ಸರ್ವರಿಗೂ ಸಮಾನ ಹಕ್ಕುಗಳ ನೀಡಿದ ಚೇತನ
ಅಂಬೇಡ್ಕರ್ ಆದರ್ಶ ಪಾಲಿಸೋಣ – ಸಿಎಂಆರ್ ಶ್ರೀನಾಥ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಸರ್ವರಿಗೂ ಸಮಾನ ಹಕ್ಕುಗಳನ್ನು ನೀಡಿದ ಅಂಬೇಡ್ಕರ್ ಆದರ್ಶವನ್ನು ಪ್ರತಿಯೊಬ್ಬರೂ ಪಾಲಿಸಬೇಕೆಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.
ನಗರದ ಭಾರತ ಸೇವಾದಳ ಕಚೇರಿಯಲ್ಲಿ ಅಂಬೇಡ್ಕರ್ 131 ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಶ್ವಜ್ಞಾನಿ ಅಂಬೇಡ್ಕರ್ ಜಯಂತಿಯನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ, ಇಂತಹ ಮಹಾಪುರುಷ ಭಾರತದಲ್ಲಿ ಜನಿಸಿದವರು ಎಂದು ಹೇಳಿಕೊಳ್ಳುವುದು ನಮ್ಮೆಲ್ಲರ ಹೆಮ್ಮೆ ಎಂದರು.
ಅಧ್ಯಕ್ಷತೆವಹಿಸಿದ್ದ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಯಾವ ದೇಶದಲ್ಲಿ ಗುಡಿ, ಮಸೀ„ ಚರ್ಚುಗಳಿಗಿಂತಲೂ ಶಾಲಾ ಕಾಲೇಜು, ಗ್ರಂಥಾಲಯಗಳು ಹೆಚ್ಚಿರುತ್ತವೆಯೋ ಅಂತ ದೇಶ ಅಭಿವೃದ್ಧಿಪಥದಲ್ಲಿ ಮಂಚೂಣಿಯಲ್ಲಿರುತ್ತದೆಯೆಂಬ ಸಂದೇಶವನ್ನು ಅಂಬೇಡ್ಕರ್ ಸಾರುವ ಮೂಲಕ e್ಞÁನಾರ್ಜನೆಯ ಅಗತ್ಯತೆಯನ್ನು ಪ್ರತಿಪಾದಿಸಿದ್ದಾರೆ, ಇದನ್ನು ಅರಿತು ಎಲ್ಲರೂ ಶಿಕ್ಷಣವಂತರಾಗಬೇಕೆಂದರು.
ಪತ್ರಕರ್ತ ಕೋ.ನಾ.ಮಂಜುನಾಥ್ ಮಾತನಾಡಿ, ಪ್ರತಿಯೊಬ್ಬರಿಗೂ ಸಮಾನತೆಯನ್ನು ನೀಡಿರುವ ಸಂವಿಧಾನವನ್ನು ಅಸ್ಥಿರಗೊಳಿಸುವ ಕೆಲಸ ಇತ್ತೀಚಿನ ದಿನಗಳಲ್ಲಿ ಆಗುತ್ತಿದೆ, ದೇಶದ ಸಮಗ್ರತೆಯ ಹಿತದೃಷ್ಠಿಯಿಂದ ಸಂವಿಧಾನವನ್ನು ಎಂತದ್ದೇ ಹೋರಾಟದ ಮೂಲಕ ಸಂರಕ್ಷಿಸಿಕೊಳ್ಳಬೇಕಿದೆ ಎಂದರು.
ಭಾರತ ಸೇವಾದಳ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಇಡೀ ವಿಶ್ವವೇ e್ಞÁನದ ಸಂಕೇತವಾಗಿ ಅಂಬೇಡ್ಕರ್‍ರನ್ನು ಗುರುತಿಸಿ ಗೌರವಿಸುತ್ತಿದೆ, ಇಂತ ಮಹನೀಯರ ಜನ್ಮದಿನಾಚರಣೆಯನ್ನು ಸಾರ್ಥಕ ಕಾರ್ಯಗಳ ಮೂಲಕ ನಡೆಸುವಂತಾಗಬೇಕೆಂದರು.
ಭಾರತ ಸೇವಾದಳ ಮಾಲೂಕು ತಾಲೂಕು ಅಧ್ಯಕ್ಷ ಬಹದ್ದೂರ್ ಸಾಬ್ ಮಾತನಾಡಿ, ಅಂಬೇಡ್ಕರ್‍ರ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಮೂಲ ಮಂತ್ರವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಥದಲ್ಲಿ ಕರೆದೊಯ್ಯಲು ಸಾಧ್ಯವಾಗುತ್ತದೆಯೆಂದರು.
ವೇದಿಕೆಯಲ್ಲಿ ಸೇವಾದಳ ಕಾರ್ಯದರ್ಶಿ ಸುಧಾಕರ್, ತಿರುಮಲೇಶ್ ಇತರರು ಉಪಸ್ಥಿತರಿದ್ದರು. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಅರ್ಪಿಸಲಾಯಿತು.
ಭಾರತ ಸೇವಾದಳ ಜಿಲ್ಲಾ ಸಂಘಟಿಕ ದಾನೇಶ್ ಕಾರ್ಯಕ್ರಮ ನಿರೂಪಿಸಿದರು. ಸರ್ವಧರ್ಮ ಪ್ರಾರ್ಥನೆಯಿಂದ ಆರಂಭವಾಗಿ ರಾಷ್ಟ್ರಗೀತೆ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.