ಕುಂದಾಪುರ, ಕೆನರಾ ಪ್ರಾಂತ್ಯದ ಕಪುಚಿನ್ ಸಭೆಯ ಹಿರಿಯ ಧರ್ಮಗುರು ವಂ| ಪ್ಯಾಟ್ರಿಕ್ ಕ್ರಾಸ್ತಾ ಅವರು ಬೆಂಗಳೂರಿನ ಸೈಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಅಲ್ಪ ಕಾಲದ ಅಸ್ವಸ್ಥತೆಯಿಂದ 2024 ಜೂನ್ 27 ರಂದು ದೈವಾಧೀನರಾದರು.ಅವರು ಗಂಗೊಳ್ಳಿ ಧರ್ಮಕೇಂದ್ರದ ವ್ಯಾಪ್ತಿಯಲ್ಲಿನ ಕನ್ನಡ ಕುದ್ರುವಿನ, ದಿ.ರೋಸಾರಿಯೊ ಕ್ರಾಸ್ತಾ ಮತ್ತು ದಿ.ಸಿಸಿಲಿಯಾ ಕ್ರಾಸ್ತಾ ಇವರ ಪುತ್ರನಾಗಿ 1943 ಅಕ್ಟೋಬರ್ 3 ರಂದು ಜನಿಸಿದರು. ಅವರು ಬಾಲ್ಯದಲ್ಲಿನ ಶಿಕ್ಷಣ ಗಂಗೊಳ್ಳಿಯಲ್ಲಿ ಕಲಿತು, ಅದ ನಂತರ ಅವರು ಕಪುಚಿನ್ ಸಭೆಯಲ್ಲಿ ಗುರುದೀಕ್ಷೆಯನ್ನು ಪಡೆದುಕೊಂಡರು.
ತಮ್ಮ ಧಾರ್ಮಿಕ ಜೀವನದಲ್ಲಿ ಉತ್ತಮ ಹುದ್ದೆಗಳನ್ನು ಅಲಂಕರಿಸಿದರು. ಅವರು ರೋಮ್ ನಲ್ಲಿ ಬೈಬಲ್ ವಿಷಯದಲ್ಲಿ ಉನ್ನತ ಶಿಕ್ಷಣವನ್ನು ಪಡೆದು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ಕಪುಚಿನ್ ಸಭೆಯ ಕರ್ನಾಟಕ-ಗೋವಾ-ಮಹಾರಾಷ್ಟ್ರ ಪ್ರಾಂತ್ಯದ ಪ್ರಾಂತ್ಯಾಧಿಕಾರಿಗಳಾಗಿದ್ದರು. ಅಲ್ಲದೆ ಅವರು ಮೈಸೂರು, ಕೃಪಾಲಯ, ಬೊಗಾಡಿ, ಮೈಸೂರ್, ಶಾಂತಿ ಸದನ (FISI) ಬೆಂಗಳೂರಿನ ಶಾಂತಿ ಸಾಧನ ಕೇಂದ್ರ, ದೀನ ಸೇವಾ ಆಶ್ರಮ ದೈವಶಾಶ್ತ್ರ ಕೇಂದ್ರದಲ್ಲಿಯೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು 7 ಜನ ಸಹೋದರರಾಗಿದ್ದಾರೆ ಮತ್ತು ಓರ್ವ ಸಹೋದರಿ ಒಡಹುಟ್ಟಿದವರಾಗಿದ್ದಾರೆ,. ಅವರಲ್ಲಿ ಓರ್ವ ಸಹೋದರ ಫಾ.ರುಡೊಲ್ಪ್ ಎಸ್.ವಿ.ಡಿ. ಸಭೆಯ ಧರ್ಮಗುರುಗಳಾಗಿದ್ದಾರೆ. ದೈವಾಧೀನರಾದ ಫಾ.ಪ್ಯಾಟ್ರಿಕ್ ಕ್ರಾಸ್ತಾ ಓರ್ವ ಜನಪ್ರಿಯ ಧರ್ಮಗುರುಗಳಾಗಿದ್ದು, ಜನರಿಗೆ ಅತ್ಯಂತ ಪ್ರೀತಿಪಾತ್ರರಾಗಿದ್ದರು. ಇವರ ಅಂತಿಮ ವಿಧಿವು ಫರಂಗಿಪೇಟೆಯ ಕಪುಚಿನ್ ಗುರುಮಠದಲ್ಲಿ ಜುಲಾಯ್ 1 ರಂದು ಸೋಮವಾರ ಸಂಜೆ 3 ಗಂಟೆಗೆ ಜರಗುವುದು.
The senior priest of the Capuchin congregation, Rev Patrick Crasta (80) passes away
Kundapur: The senior priest of the Capuchin Congregation of Kundapur, Canara Province, Rev Patrick Crasta passed away on June 27, 2024 after a brief illness at St. John’s Hospital, Bangalore.
He was born on October 3, 1943, the son of Rosario Crasta and Cecilia Crasta of Kannada Kudru under Gangolli Parish. He was educated in Gangoli as a child, after which he was ordained in a Capuchin congregation.
He held good positions in his religious life. He received higher education in the Bible in Rome and worked as a professor. He was Provincial of the Karnataka-Goa-Maharashtra Province of the Capuchin Congregation. He has also served as a professor at Mysore, Kripalaya, Bogadi, Mysore, Shanti Sadan Center (FISI) Bangalore, Deena Seva Ashram Daivasashtra Kendra. He has 7 brothers and one sister as siblings. One of them was Fr. Rudolph S.V.D. are pastors of the congregation. Reverend Father Patrick Krasta was a popular priest and loved by the people. His last rites will be held at Capuchin Guru Math, Farangipet on Monday, July 1 at 3 pm.