ಹೂಕೋಸು ಕದ್ದ ಆರೋಪ ಹೊರಿಸಿ ವೃದ್ಧೆ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಒಡಿಶಾದಲ್ಲಿ ನಡೆದಿದೆ. ಆರೋಪಿ ಒಡಿಶಾದ ಕಿಯೋಂಜಾರ್ ಜಿಲ್ಲೆಯ ಶತ್ರುಘ್ನ ಮಹಂತ (39) ಎಂದು ತಿಳಿದು ಬಂದಿದೆ. ಕೃತ್ಯ ಎಸಗಿದ ಆರೋಪಿಯನ್ನು ಘಟನೆಯ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಶನಿವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ವೃದ್ದೆ ತಾಯಿ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಿದ್ದು, ಗಾಯಗಳು ಆಗಿದ್ದ ಹೇಗೆ ಎಂದು ಆಸ್ಪತ್ರೆ ಅಧಿಕಾರಿಗಳು ಪ್ರಶ್ನಿಸಿದಾಗ, ವೃದ್ಧೆ ತನ್ನ ಮಗ ಶತ್ರುಘ್ನ ಮಹಂತ ತನಗೆ ಹಲ್ಲೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಹೀಗಾಗಿ ಆಸ್ಪತ್ರೆ ಅಧಿಕಾರಿಗಳು ಪೊಲೀಸರಿಗೆ ಕರೆ ಮಾಡಿದ್ದಾರೆ.ವೃದ್ಧೆಯೊಬ್ಬರೇ ತಮ್ಮ ಮನೆಯಲ್ಲಿ ಒಬ್ಬರೇ ವಾಸವಾಗಿದ್ದು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಹಿರಿಯ ಮಗ ವರ್ಷಗಳ ಹಿಂದೆ ತೀರಿಕೊಂಡ. ನಂತರ ಅವರು ತನ್ನ ಕಿರಿಯ ಮಗನೊಂದಿಗೆ ಕೆಲವು ದಿನಗಳವರೆಗೆ ಇದ್ದರು . ಆದರೆ ಕೌಟುಂಬಿಕ ಕಲಹದಿಂದ ಅವರು ಮನೆಯಿಂದ ದೂರ ಸರಿದು ಒಂಟಿಯಾಗಿ ವಾಸವಾಗಿದ್ದರು. ಸರಕಾರಿ ಪಡಿತರ ಹಾಗೂ ಸ್ಥಳೀಯರ ನೆರವಿನಿಂದ ಜೀವನ ಸಾಗಿಸುತ್ತಿದ್ದಾರೆ.ಇತ್ತೀಚೆಗಷ್ಟೇ ಹಣದ ಕೊರತೆಯಿಂದ ತಾಯಿ ತಮ್ಮ ಮಗನ ಜಮೀನಿನಲ್ಲಿದ್ದ ಹೂಕೋಸುಗಳನ್ನು ನೆರೆಯವರಿಗೆ ಮಾರಿದ್ದರು. ವಿಷಯ ತಿಳಿದ ಮಗ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿದ್ದಾನೆ. ಡಿಸೆಂಬರ್ 20ರಂದು ಈ ಘಟನೆ ನಡೆದಿದ್ದು, ಮಗನ ಕ್ರೂರ ಕೃತ್ಯದ ವಿಡಿಯೋ ಹಾಗೂ ಫೋಟೋಗಳು ಪೊಲೀಸರ ಕೈ ಸೇರಿವೆ.