ಮಿತಿ ಮೀರಿದ ಕೇಸರಿ ಶಾಲಿನ ಹುಚ್ಚು, ಧ್ವಜಸ್ತಂಭ ಹತ್ತಿ ಕೇಸರಿ ಬಾವುಟ ಹಾರಿಸಿದ ವಿದ್ಯಾರ್ಥಿಗಳು

JANANUDI.COM NETWORK


ಶಿವಮೊಗ್ಗ: ರಾಜಕೀಯ ಪ್ರೇರಿತವಾಗಿ ಕಾಲೇಜು ಕ್ಲಾಸ್ ಒಳಗೆ ಬಂದ ಕೇಸರಿ ಶಾಲು, ಬೀದಿ ಬೀದಿಯಲ್ಲಿ ಕೇಸರಿ ಶಾಲು ಸುತ್ತಿದ ಬಳಿಕ ಯೋಚನೆಗೂ ನಿಲುಕದಂತೆ, ಶಿವಮೊಗ್ಗದ ಸರ್ಕಾರಿ ಪದವಿ ಕಾಲೇಜಿನಲ್ಲಿ ತ್ರಿವರ್ಣ ಧ್ವಜ ಹಾರಿಸುವ ಧ್ವಜ ಸ್ತಂಭ ಏರಿ ಕೇಸರಿ ಶಾಲನ್ನು ಹಾರಿಸಿದ ಅಘಾರಕಾರಿ ಘಟನೆ ನಡೆದಿದೆ.
ವಿದ್ಯಾರ್ಥಿನಿಯರಿಗೆ ಸ್ಕಾರ್ಫ್ ಧರಿಸಿ ಕಾಲೇಜಿಗೆ ಬರಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿ, ಕೇಸರಿ ಶಾಲು ಧರಿಸಿ ಬಂದ ಕೆಲವು ವಿದ್ಯಾರ್ಥಿಗಳು ಕಾಲೇಜಿನ ಧ್ವಜಸ್ತಂಭ ಏರಿ ಕೇಸರಿ ಧ್ವಜ ಹಾರಿಸಿದ್ದು, ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಿವಮೊಗ್ಗ ನಗರದ ಬಾಪೂಜಿನಗರದಲ್ಲಿರುವ ಸರ್ಕಾರಿ ಪದವಿ ಕಾಲೇಜಿನ ಹೊರ ಭಾಗದಲ್ಲಿ ವಿದ್ಯಾರ್ಥಿಗಳ ನಡುವೆ ಪರಸ್ಪರ ಕಲ್ಲುತೂರಾಟ ನಡೆದಿದೆ ಎನ್ನಲಾಗಿದ್ದು, ಇನ್ನೂ ಪರಿಸ್ಥಿತಿ ಕೈ ಮೀರುವುದನ್ನು ಅರಿತ ಪೆÇಲೀಸರು ಲಾಠಿ ಬೀಸಿದ್ದು, ಗುಂಪುಗಳನ್ನು ಚದುರಿಸಿದ್ದಾರೆ. ಎಸ್.ಪಿ.ಲಕ್ಷ್ಮೀಪ್ರಸಾದ್ ಅವರು ಖುದ್ದಾಗಿ ಲಾಠಿ ಹಿಡಿದು ಕಾರ್ಯಾಚರಣೆಗೆ ಇಳಿದರು.
ಇದೊಂದು ರಾಜಕೀಯ ಷಡ್ಯಂತ್ರವಾಗಿದೆ ಎಂದು ಯಾರೂ ಹೇಳಬಹುದು, ಭಾರತ ದೇಶ ಹೆಣ್ಮಕ್ಕಳಿಗೆ, ಹೆಂಗಸರಿಗೆ ಬಹಳ ಗೌರವ ಕೊಡುವ ದೇಶವೆಂದು ನಾವು ಹೇಳುಕೊಳ್ಳುತಿದ್ದೆವೆ. ಆದರೆ ಈಗ ಇದಕ್ಕೆ ಕಪ್ಪು ಚುಕ್ಕೆ ಬಂದಿದೆ. ಕಾರಣ ಹೆಣ್ಮಕ್ಕಳು ತಮ್ಮ ಮರ್ಯಾದೆಗಾಗಿ ಹಾಕಿ ಕೊಂಡು ಬರುತಿದ್ದ ಹಿಜಾಬ್ ಹಾಕಬಾರದು ಎಂದು ಏಕಾಏಕಿ ಕೆಲವು ಹುಡುಗರು ಕೇಸರಿ ಶಾಲು ಹಾಕಿಕೊಂಡು ಬಂದರು.


