ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ 26 : ಕಾರ್ಗಿಲ್ ವಿಜಯದ ದಿವಸಕ್ಕೆ 22 ವರ್ಷಗಳ ಸಂಭ್ರಮ. ದೇಶದ ರಕ್ಷಣೆ, ಭದ್ರತೆ, ಐಕ್ಯತೆಯನ್ನು ಎತ್ತಿ ಹಿಡಿದು ಕಾಪಾಡುವಲ್ಲಿ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಾಡಿದ ಹುತಾತ್ಮ ಯೋಧರನ್ನು ನೆನಪಿಸುವ ದಿನವೆಂದು ಕನ್ನಡ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಜೆ.ಜಿ ನಾಗರಾಜ ಅಭಿಪ್ರಾಯ ಪಟ್ಟರು.
ಅವರು ನಗರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆಯಲ್ಲಿ ಯೋಧರಾದ ಅಶೋಕ್ ಅವರನ್ನು ಸನ್ಮಾನಿಸಿ ಮಾತಾನಾಡುತ್ತಿದ್ದರು
ಪಾಕಿಸ್ತಾನ ಸೇನೆ 1999 ರಲ್ಲಿ ಕಾರ್ಗಿಲ್ ಡ್ರಾಸ್ ವಲಯದಲ್ಲಿ ಅಕ್ರಮವಾಗಿ ಪ್ರವೇಶಿಸಿ ಭಾರತದ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿತ್ತು. ಅಕ್ರಮಣ ಮಾಡಲು ಬಂದ ಪಾಕಿಸ್ತಾನ ಸೈನಿಕರ ವಿರುದ್ಧ ಭಾರತೀಯ ಸೇನೆಗೆ ಯುದ್ಧ ಮಾಡದೆ ಬೇರೆ ದಾರಿಯಿರಲಿಲ್ಲ. ಆಗ ಕೇಂದ್ರ ಸರ್ಕಾರ ಆಪರೇಷನ್ ವಿಜಯವನ್ನು ಘೋಷಿಸಿತು. ಎರಡೂವರೆ ತಿಂಗಳ ಕಾಲ ಕಾರ್ಗಿಲ್ ನಲ್ಲಿ ಯುದ್ಧ ನಡೆದು ಕೊನೆಗೆ ಭಾರತೀಯ ಸೇನೆ ಪಾಕಿಸ್ತಾನ ಸೇನೆಯನ್ನು ಹಿಮ್ಮೆಟ್ಟುವಲ್ಲಿ ಯಶಸ್ವಿಯಾಯಿತು ಈ ದಿನದ ವಿಜಯೋತ್ಸವವನ್ನು ಮತ್ತು ಭಾರತೀಯ ಸೈನಿಕರು ತ್ಯಾಗ ಬಲಿದಾನಗಳನ್ನು ನೆನೆಯಲು ಪ್ರತಿವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯದ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು…
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ. ನಾರಾಯಣಪ್ಪ ಅವರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ನಿರಂತರವಾಗಿ 22 ವರ್ಷಗಳಿಂದ ಕಾರ್ಗಿಲ್ ವಿಜಯೋತ್ಸವ ದಿನ ಆಚರಣೆ ಮಾಡಿಕೊಂಡು ಬರುತ್ತಿದೆ. ಈ ಪ್ರತಿವರ್ಷದ ಈ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರನ್ನೂ ಗೌರವಿಸುತ್ತಾ ಬರುತ್ತಿದೆ. ಈ ವರ್ಷವೂ ಕೂಡ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಹವಾಲ್ದಾರ್ ಅಶೋಕ್ ಅವರನ್ನು ಸನ್ಮಾನಿಸಿ ಮಾತಾನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಸಂಘದ ಅಧ್ಯಕ್ಷ ಜಿ. ಶ್ರೀನಿವಾಸ್ ಮಾತನಾಡಿ ಕಾರ್ಗಿಲ್ ಯುದ್ಧದ ಹಿನ್ನೆಲೆ ಕಾರಣ ಮತ್ತು ಯುದ್ಧ ಸಾಗಿದ ಕುರಿತು ವಿವರವಾದ ಮಾಹಿತಿ ನೀಡಿದರು. ನಮ್ಮ ನಾಳಿನ ಉತ್ತಮ ಭವಿಷ್ಯಕ್ಕಾಗಿ ಕಾರ್ಗಿಲ್ ಹುತಾತ್ಮ ಯೋಧರು ತಮ್ಮ ಅತ್ಯಮೂಲ್ಯ ಪ್ರಾಣವನ್ನು ತ್ಯಾಗ ಬಲಿದಾನವಾಗಿ ನೀಡಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಶೋಕ್ ಹವಾಲ್ದಾರ್ ಅವರು. ಆ ಕಷ್ದ ದಿನಗಳನ್ನು ನೆನೆದರೆ ಮೈ ರೋಮಾಂಚನವಾಗುತ್ತದೆ. ಆ ಸ್ಥಿತಿಗತಿಗಳನ್ನು ಕಣ್ಣಾರೆ ಕಂಡರೆ ಜೀವ ಬಂದು ಹೋದಂತೆ ಭಾಸವಾಗುತ್ತದೆ. ದೇಶವೇ ಮುಖ್ಯವಾಗುವಂತಹ ಸಂದರ್ಭದಲ್ಲಿ ತಮ್ಮ ಪ್ರಾಣ ಲೆಕ್ಕಕ್ಕೆ ಬಾರದು ಸೈನಿಕರಿಗೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಬಿ. ಶಿವಕುಮಾರ್, ಚಿಟ್ನಹಳ್ಳಿ ರಾಮಚಂದ್ರ, ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ಕನ್ನಡ ಸಾಂಸ್ಕøತಿಕ ಪರಿಷತ್ತಿನ ಅಧ್ಯಕ್ಷ ಎಸ್.ಸಿ ವೆಂಕಟಕೃಷ್ಣಪ್ಪ, ಸಿ. ರವೀಂದ್ರಸಿಂಗ್. ಪೆÇೀಸ್ಟ್ ನಾರಾಯಣಸ್ವಾಮಿ, ಟಿ. ಸುಬ್ಬರಾಮಯ್ಯ, ಕೆ.ಎನ್ ಪರಮೇಶ್ವರನ್, ಡಾ. ಶರಣಪ್ಪ ಗಬ್ಬೂರು ಹಾಗೂ ಕುಟುಂಬದ ಸದಸ್ಯರೆಲ್ಲರು ಭಾಗವಹಿಸಿದ್ದರು.