ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ : ಪಟ್ಟಣದ ನಾಗರಿಕರ ಆರೋಗ್ಯ ರಕ್ಷಣೆಯಲ್ಲಿ ಪೌರ ಕಾರ್ಮಿಕರ ಪಾತ್ರ ಹಿರಿದು.ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹೇಳಿದರು . ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು , ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಅಗತ್ಯ ಗಮನ ನೀಡಬೇಕು . ಕಾರ್ಯನಿರ್ವಹಣೆ ಸಮಯದಲ್ಲಿ ಸುರಕ್ಷತಾ ಪರಿಕರ ಧರಿಸಬೇಕು . ಪೌರ ಕಾರ್ಮಿಕರು ಆರೋಗ್ಯದಿಂದ ಇದ್ದಾಗ ಮಾತ್ರ ಜನರ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು . ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್ , ಉಪಾಧ್ಯಕ್ಷೆ ಆಯಿಷಾ ನಯಾಜ್ , ಹಿರಿಯ ಪೌರ ಕಾರ್ಮಿಕರಾದ ಬಾಲಕೃಷ್ಣ , ರಾಮಚಂದ್ರಪ್ಪ , ಸದಸ್ಯರಾದ ಅನ್ನಿಸ್ ಅಹ್ಮದ್ , ಭಾಸ್ಕರ್ , ಬಿ.ವೆಂಕಟರೆಡ್ಡಿ , ರಾಜು , ವಿನೋದ್ , ರಮೇಶ್ , ಆರೋಗ್ಯ ನಿರೀಕ್ಷಕ ಎಂ.ಪೃಥ್ವಿರಾಜ್ , ಪರಿಸರ ಅಧಿಕಾರಿ ಡಿ.ಶೇಖರರೆಡ್ಡಿ , ಆರ್ . ನಾಗರಾಜ್ , ಕಂದಾಯ ನಿರೀಕ್ಷಕ ಶಂಕರ್ ಸಿಎಒ ರಾಜೇಶ್ವರಿ , ನಾಗೇಶ್ , ವೇದಾಂತ್ ಶಾಸ್ತ್ರಿ , ಸುರೇಶ್ , ಸಂತೋಷ್ , ಪ್ರತಾಪ್ , ಮಮತ , ಜಯಶ್ರೀ , ಶಾರದ , ಭಾಗ್ಯಮ್ಮ , ಬಾಲಕೃಷ್ಣ , ಸತೀಶ್ , ರಾಮಚಂದ್ರಪ್ಪ ಇದ್ದರು .