

ಕೋಲಾರ,ಫೆ.25: ರಾಜ್ಯ ಸರಕಾರ ಜನತೆಗೆ ನೀಡಿದ್ದ ಗ್ಯಾರಂಟಿ ಯೋಜನೆಗಳ ಈಡೇರಿಕೆಗೆ ಹಣವಿಲ್ಲದೆ, ನಾನಾ ಅಭಿವೃದ್ಧಿ ನಿಗಮಗಳಿಗೆ ಮೀಸಲಿಟ್ಟ ಅನುದಾನಗಳ ಹಣದ ಲೂಟಿಯಲ್ಲಿ ತೊಡಗಿದೆ ಎಂದು ಜೆಡಿಎಸ್ ಮುಖಂಡ ಹಾಗೂ ಸಮಾಜ ಸೇವಕ ಸಿಎಂಆರ್ ಶ್ರೀನಾಥ್ ದೂರಿದ್ದಾರೆ.
ನಗರದ ಪಿ.ಸಿ. ಬಡಾವಣೆಯ ಜೆಡಿಎಸ್ ಕಚೇರಿಯಲ್ಲಿ ಬೆಗ್ಲಿಹೊಸಹಳ್ಳಿ ಗ್ರಾಪಂನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರನ್ನು ಅಭಿನಂಧಿಸಿ ಮಾತನಾಡಿ, ರಾಜ್ಯ ಸರಕಾರದ ಐದು ಯೋಜನೆಗಳು ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಮಾರಕವಾಗಿದೆ. ಅಭಿವೃದ್ಧಿಯಲ್ಲಿ ಕುಂಠಿತವಾಗಿದ್ದು, ಇನ್ನೂ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನವಿಲ್ಲ, ಕಾಂಗ್ರೆಸ್ ಪಕ್ಷದ ಶಾಸಕರಿಂದ ಗುದ್ದಲಿ ಪೂಜೆಗಳಿಗೆ ಮಾತ್ರ ಸೀಮಿತವಾಗಿದೆ ಎಂದರಲ್ಲದೆ, ಮೈಸೂರಿನ ಉದಯಗಿರಿಯಲ್ಲಿ ಪೆÇಲೀಸ್ ಠಾಣೆಯ ಮೇಲೆ ಕಲ್ಲುತೂರಾಟ ಹಾಗೂ ಪೆÇಲೀಸ್ ವಾಹನಗಳ ಮೇಲಿನ ಕಲ್ಲುತೂರಾಟ ಘಟನೆಗಳು ನಡೆದಿದ್ದು, ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆಯನ್ನು ರಕ್ಷಣೆ ಮಾಡುವಲ್ಲಿಯೂ ಸಹ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೇಸಿಗೆ ಪ್ರಾರಂಭವಾಗಿದ್ದು, ನಾನಾ ತರಕಾರಿ ಹಾಗೂ ಹಣ್ಣುಗಳನ್ನು ಬೆಳೆಯಲು ರೈತರಿಗೆ ಸುಗ್ಗಿ ಕಾಲ ಒಂದು ಕಡೆಯಾದರೆ, ಎಸ್.ಎಸ್ ಎಲ್.ಸಿ, ಪಿಯುಸಿ ಪರೀಕ್ಷೆಗಳು ಸಮೀಪಿಸುತ್ತಿದ್ದು, ವಿದ್ಯಾರ್ಥಿಗಳ ಮತ್ತು ರೈತರ ಹಿತ ದೃಷ್ಟಿಯಿಂದ ರಾಜ್ಯ ಸರಕಾರ ನಿರಂತರ ವಿದ್ಯುತ್ ಪೂರೈಕೆ ಮಾಡುವ ಕೆಲಸವಾಗಬೇಕು ಎಂದು ಅಗ್ರಹಿಸಿದರು.
ರಾಜ್ಯದಲ್ಲಿ ಮೈತ್ರಿಯಾಗಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಸಂಘಟಿತರಾಗುವ ಮೂಲಕ ರಾಜ್ಯ ಕಾಂಗ್ರೆಸ್ ಪಕ್ಷದ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಬೇಕು ಎಂದರು.
