



ತುಮಕೂರು: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಕನಹಾಲ್ ತಾಂಡಾದಲ್ಲಿ ನಡೆದ ಸಾಮೂಹಿಕ ಆತ್ಮಹತ್ಯೆ ಪ್ರಕರಣವು ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ.18ರಿಂದ 24 ವರ್ಷದೊಳಗಿನ ಮೂವರು ಸಹೋದರಿಯರು ನೇಣಿಗೆ ಕೊರಳೊಡ್ಡಿದ್ದು, ಮೂರು ಅಮಾಯಕ ಜೀವ ಬಲಿಗೆ ಇಡೀ ಗ್ರಾಮಸ್ಥರು ಕಣ್ಣೀರಾಗಿದ್ದಾರೆ. ತಂದೆ, ತಾಯಿ, ಅಜ್ಜಿಯನ್ನು ಕಳೆದುಕೊಂಡು ಅನಾಥರಾಗಿದ್ದ ಸಹೋದರಿಯರು ಆತ್ಮಹತ್ಯೆಗೆ ಶರಣಾಗಿರುವುದು ಸಾರ್ವಜನಿಕರ ಹೃದಯ ಕರಗಿಸಿದೆ.
ರಂಜಿತಾ(24), ಬಿಂದು(21) ಚಂದನಾ(18) ಮೃತಪಟ್ಟ ಸಹೋದರಿಯರಾಗಿದ್ದಾರೆ. ಸುಮಾರು 9 ದಿನಗಳ ಹಿಂದೆಯೇ ಸಹೋದರಿಯರು ಆತ್ಮಹತ್ಯೆಗೆ ಶರಣಾಗಿದ್ದು, ಕೆಟ್ಟ ವಾಸನೆ ಬಂದ ಹಿನ್ನೆಲೆಯಲ್ಲಿ, ಶೋಧಿಸಿದಾಗ ಜನವರಿ 19ರಂದು ಈ ದುರ್ಘಟನೆ ಬೆಳಕಿಗೆ ಬಂದಿದೆ.