ಕೆ.ಜಿ.ಎಫ್ ತಾಲ್ಲೂಕಿನಾದ್ಯಂತ ಒತ್ತುವರಿಯಾಗಿರುವ ಕೆರೆ ರಾಜಕಾಲುವೆಗಳನ್ನು ತೆರವುಗೊಳಿಸಲು ನಾಡಕಛೇರಿ ಮುಂದೆ ಹೋರಾಟ ಮಾಡಿ ರಾಜ ಸ್ವ ನೀರೀಕ್ಷಕರಿಗೆ ರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೆ.ಜಿ.ಎಫ್ ಅ-21, ತಾಲ್ಲೂಕಿನಾದ್ಯಂತ ಒತ್ತುವರಿಯಾಗಿರುವ ಕೆರೆ ರಾಜಕಾಲುವೆಗಳನ್ನು ತೆರವುಗೊಳಿಸಲು ವಿಶೇಷ ತಂಡ ರಚನೆ ಮಾಡಿ ಶಿಥಿಲಗೊಂಡಿರುವ ಕೆರೆಗಳನ್ನು ಅಭಿವೃದ್ದಿ ಪಡಿಸಿ ಚೆಕ್‍ಡ್ಯಾಂ ರಾಜಕಾಲುವೆಗಳನ್ನು ನಾಶ ಮಾಡಿರುವ ಏಷಿನ್ ಪೆಪ್‍ಟೆಕ್ ಸೋಲಾರ್ ಮಾಲೀಕರು ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದಿಂದ ಕ್ಯಾಸಂಬಳ್ಳಿ ನಾಡಕಛೇರಿ ಮುಂದೆ ಹೋರಾಟ ಮಾಡಿ ರಾಜಸ್ವ ನೀರೀಕ್ಷಕರಿಗೆ ರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಮುಂಗಾರು ಮಳೆ ಆರ್ಭಟಕ್ಕೆ 30 ವರ್ಷಗಳಿಂದ ಕೋಡಿ ಹರಿಯದ ಕೆರೆಗಳೆಲ್ಲ ತುಂಬಿ ತುಣಕುತ್ತಿದ್ದು, ಸಮಪರ್ಕವಾದ ನೀರು, ರಾಜಕಾಲುವೆಗಳ ಒತ್ತುವರಿಯಿಂದ ರೈತರ ತೋಟಗಳಿಗೆ ನುಗ್ಗಿ ಲಕ್ಷಾಂತರ ರೂಪಾಯಿ ನಾಶವಾಗುತ್ತಿದ್ದರೂ ಶಿಥಿಲಗೊಂಡಿರುವ ಕೆರೆಗಳನ್ನು ಅಭಿವೃದ್ದಿ ಪಡಿಸಬೇಕಾದ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗಿನ ಅರ್ಪಿಸಲು ಮುಂದಾಗಿರುವ ಜನ ಪ್ರತಿನಿಧಿಗಳ ವಿರುದ್ದ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಐತಂಡಹಳ್ಳಿ ಮಂಜುನಾಥ ಆಕ್ರೋಷ ವ್ಯಕ್ತಪಡಿಸಿದರು.
ತಾಲ್ಲೂಕು ಅಧ್ಯಕ್ಷ ಬಸ್ ಮಂಜುನಾಥ ಮಾತನಾಡಿ ಶಾಶ್ವತ ನೀರಾವರಿ ಯೋಜನೆಗಳಲ್ಲಿ ಜನ ಪ್ರತಿನಿಧಿಗಳು ಜಿಲ್ಲೆಗೆ ನೀರು ಹರಿಸುತ್ತೇವೆಂದು ಜನರ ತೆರಿಗೆ ಹಣದಲ್ಲಿ ಸಾವಿರಾರು ಕೋಟಿ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಜೊತೆಗೆ ಪೂರ್ವಜರು ಕಟ್ಟಿ ಬೆಳೆಸಿದ ಕೆರೆ ರಾಜಕಾಲುವೆ ಅಭಿವೃದ್ದಿ ಪಡಿಸಲು ಬರುವ ಅನುದಾನವನ್ನು ನುಂಗಿ ನೀರು ಕುಡಿಯುವ ಅಧಿಕಾರಿಗಳು ಹಾಗೂ ಟೆಂಡರ್‍ದಾರರಿಗೆ ಇತ್ತೀಚೆಗೆ ಸುರಿಯುತ್ತಿರುವ ಮುಂಗಾರು ಮಳೆಗೆ ಕೆರೆಗಳೆಲ್ಲಾ ಸಮೃದ್ದವಾಗಿ ತುಂಬಿ ತುಣಕುತ್ತಿವೆ. ಆದರೆ ಶಿಥಿಲಗೊಂಡಿರುವ ಕೆರೆಗಳನ್ನು ಅಭಿವೃದ್ದಿ ಪಡಿಸಿ ರೈತರ ಬೆಳೆಗಳನ್ನು ರಕ್ಷಣೆ ಮಾಡಿ ತಾಲ್ಲೂಕು ಆಡಳಿತ ವಿಫಲವಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಮಾನವನ ದುರಾಸೆ ಹೆಚ್ಚಾದಂತೆ ಸರ್ಕಾರಿ ಆಸೆಗಳು ದಿನೇ ದಿನೇ ನಶಸಿ ಹೋಗುತ್ತಿವೆ. ರೈತರ ಜೀವನಾಡಿಯಾಗಿರುವ ಕೆರೆಗಳು ಇಂದು ಬಲಾಡ್ಯ ರಿಯಲ್ ಎಸ್ಟೇಟ್ ಉದ್ದಿಮೆಗಳು ರಾಜಕಾರಣಿಗಳ ಹಿಂಬಾಲಕರು ಒತ್ತುವರಿ ಮಾಡಿಕೊಂಡಿದ್ದರೂ, ಹೈಕೋರ್ಟ್ ಅಧೇಶದಂತೆ ತರವುಗೊಳಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆಂದು ಆರೋಪ ಮಾಡಿದರು.