ರಾಜ್ಯದಲ್ಲಿ ಮುಂದೆ ನಡೆಯುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಹಾಗೂ ಎಪಿಎಂಸಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮೈತ್ರಿಯ ಶಕ್ತಿಯನ್ನು ತೋರಿಸಲು ಕಾರ್ಯಕರ್ತರು ಮುಂದಾಗೋಣ ಎಂದು ಹೇಳಿದರು.
ಬೆಗ್ಲಿಹೊಸಹಳ್ಳಿ ಗ್ರಾಪಂನಲ್ಲಿ ಅಧ್ಯಕ್ಷರ ವಿರುದ್ಧ ಸದಸ್ಯರು ಮಂಡನೆ ಮಾಡಿದ ಆವಿಶ್ವಾಸ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಗೆ ಗೆಲುವು ಆಗಿದೆ. ಅಧ್ಯಕ್ಷೆಯಾಗಿ ವರಲಕ್ಷ್ಮಿ ಮತ್ತು ಉಪಾಧ್ಯಕ್ಷೆಯಾಗಿ ಪಾರ್ವತಮ್ಮ ಅವರು ಮುಂದುವರೆದಿದ್ದು, ಸಿಕ್ಕಿರುವ ಅವಕಾಶವನ್ನು ಅಧ್ಯಕ್ಷರು ಗ್ರಾಪಂ ಅಭಿವೃದ್ಧಿಗೆ ಒತ್ತು ನೀಡುವ ನಿಟ್ಟಿನಲ್ಲಿ ಜಿಲ್ಲೆ ಹಾಗೂ ತಾಲೂಕಿನಲ್ಲಿ ಮಾದರಿ ಗ್ರಾಪಂ ಆಗಿ ಮಾಡುವ ಕಾರ್ಯದಲ್ಲಿ ಸಾಗಬೇಕು ಎಂದು ನುಡಿದರು.
ಹಿಂದಿನ ಅಧ್ಯಕ್ಷರ ಬಗ್ಗೆ ಸದಸ್ಯರು ಅವಿಶ್ವಾಸ ಮಂಡನೆ ಮಾಡಿದ ಸಲುವಾಗಿ ಇಂದು ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದಿದೆ ಎಂದರು.
ಈ ಸಂದರ್ಭದಲ್ಲಿ ಬೆಗ್ಲಿಹೊಸಹಳ್ಳಿ ಗ್ರಾಪಂ ಅಧ್ಯಕ್ಷೆ ವರಲಕ್ಷ್ಮಿ, ಉಪಾಧ್ಯಕ್ಷೆ ಪಾರ್ವತಮ್ಮ, ಗ್ರಾಪಂ ಸದಸ್ಯರಾದ ಎಸ್. ನಾರಾಯಣಸ್ವಾಮಿ, ಭಾಗ್ಯಮ್ಮ, ನಾರಾಯಣಮ್ಮ, ರಘು, ಸರಸ್ವತಿ, ಮಂಜುನಾಥ್ ಆರ್, ಮಂಗಳ, ಶ್ರೀನಿವಾಸಪ್ಪ, ನಾಗೇಶ್, ಲಕ್ಷ್ಮಿದೇವಮ್ಮ, ಚರಣ್ರಾಜ್, ಶ್ರೀನಿವಾಸಪ್ಪ, ಚಂದನಾ, ಮೈತ್ರಿ ಪಕ್ಷದ ಮುಖಂಡರಾದ ಬಣಕನಳ್ಳಿ ನಟರಾಜ್, ಬೆಣಜೇನಹಳ್ಳಿ ಮುನಿಯಪ್ಪ, ಬಿ.ಎಂ ಮಂಜುನಾಥ್, ಲಕ್ಷ್ಮಿದೇವಮ್ಮ, ಎಲ್.ಜಿ ಮುನಿರಾಜು, ಬೆಗ್ಲಿ ಹೊಸಹಳ್ಳಿ ವೆಂಕಟೇಶಗೌಡ ಇತರರು ಇದ್ದರು.
