3,200 ಪೊಲೀಸ್ ಪೇದೆಗಳ ನೇಮಕಾತಿ ಇದೆ ಶೀಘ್ರದಲ್ಲಿ ಅರ್ಜಿ ಸಲ್ಲಿಸಿ

JANANUDI.COM NETWORK

ಬೆಂಗಳೂರು. ಮೇ. 23: ಪೊಲೀಸ್ ಇಲಾಖೆಯಲ್ಲಿ ನೌಕರಿ ಮಾಡಲು ಆಸಕ್ತಿ ಇದ್ದವರಿಗೆ ಶುಭಸುದ್ದಿ ಇದ್ದು,ಸುಮಾರು 3,200 ಪೊಲೀಸ್ ಪೇದೆಗಳ ನೇರ ನೇಮಕಾತಿಗೆ ಅರ್ಜಿಯನ್ನು ಕರ್ನಾಟಕ ಸರಕಾರ (ಕೆ.ಎಸ್.ಪಿ.) ಆಹ್ವಾನಿಸಲಾಗಿದೆ.
ಆಸಕ್ತರು ಮೇ.25 ರ ಬೆಳಗ್ಗೆ 10 ಗಂಟೆಯಿಂದ ಜೂನ್ 25 ರ ಸಂಜೆ 6 ಗಂಟೆಯೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಜೂನ್ 28 ಶುಲ್ಕ ಪಾವತಿಗೆ ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಸಲು ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ಸೈಟ್ https://recruitment.ksp.gov.in ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 080-22943346 ಸಂಖ್ಯೆಗೆ ಕರೆ ಮಾಡಬಹುದು
.