ಕ್ಯಾಸಂಬಳ್ಳಿ ಹೋಬಳಿಯ ಖಾಜಿಮಿಟ್ಟಹಳ್ಳಿ ಗ್ರಾಮದ ಸುತ್ತಮುತ್ತಲ ಸರ್ವೆ ನಂಬರ್‍ಗಳಲ್ಲಿ ನೂರಾರು ಎಕರೆ ಸೋಲಾರ್ ಅಳವಡಿಸಿರುವ ಏಷಿಯನ್ ಪೆಪ್ ಟೆಕ್ ಮಾಲೀಕರು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಚೆಕ್ ಡ್ಯಾಂಗಳನ್ನು ಸರ್ವನಾಶ ಮಾಡಿರುವ ವಿರುದ್ದ ಸತತವಾಗಿ ನಾಲ್ಕು ವರ್ಷಗಳಿಂದ ಹೋರಾಟ ಮಾಡಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಪ ವಿಭಾಗಾಧಿಕಾರಿಗಳ ಕಛೇರಿಯಲ್ಲಿ ಕೇಸನ್ನು ದಾಖಲಿಸಿ, ಆ ನಂತರ ಕೊರೋನಾ ಬಂದ ಹಿನ್ನಲೆಯಲ್ಲಿ ಒತ್ತುವರಿ ತೆರವುಗೊಳಿಸಲಿಲ್ಲ. ಈ ಕೂಡಲೇ ತಾಲ್ಲೂಕು ಆಡಳಿತ ಸ್ಥಳ ಪರಿಶೀಲನೆ ಮಾಡಿ ಚೆಕ್‍ಡ್ಯಾಂ ರಾಜಕಾಲುವೆ ಸರ್ಕಾರಿ ಶಾಲೆಗೆ ಮೀಸಲಿಟ್ಟಿರುವ ಜಮೀನನ್ನು ಒತ್ತುವರಿ ತೆರವುಗೊಳಿಸಿ ಅಭಿವೃದ್ದಿ ಕಾರ್ಯಗಳಿಗೆ ಮೀಸಲಿಡಬೇಕೆಂದು ಅಧಿಕಾರಿಗಳಲ್ಲಿ ಒತ್ತಾಯಿಸಿದು.
ಮನವಿ ಸ್ವೀಕರಿಸಿ ಮಾತನಾಡಿದ ರಾಜಸ್ವ ನೀರೀಕ್ಷಕರಾದ ನಾರಾಯಣಸ್ವಾಮಿರವರು ಕೆರೆ, ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ ಜೊತೆಗೆ ಶಿಥಲಗೊಂಡಿರುವ ಕೆರೆಗಳನ್ನು ಅಭಿವೃದ್ದಿ ಪಡಿಸಲು ಸಮಸ್ಯೆ ಬಗೆ ಹರಿಸುವ ಜೊತೆಗೆ ಏಷಿಯನ್ ಪೆಪ್ ಟೆಕ್ ಸೋಲಾರ್ ಕಂಪನಿ ಮಾಲೀಕರು ನಾಶ ಮಾಡಿರುವ ಚೆಕ್‍ಡ್ಯಾಂಗಳನ್ನು ಸರಿಪಡಿಸುವಂತೆ ನೋಟೀಸ್ ಜಾರಿ ಮಾಡುವ ಭರವಸೆಯನ್ನು ನೀಡಿದರು.
ಈ ಹೋರಾಟದಲ್ಲಿ ಕೆ.ಜಿ.ಎಫ್ ತಾ.ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ್, ಶ್ರೀನಿವಾಸರೆಡ್ಡಿ, ಬಂಗಾರಪೇಟೆ ತಾ.ಅಧ್ಯಕ್ಷ ಮುನ್ನ, ಹಸಿರು ಸೇನೆ ಜಿಲ್ಲಾಧ್ಯಕ್ಷ ಕಿರಣ್, ಶಿವಾರೆಡ್ಡಿ, ಈಕಂಬಳ್ಳಿಮಂಜುನಾಥ್, ಚಲಪತಿ, ಚಾಂದ್‍ಪಾಷ, ಪ್ರತಾಪ್, ಮುಂತಾದವರಿದ್ದರು
.