JANANUDI.COM NETWORK

ನವದಹೆಲಿ, ಫೆ. 15: ಉಕ್ರೇನ್ – ರಷ್ಯಾ ರಾಷ್ಟ್ರಗಳ ನಡುವಿನ ತೀವ್ರಗೊಂಡಿದ್ದು, ಉಕ್ರೇನ್ ದೇಶವನ್ನು ತೊರೆಯುವಂತೆ ಜಗತ್ತಿನ ಹಲವು ರಾಷ್ಟ್ರ ಗಳು ತಮ್ಮ ಪ್ರಜೆಗಳಿಗೆ ಸೂಚಿಸಿದೆ. ಈಗ ಭಾರತ ಕೂಡ ತನ್ನ ಪ್ರಜೆಗಳಿಗೆ ಸೂಚನೆ ನೀಡಿದೆ.
ಭಾರತ ಉಕ್ರೇನ್‌ನಲ್ಲಿರುವ ತನ್ನ ನಾಗರಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ದೇಶವನ್ನು ತಾತ್ಕಾಲಿಕವಾಗಿ ತೊರೆಯುವಂತೆ ಉಕ್ರೇನ್ ನಲ್ಲಿನ ಭಾರತದ ರಾಯಭಾರಿ ಕಚೇರಿ ಇಂದು ಸಲಹೆ ನೀಡಿದೆ.
ಉಕ್ರೇನ್ ಮೇಲೆ ರಷ್ಯಾದ ಸಂಭವನೀಯ ಆಕ್ರಮಣದಿಂದಾಗಿ ಉದ್ವಿಗ್ನತೆ ಹೆಚ್ಚುತಿದ್ದುದುದು ಇದಕ್ಕೆ ಕಾರಣವಾಗಿದೆ. ರಷ್ಯಾವು ತನ್ನ ಗಡಿಯಲ್ಲಿ ತನ್ನ ಸೈನಿಕರ ಸಂಖ್ಯೆಯನ್ನು ಮತ್ತು ಸೇನಾವಾಹನಗಳ ಸಂಖ್ಯೆಯನ್ನು ಗಣನೀಯವಾಗಿ ಏರಿಕೆ ಮಾಡಿದೆ.
ಉಕ್ರೇನ್ ತೊರೆಯಲು ಈಗಾಗಲೇ ಹಲವು ದೇಶಗಳು ತಮ್ಮ ಪ್ರಜೆಗಳಿಗೆ ಸೂಚನೆ ನೀಡಿವೆ, ಅವುಗಳಲ್ಲಿ ಅಮೆರಿಕ, ಜರ್ಮನಿ, ಇಟಲಿ, ಬ್ರಿಟನ್, ಐರ್ಲೆಂಡ್, ಬೆಲ್ಜಿಯಂ, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್, ಕೆನಡಾ, ನಾರ್ವೆ, ಎಸ್ಟೋನಿಯಾ, ಲಿಥುವೇನಿಯಾ, ಬಲ್ಗೇರಿಯಾ, ಸ್ಲೊವೇನಿಯಾ, ಆಸ್ಟ್ರೇಲಿಯಾ, ಜಪಾನ್, ಇಸ್ರೇಲ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಗಳು ಸೆರೆಯಿದ್ದು ಇದೀಗ ಭಾರತ ಕೂಡ ಸೇರಿಕೊಂಡಿತು.