ಕೋಲಾರ ಸೆಪ್ಟೆಂಬರ್ 30 : ಕೋಲಾರ ನಗರದ ರಸ್ತೆಗಳು ಸಂಪೂರ್ಣ
ಹಾಳಾಗಿದ್ದು, ನಗರದಲ್ಲಿ ಕಸದ ರಾಶಿಗಳು, ಚರಂಡಿ ತುಂಬಿಕೊಂಡು
ಗಬ್ಬುನಾರುತ್ತಿದ್ದು ಶೀಘ್ರವಾಗಿ ಸಮಸೆ ಬಗೆಹರಿಸಲು ಕೋರಿ ನಗರಸಭಾ
ಪೌರಾಯುಕ್ತರಿಗೆ ಮನವಿಯನ್ನು ನಮ್ಮ ಕೋಲಾರ ರೈತ ಸಂಘವು ಮನವಿ
ನೀಡಿದರು.
ಅಮೃತ್‍ಸಿಟಿ ಯೋಜನೆಯಲ್ಲಿ ಕೋಲಾರ ನಗರದ ಎಲ್ಲಾ ರಸ್ತೆಗಳನ್ನು
ಅಗೆದು ಅದಕ್ಕೆ ತೇಪೆ ಹಾಕುವ ಕೆಲಸ ಮಾಡಿದ್ದು, ಪ್ರಮುಖ ರಸ್ತೆಗಳಾದ
ಎಂ.ಜಿ.ರಸ್ತೆ ಮತ್ತು ದೊಡ್ಡಪೇಟೆ ಪೇಟೆ ರಸ್ತೆಗಳನ್ನು ಹೊರತುಪಡಿಸಿದರೆ
ನಗರದ ಎಲ್ಲಾ ರಸ್ತೆಗಳು ಹಾಕಿರುವ ತೇಪೆ ಕಿತ್ತು ಹೋಗಿದ್ದು, ಹಳ್ಳಗಳಿಂದ
ಕೂಡಿರುತ್ತದೆ. ನಗರ ದೇವತೆ ಕೋಲಾರಮ್ಮ ದೇವಾಲಯವನ್ನು ವೀಕ್ಷಣೆ
ಮಾಡಲು ರಾಜ್ಯದ ನಾನಾ ಭಾಗಗಳಿಂದ ಬರುವ ಜನರು ರಸ್ತೆಗಳನ್ನು ನೋಡಿ
ಇದು ಹಳ್ಳಿನಾ ಇಲ್ಲಾ ನಗರನಾ ಎಂದು ಅಪಹಾಸ್ಯ ಮಾಡುತ್ತಾರೆ.
ಕೋಲಾರ ನಗರದ ಕೋಲಾರಮ್ಮ ದೇವಸ್ಥಾನದ ರಸ್ತೆ, ಗೌರಿಪೇಟೆ
ರಸ್ತೆಗಳು, ಕಠಾರಿಪಾಳ್ಯ, ಸುಣ್ಣಕಲ್ಲುಬೀದಿ, ಕಾರಂಜಿಕಟ್ಟೆ ರಸ್ತೆ,
ದೇವಾಂಗಪೇಟೆ ರಸ್ತೆಗಳು, ಅರಳೆಪೇಟೆ, ಬಂಬುಬಜಾರ್, ಪಾಲಸಂದ್ರ ಲೇಔಟ್,
ಸ್ವಾಮಿ ಲೇಔಟ್, ಗಂಗಮ್ಮನಪಾಳ್ಯ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದೆ.
ನಗರದ ಎಲ್ಲಾ ವಾರ್ಡುಗಳಲ್ಲಿ ಕಸದ ವಿಲೇವಾರಿ ಸರಿಯಾಗಿ ಆಗದೆ ಕಸರ ರಾಶಿ ಬಿದ್ದಿದೆ.
ಅದೇ ರೀತಿ ಚರಂಡಿಗಳು ತುಂಬಿಕೊಂಡು ನಗರವು ಗಬ್ಬು ನಾರುತ್ತಿದೆ.
ವಾಸನೆಗೆ ಜನರು ಮೂಗು ಮುಚ್ಚಿಕೊಂಡು ತಿರುಗಾಡಬೇಕಾಗಿದೆ ಅಲ್ಲದೆ ಇದರಿಂದ
ಸೊಳ್ಳೆಗಳು ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ
ಹೆಚ್ಚಾಗಿದೆ. ಶೀಘ್ರವಾಗಿ ನಗರದ ರಸ್ತೆಗಳಿಗೆ ಡಾಂಬರೀಕರಣ ಮಾಡಿಸಿ, ನಗರದ
ಕಸವನ್ನು ತೆರವುಗೊಳಿಸಿ ಚರಂಡಿಗಳನ್ನು ಸ್ವಚ್ಚಗೊಳಿಸಲು ಮನವಿ
ಮಾಡಿದರು.
