ಶ್ರೀನಿವಾಸಪುರ : ಈ ಗ್ರಾಮದ ಜನತೆ ಬಹಳ ಶ್ರಮಜೀವಿಗಳು. ನಿಮ್ಮ ಮಕ್ಕಳು ಒಳ್ಳೆಯ ವಿದ್ಯಾವಂತರಾಗಬೇಕು ಎನ್ನುವುದೇ ನನ್ನ ಆಶಯ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಅಭಿಪ್ರಾಯಪಟ್ಟರು.
ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ಮಂಗಳವಾರ ೭.೨೫ ಲಕ್ಷದಲ್ಲಿ ನಿರ್ಮಿಸಲಾದ ಶಾಲೆಯ ನೂತನ ಕೊಠಡಿಯನ್ನು ಉದ್ಗಾಟಿಸಿ ಮಾತನಾಡಿದರು.
ಈ ಶಾಲೆಯ ಮಕ್ಕಳಿಗೆ ಶೌಚಾಲಯ, ಕುಡಿಯುವ ನೀರು, ಕಾಂಪೌAಡ್ ನಿರ್ಮಿಸಬೇಕಾಗಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು . ನೀವು ಬೆಂಗಳೂರಿನಲ್ಲಿನ ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ. ಈ ಒಂದು ದೃಷ್ಟಿಯಿಂದ ಈ ಭಾಗದ ವಿದ್ಯಾರ್ಥಿಗಳಿಗಾಗಿ ೨೫ ಕೋಟಿ ವೆಚ್ಚದಲ್ಲಿ ವಸತಿ ಶಾಲೆಯನ್ನ ನಿರ್ಮಿಸಿ ಉತ್ತಮ ಗುಣಮಟ್ಟವನ್ನು ಹೊಂದಿರುವ ಶಿಕ್ಷರನ್ನ ನೇಮಿಸಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಲಾಗುವುದು ಭರವಸೆ ನೀಡಿದರು.
ಈ ಭಾಗದಲ್ಲಿ ವಸತಿ ಶಾಲೆಯನ್ನು ನಿರ್ಮಿಸಿದರೆ ಕೋನೇಟಿ ತಿಮ್ಮನಪಲ್ಲಿ, ಶಿವಪುರ, ಗೌಡಹಳ್ಳಿ, ಜೆವಿ ಕಾಲೋನಿ ಗ್ರಾಮಗಳಲ್ಲಿನ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.
ಒಂದು ಗ್ರಾಮವು ಅಭಿವೃದ್ಧಿಯಾಗಬೇಕಾದರೆ ಗ್ರಾಮದಲ್ಲಿನ ಎಲ್ಲರೂ ಪಕ್ಷಾತೀತವಾಗಿ ಸೇರಿ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುವಂತೆ ಕರೆನೀಡಿದರು. ಈ ಹಿಂದೆ ಗ್ರಾಮದಲ್ಲಿ ಘರ್ಷಣೆಗಳು ಇತ್ತು , ಘರ್ಷಣೆಗಳನ್ನು ಮರೆತು ಸಹಬಾಳ್ವೆಯೊಂದಿಗೆ ನೆಲಸುವಂತೆ ಮನವಿ ಮಾಡಿದರು. ನನಗೆ ಈ ಭಾಗದ ಮುಖಂಡರಾದ ತಿಮ್ಮಿರೆಡ್ಡಿ, ರಾಮಚಂದ್ರಪ್ಪ, ಸಿದ್ದಪ್ಪ, ಮುನಿಯಪ್ಪ ಸಹಕರಿಸಿದ್ದರು ಎಂದು ಮಾಹಿತಿ ನೀಡಿದರು.
ಇದೇ ಸಮಯದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಹಲವಾರು ಕುಟುಂಬಗಳು ಮುಖಂಡರು ಸೇರ್ಪಡೆಗೊಂಡರು. ಕೆಎಂಎಫ್ ನಿರ್ದೇಶಕ ಎನ್.ಹನುಮೇಶ್, ಮಾಸ್ತೇನಹಳ್ಳಿ ಗ್ರಾ.ಪಂ.ಅಧ್ಯಕ್ಷ ರವಿಕುಮಾರ್, ತಾ.ಪಂ.ಮಾಜಿ ಅಧ್ಯಕ್ಷ ಗರ್ರಪ್ಪ, ಮುಖಂಡರಾದ ಪ್ರಥಮ ದರ್ಜೆ ಗುತ್ತಿಗೆದಾರರಾದ ಗೌಡಹಳ್ಳಿ ವೆಂಕಟರೆಡ್ಡಿ, ಶಿವಪುರ ಎಸ್.ಜಿ.ವಿ ವೆಂಕಟೇಶ್, ಆಲೇರಿ ಬಾಬು, .ವೆಂಕಟೇಶ್, ಗಾಂಡ್ಲಹಳ್ಳಿ ಶಶಿಕುಮಾರ್, ಮುನಿಯಪ್ಪ, ಗಂಗಾಧರ್, ಅಶ್ವತಗೌಡ ,ಅಮರೀಶ್.ಇದರು.