ಶ್ರೀನಿವಾಸಪುರ: ಕುವೆಂಪು ತಮ್ಮ ಸಾಹಿತ್ಯದ ಮೂಲಕ ಸಮಾನತೆ, ಸಹಬಾಳ್ವೆ, ಜೀವನ ಪ್ರೀತಿಯ ಸಂದೇಶ ನೀಡಿ ವಿಶ್ವಮಾನವರಾದರು. ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಶ್ರೀನಿವಾಸಪುರ ಇಲ್ಲಿ, ಕನ್ನಡ ಸಾಹಿತ್ಯ ಪರಿಷತ್ತ, ಕರ್ನಾಟಕ ಜ್ಞಾನ ವಿಜ್ಞಾನ ಪರಿಷತ್ತು ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಈ ಮೂರರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವಮಾನವ ಕುವೆಂಪು ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಹಾಗೂ ಸರ್ಕಾರಿ ನೌಕರರ ಸಂಘದ ತಾಲೂಕಿನ ಅಧ್ಯಕ್ಷರೂ ಆದ ಎಂ. ಬೈರೇಗೌಡ ಅವರು ಹೀಗೆ ನುಡಿದರು. ಕುವೆಂಪು, ಬೇಂದ್ರೆ, ಮಾಸ್ತಿ ಮುಂತಾದ ಕವಿಗಳ ಬದುಕು ಹಾಗೂ ಅವರ ಸಾಹಿತ್ಯದ ವಿಚಾರಗಳನ್ನು ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.
“ಕುವೆಂಪು ಕಾದಂಬರಿಗಳಲ್ಲಿ ಕಲೆಯಾದ ಪ್ರಾದೇಶಿಕತೆ” ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಹಾಗೂ ಲೇಖಕಿಯಾದ ಶ್ರೀಮತಿ ಮಾಯಾ ಬಾಲಚಂದ್ರ ಅವರು, ಕುವೆಂಪು ತಮ್ಮ ದೇಸಿ ಭಾμÉ, ಮಲೆನಾಡಿನ ಮಳೆ, ಮಲೆನಾಡ ಸಂಸ್ಕøತಿ, ಪ್ರಕೃತಿಯ ಮನೋಹರ ದೃಶ್ಯಗಳು, ಜೀವನ ಶೈಲಿ, ಸಂಪ್ರದಾಯ, ಕುಟುಂಬದ ನಂಬಿಕೆಗಳು, ಪ್ರಾಣಿ-ಪಕ್ಷಿ ಹೀಗೆ, ತಮ್ಮ ಮಲೆಗಳಲ್ಲಿ ಮದುಮಗಳು ಹಾಗೂ ಕಾನೂರು ಹೆಗ್ಗಡತಿಯಲ್ಲಿ ಹಾಸುಹೊಕ್ಕಾಗಿಸಿದ್ದಾರೆ. ಈ ಕಾದಂಬರಿಗಳಲ್ಲಿ ಬರುವ ಇಂತಹ ಸಂಗತಿಗಳನ್ನು ಉದಾಹರಿಸಿ, ಓದುವ ಮೂಲಕ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕರಾದ ಎನ್. ಶಂಕರೇಗೌಡ ಅವರು ಕುವೆಂಪು ಅವರು ವಿದ್ಯಾರ್ಥಿಯಾಗಿದ್ದಾಗಿನ ಓದಿನ ಆಸಕ್ತಿ ಹಾಗೂ ಅವರ ಮೇಲಾದ ಸಾಹಿತ್ಯ ಪ್ರೇರಣೆ ಕುರಿತು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಜುಳ ಮೇಡಮ್ ಕುವೆಂಪು ಅವರ ಕವನಗಳ ವಿಶೇಷತೆಯನ್ನು ಸಂಕ್ಷಿಪ್ತವಾಗಿ ತಿಳಿಸಿದರು. ಪ್ರಾಂಶುಪಾಲರಾದ ಪ್ರಾಣೇಶ್ ಅವರು ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಗೋಷ್ಠಿ ಸಂಚಾಲಕರಾದ ಟಿ.ವಿ. ನಟರಾಜ್, ಉಪನ್ಯಾಸಕರಾದ ಎನ್. ವಾಸು, ಜಿ.ಕೆ. ನಾರಾಯಣಸ್ವಾಮಿ, ಶ್ರೀನಾಥ್,
ಕೆ.ಎನ್, ವೇಣುಗೋಪಾಲ್, ರಘುಪತಿ, ಗೋಪಾಲನ್, ಬಿ. ಎನ್. ವೀಣಾ, ಫಿಯಾಜ್ ಅಹಮದ್, ಶಿಕ್ಷಕರು, ಕಸಾಪ ಪದಾಧಿಕಾರಿಗಳಾದ ರವಿಕುಮಾರ್, ಶಿವರಾಮೇಗೌಡ, ಚಂದ್ರಪ್ಪ
ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ರಾಷ್ಟ್ರ ಕವಿ ಕುವೆಂಪು ಕುರಿತು ಪ್ರಬಂಧ ಬರೆದು ವಿಜೇತರಾದ ತಸ್ಮಿಯಾ, ಲತಾ ಹಾಗೂ ಸೌಮ್ಯ ಅವರಿಗೆ ಉಪನ್ಯಾಸಕರಾದ ಗೋಪಿನಾಥ್ ಅವರು ಬಹುಮಾನ ವಿತರಿಸಿದರು.”