲರೆ ಮಳಿಗೆಗಳಲ್ಲಿ ಕೆಜಿಗೆ 100 ರೂ.ವರೆಗೂ ತಲುಪಿದ್ದ ದರ ನಂತರ 125 ರೂ.ಗೆ ಈಗ 150 ರೂ.ಗೆ ಏರಿಕೆಯಾಗಿದೆ. ದರ ಇμÉ್ಟೂಂದು ಏರಿಕೆ ಆದರೂ ಟೊಮೆಟೊ ರೈತರಿಗೆ ಈಗಲೂ ಜುಜುಬಿ ಹಣ ಸಿಗುತ್ತಿದ್ದು, ಮಧ್ಯವರ್ತಿಗಳು ಮಾತ್ರ ಹಣ ಮಾಡುತ್ತಿದ್ದಾರೆ. ಬೆಳೆ ನಾಶಗೊಂಡು ರೈತರು ತತ್ತರಿಸಿದ್ದಾರೆ. ಟೊಮೆಟೊ ಮಾತ್ರವಲ್ಲ, ಬಹುತೇಕ ಎಲ್ಲ ತರಕಾರಿಗಳ ದರ ಕೂಡ ಏರಿಕೆಯಾಗಿದೆ. ತರಕಾರಿ ದರ 50 ರಿಂದ 80 ರೂ.ವರೆಗೆ ಇದ್ದು, ಸೊಪ್ಪಿನ ದರ ಹೆಚ್ಚಳವಾಗಿದೆ. ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ತರಕಾರಿ ಬೆಲೆ ಭಾರಿ ಏರಿಕೆಯಾಗುತ್ತಿರುವುದು ಗ್ರಾಹಕರಿಗೆ ಕಶ್ಟವಾಗುತಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಚೆನೈ, ಬೆಂಗಳೂರು ಸೇರಿದಂತೆ ಮಲೆನಾಡು, ಕರಾವಳಿ ಮತ್ತಿತರ ಭಾಗಗಳಲ್ಲಿ ಮಳೆಯಾಗುತ್ತಿದೆ. ಈ ಮಳೆಯಿಂದ ರೈತರು ತತ್ತರಿಸಿದ್ದು, ರಾಗಿ, ಭತ್ತ, ಅಡಕೆ, ಕಾಫಿ, ಮೆಣಸು, ಶೇಂಗಾ, ಮೆಕ್ಕೆಜೋಳ ಇತ್ಯಾದಿ ಆಹಾರ ಧಾನ್ಯಗಳ ಕೃಷಿ ಹಾಳಾಗಿದ್ದರೆ, ತರಕಾರಿ ಬೆಳೆ ಕೊಳೆಯುತ್ತಿದೆ. ಹೀಗಾಗಿ ಬೆಲೆಗಳು ಗಗನಕ್ಕೇರಿವೆ