ಕೋಲಾರ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಶೀಘ್ರ ಬೀದಿ
ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ಮಾಡಿಸಿ, ಸುರಕ್ಷಿತ ಪ್ರಾಣಿದಯ
ಸಂಘಕ್ಕೆ ಒಪ್ಪಿಸಬೇಕು. ಕೋಲಾರ ನಗರದಲ್ಲಿ ಬೀದಿ ದೀಪಗಳು ಸರಿಯಾಗಿ
ನಿರ್ವಹಣೆ ಮಾಡದೇ ಬಹಳಷ್ಟು ಕಡೆ ಬೀದಿ ದೀಪಗಳು ಇಲ್ಲದೆ ಕತ್ತಲೆಯಿಂದ
ಕೂಡಿರುತ್ತದೆ ಶೀಘ್ರವಾಗಿ ಕೆಟ್ಟು ನಿಂತಿರುವ ಬೀದಿ ದೀಪಗಳನ್ನು ದುರಸ್ತಿ
ಮಾಡಲು ಕೋರಿದರು. ಅದೇ ರೀತಿ ಕೋಲಾರ ನಗರದಲ್ಲಿ ಹಲವು ಶುದ್ಧ
ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿದೆ ಉದಾಹರಣೆಗೆ ಕೋಲಾರಮ್ಮ
ಬಡಾವಣೆಯ ಸೊಪ್ಪಿನ ತೋಟದ 3ನೇ ವಾರ್ಡಿನಲ್ಲಿ ಕೆಟ್ಟುಹೋಗಿದೆ ಸುಮಾರು 10
ತಿಂಗಳಿನಿಂದ ದುರಸ್ತಿ ಮಾಡದೇ ಇರುವುದರಿಂದ ಅಲ್ಲಿನ ನಿವಾಸಿಗಳಿಗೆ ಕುಡಿಯುವ
ನೀರಿನ ಸಮಸ್ಯೆ ಎದುರಾಗಿದೆ. ತಕ್ಷಣ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ
ಮಾಡಿ ಕುಡಿಯುವ ನೀರು ಒದಗಿಸಲು ಕೋರಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್‍ಗೌಡ,
ರಾಜ್ಯ ಗೌರವಾಧ್ಯಕ್ಷ ಕೆ.ಸಿ.ಪಿ.ನಾಗರಾಜ್, ಜಿಲ್ಲಾಧ್ಯಕ್ಷ ಶಿವಕುಮಾರ್.ಕೆ.ವಿ., ಜಿಲ್ಲಾ
ಗೌರವಾಧ್ಯಕ್ಷ ಕೆಂಬೋಡಿ ಕೃμÉ್ಣೀಗೌಡ, ಸಾಮಾಜಿಕ ಕಾರ್ಯಕರ್ತ ಗೌರಿಪೇಟೆ
ಕೆ.ಎನ್.ರವೀಂದ್ರನಾಥ್, ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥಗೌಡ, ಜಿಲ್ಲಾ ಕಾರ್ಯಾಧ್ಯಕ್ಷ
ಕಾಮಧೇನಹಳ್ಳಿ ವೆಂಕಟಾಚಲಪತಿ, ಅಬ್ಬಣಿ ಮುನೇಗೌಡ, ಮುಳಬಾಗಿಲು
ತಾಲ್ಲೂಕು ರವೀಂದ್ರರೆಡ್ಡಿ, ಮುಳಬಾಗಿಲು ತಾಲ್ಲೂಕು ಕಾಯಾಧ್ಯಕ್ಷ ಕೆ.ಎಚ್.
ಮಂಜುನಾಥ್, ಗೋಪಾಲಪ್ಪ, ಮುಳಬಾಗಿಲು ತಾಲ್ಲೂಕು ಗೌರವಾಧ್ಯಕ್ಷ
ವೆಂಕಟಮುನಿರೆಡ್ಡಿ, ಕೋಲಾರ ತಾಲ್ಲೂಕು ಅಧ್ಯಕ್ಷ ತೌಶಿಕ್ ಪಾಷ, ಕೋಲಾರ
ತಾಲ್ಲೂಕು ಗೌರವಾಧ್ಯಕ್ಷ ಹೊಳಲಿ ನಾರಾಯಣಪ್ಪ, ಬಿ.ಎ.ಚಲಪತಿ, ತಮ್ಮೇಗೌಡ,
ಮಾರ್ಜೇನಹಳ್ಳಿ ನಾರಾಯಣಸ್ವಾಮಿ, ಮುಂತಾದವರು ಹಾಜರಿದ್ದರು.