ಕುಂದಾಪುರ: ಬಸ್ರೂರಿನ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ಶಾಲಾ ಸಂಚಾಲಕ ಶಿಕ್ಷಕಿಯ ಹತ್ತಿರ ಅಸಭ್ಯವಾಗಿ ವರ್ತಿಸಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿ ಹೊರಬಂದಿದ್ದ ಆ ಶಾಲೆಯ ಉಪ ಪ್ರಾಂಶುಪಾಲೆ ಪೊಲೀಸರಿಗೆ ದೂರು ನೀಡಿದ್ದು, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಕ್ಷಕಿ ಎಂದಿನಂತೆ ಶಾಲೆಗೆ ಬಂದಾಗ ಸೆಕ್ಯೂರಿಟಿ ಗಾರ್ಡ್ ಅವರನ್ನು ಅರ್ಧ ತಾಸಿಗಿಂತಲೂ ಹೆಚ್ಚು ಕಾಲ ತಡೆದು ನಿಲ್ಲಿಸಿ ಶಾಲೆಯ ಒಳಗೆ ಬಾರದಂತೆ ನಿರ್ಬಂಧಿಸಲಾಗಿತ್ತು. ಶಿಕ್ಷಕಿಯ ಗೋಳನ್ನು ಕಂಡ ಸ್ಥಳೀಯರು ಪೊಲೀಸರಿಗೆ ದೂರ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಅವರನ್ನು ತಡೆಯಲಾಯಿತು ಈ ವಿಚಾರವಾಗಿ ಗಮನಕ್ಕೆ ತಂದಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶೋಭಾ ಶೆಟ್ಟಿ ಅವರು ಸ್ಥಳಕ್ಕೆ ಬಂದು ಗೇಟ್ ತೆಗೆಯದಿದ್ದಾಗ ಗೇಟ್ ಅನ್ನು ತೆಗೆಸಿ ಶಿಕ್ಷಕಿಯೊಂದಿಗೆ ಶಾಲೆಯ ಒಳಗೆ ಪ್ರವೇಶಿಸಿದರು. ಶಾಲಾ ಮಂಡಳಿಯ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡ ಶಿಕ್ಷಣಾಧಿಕಾರಿಗಳು ಇಲ್ಲಿ ಕೆಲಸ ಮಾಡಿಕೊಂಡಿರುವ ಶಿಕ್ಷಕಿಯನ್ನು ಒಳಗೆ ಬಿಡದಿರುವುದು ಸರಿಯಲ್ಲ ನಿಮ್ಮ ಸಮಸ್ಯೆ ಏನಿದ್ದರೂ ಆಡಳಿತ ಮಂಡಳಿಯೊಳಗೆ ತೀರ್ಮಾನಿಸಿಕೊಳ್ಳಬೇಕು.
ಶಾಲಾ ಆಡಳಿತ ಮಂಡಳಿಯ ಮೇಲೆ ಮತ್ತು ಸಂಚಾಲಕನ ಮೆಲೆ ಈ ಹಿಂದೆ ಹಲವಾರು ದೂರುಗಳಿವೆ. ಈ ಕುರಿತು ಶಿಕ್ಷಣಾಧಿಕಾರಿಗಳು ಮೇಲಾಧಿಕಾರಿಗಳಿಗೆ ದೂರು ನೀಡಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ ಮತ್ತು ಶಾಲಾ ಸಮಸ್ಯೆಯನ್ನು ಮಾತುಕತೆಯ ಮೂಲಕ ತಿಳಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
The teacher was rudely treated by the school administrator, the security guard stopped the teacher from coming to the school
Kundapur: In an English medium school in Basrur, the school administrator behaved indecently near the teacher, the vice principal of that school, who came out protesting against this, lodged a complaint with the police and a case was registered at the Kundapur rural police station.
When the teacher came to the school as usual, the security guard stopped her for more than half an hour and prevented her from entering the school. Locals saw the teacher’s body and gave it to the police.
When the PSI arrived at the spot, he was stopped, when the matter was brought to the attention of the field education officers, Shobha Shetty, who came to the spot and did not remove the gate, removed the gate and entered the school along with the teacher. It is not right for the education officers who have taken the head of the school board to task and not allow the teacher who has worked here, whatever your problem is, it should be decided within the management board.
There have been several complaints against the school board and the conductor in the past. The education officials have warned that a complaint will be made to the superiors and the school has managed to resolve the issue through talks.