JANANUDI.COM NETWORK

ಬೆಂಗಳೂರು,ಮೇ : ನಾನು ಕಳೆದ ಎರಡು, ಮೂರು ದಿನಗಳಿಂದ ಚಾನೆಲ್ ನೋಡ್ತಿದ್ದೇನೆ. ದಿನಪತ್ರಿಕೆ ಕೂಡ ನೋಡ್ತಿದ್ದೇನೆ. ಪ್ರಧಾನಿ ಎರಡನೇ ಭಾರಿ ಅಧಿಕಾರಕ್ಕೆ ಬಂದಿದ್ದಾರೆ. ಎರಡು ವರ್ಷ ಪೂರೈಸಿದ್ದಾರೆ. ಒಟ್ಟು ಏಳು ವರ್ಷ ಅಧಿಕಾರ ಪೂರೈಸಿದ್ದಾರೆ.ಎಂದು ಸಂಭ್ರಮ ಪಟ್ಟುಕೊಳ್ಳುತ್ತಾರೆ, ಆದರೆ ಬಿಜೆಪಿಯವರು ಖಾಲಿ ಕೊಡ ಹೊತ್ತು ಸಂಭ್ರಮಿಸುತ್ತಿದ್ದಾರೆ. ಸಾಧನೆ ಮಾತ್ರ ಏನೂ ಇಲ್ಲ. ಇಂತಹ ಪ್ರಧಾನಿ ಸ್ವತಂತ್ರ್ಯ ಭಾರತದಲ್ಲಿ ನೋಡಿಯೇ ಇಲ್ಲ. ಮೋದಿಯ ಜನಪ್ರಿಯತೆ ಕೆಳಗಿಳಿಯುತ್ತಿದೆ. ಇದನ್ನು ನಾನು ಹೇಳ್ತಿಲ್ಲ, ಅಮೆರಿಕ ಹೇಳ್ತಿದೆ. ನಮ್ಮ ದೇಶದ ತಜ್ಙರು ಕೂಡ ಇದನ್ನೇ ಹೇಳ್ತಿದ್ದಾರೆ. ಇದನ್ನ ಮುಚ್ಚಿ ಹಾಕಲು ಜಾಹೀರಾತು ಕೊಡ್ತಿದ್ದಾರೆ. ಪ್ರಧಾನಿಯ ಗೌರವ ಕಡಿಮೆಯಾಗ್ತಿದೆ.. ಇದಕ್ಕೆ ತೇಪೆ ಹಾಕಲು ಪ್ರಯತ್ನ ಮಾಡ್ತಿದ್ದಾರೆ. ಆದರೆ ಜನ ಇವರಿಗೆ ಶಾಪ ಹಾಕುತಿದ್ದಾರೆ’ ಎಂದು ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದರು.
ಸಿದ್ದರಾಮಯ್ಯನವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ’ಕೇಂದ್ರ ಸರ್ಕಾರದ ಸಾಧನೆಗಳು ಅಂದರೆ ರೈತ ವಿರೋಧಿ ಕಾನೂನುಗಳನ್ನು ತಂದಿದ್ದು. ದೇಶದಲ್ಲಿ ಬಹಳಷ್ಟು ಕಾರ್ಖಾನೆಗಳನ್ನು ಮಾರಾಟ ಮಾಡಿದದ್ದು,. ಸಾಕಷ್ಟು ಕಾರ್ಖಾನೆಗಳನ್ನು ಖಾಸಗಿ ಅವರಿಗೆ ಮಾರಾಟ ಮಾಡಿದ್ದು, ಏರ್ಪೋರ್ಟ್, ಬಂದರು, ಕೈಗಾರಿಕೆ ಮಾರುತ್ತಿದ್ದಾರೆ. ಖಾಸಗಿಯವರಿಗೆ ಮಾರಾಟ ಮಾಡಿದ್ದು, ದೇಶ ಅಭಿವೃದ್ಧಿ ಪಥದಲ್ಲಿ ಹೋಗುತ್ತಿಲ್ಲ. ದೇಶ ಕೆಳಗೆ ಕುಸಿಯುತ್ತಿದೆ. ನಿರುದ್ಯೋಗ, ಜಿಡಿಪಿ ಬಿದ್ದಿದ್ದು, ಸಾಲ ಹೆಚ್ಚಳ ಇವೇ ಇವರ ದೊಡ್ಡ ಸಾಧನೆಗಳು. ಏಳು ವರ್ಷದಲ್ಲಿ ದೇಶ ಮುಂದೆ ಸಾಗಬೇಕಿತ್ತು, ಅದರೆ ಹಿಂದೆ ಹೋಗಿದೆ’ ಎಂದು ಸಿದ್ದರಾಮಯ್ಯ ವಿಶ್ಲೇಷಿಸಿದರು.