ಈ ಹುಡುಗರು ಹೆಣ್ಮಕ್ಕಳು ಹಿಜಾಬ್ ತಲೆ ಮೇಲೆ ಹಾಕಿದಂತೆ ತಲೆ ಮೇಲೆ ಹಾಕ ಬೇಕಲ್ಲವೆ? ಇವರು ಕುತ್ತಿಗೆಗೆ ಸುತ್ತಿಕೊಳ್ಳುತ್ತಾರೆ, ವಿಚಿತ್ರ ಬುದ್ದಿ. ಯಾರಿಂದ ಕಲಿತರು ಈ ಬುದ್ದಿ ? ಇಂತಹ ನೀಚತನ ಇಲ್ಲಿಂದ (ಉಡುಪಿ) ಆರಂಭ ಮಾಡಿದಕ್ಕೆ, ಬುದ್ದಿವಂತರ ಜಿಲ್ಲೆಯಾದವರ ನಮಗೆ ಬೇರೆ ಜಿಲ್ಲೆಯವರು, ಬೇರೆ ರಾಜ್ಯದವರು ಥು ಛಿ ಅಂತಾ ಉಗಿಯ ತೊಡಗಿದ್ದಾರೆ. ಇದು ಕೊರೊನಾದಿಂದ ಪಾಠ ಸರಿಯಾಗಿ ನಡೆಯದೆ, ಸೊಂಬೇರಿಗಳಾದ ವಿದ್ಯಾರ್ಥಿಗಳು, ಹೇಗಾದರೂ ಮಾಡಿ ಕಾಲೇಜು ಶಿಕ್ಷಣ ನಿಲ್ಲಿಸಿ ಸೊಂಬೇರಿಗಳಾಗಲು ಮಾಡಿದ ಷಡ್ಯಂತ್ರವೇ ? ಅಥವಾ ಮುಂದೆ ಮತ ಪಡೆಯಲು ಹಣೆದ ರಾಜಕೀಯ ಷಡ್ಯಂತ್ರವೇ ತಿಳಿಯುತ್ತಿಲ್ಲ.

ಮತ್ತೊಂದು ವಿಷಯ ಮುಸ್ಲಿಮ್ ಹೆಣ್ಣು ಮಕ್ಕಳೂ ಕೂಡ ಕೈಗೆ ಬಳೆ ತೊಟ್ಟು ಕೊಳ್ಳುತ್ತಾರೆ, ಹಾಗೇ ಹುಡುಗರು ಬಳೆ ತೊಟ್ಟುಕೊಳ್ಳಲು ಸಿದ್ದರಿದ್ದಾರೆಯೇ? ಇವರಿಗೆ ಧರ್ಮ ರಾಜಕೀಯ, ಜಾತಿ ದ್ವೇಷ ಕಲಿಸಿಕೊಟ್ಟ ಕೊಳಕು ಮನಸುಗಳು ಬಳೆ ತೊಟ್ಟುಕೊಳ್ಳಲು ಸಿದ್ದರಿದ್ದಾರೆಯೇ.

ಯಾರೋ ಒಬ್ಬರು ಲೇಖನದಲ್ಲಿ ಬರೆದಿದ್ದಾರೆ, ಸಿಖ್ಖರ ಪಗ್ಡಿ ತೆಗೆಯಲು ನೀವು ಹೇಳುತ್ತಿರಾ ಎಂದು, ಅದು ಆರಂಭವಾದರೆ ಮಣಿಪಾಲದಿಂದಲೇ ಆರಂಭ ಆಗಲಿ ಎಂದು ಬರೆದುಕೊಂಡಿದ್ದಾರೆ.

ಭಾರತದಲ್ಲಿ ಹೆಣ್ಮಕ್ಕಳಿಗೆ ತುಂಬಾ ಗೌರವ ಮರ್ಯಾದೆ ಇದೆ ಆದರಿಂದಲೇ, ಹಿಂದು ಹೆಣ್ಮಕ್ಕಳಲ್ಲಿ, ಸ್ತ್ರೀಯರಲ್ಲಿ ಕೂಡ ಅನ್ಯ ಪುರುಷರಿಗೆ ಮುಖ ಮರೆಮಾಚಲು ಸೆರಗಿನಿಂದ ಮುಖ ಮುಚ್ಚಿಕೊಳ್ಳುತಿದ್ದರು. ಇದನ್ನು ಹಿಂದು ಹುಡುಗುರಿಗೆ ತಿಳಿಯದೆ, ಹಿರಿಯವರಿಗೆ ನೆನಪು ಹೋಗಿತೆ? ಮಕ್ಕಳಲ್ಲಿ ಧರ್ಮ ದ್ವೇಷ ಬಿತ್ತಿದಿದ್ದಾರೆ, ಇಂತಹ ವೀಷ ಬೀಜದಿಂದ ಭಾರತದ ಭವಿಸ್ಯ ಕರಾಳವಾಗುವುದರಲ್ಲಿ ಅನುಮಾನವಿಲ್ಲ.