ವಿಧಾನಸಭೆಯಲ್ಲಿ ಪಾಸ್ ಆದರೂ ಮತಾಂತರ ನಿಷೇಧ ಕಾಯ್ದ ಕಾರ್ಯರೂಪಕ್ಕೆ ಬರುವುದಿಲ್ಲ

JANANUDI.COM NETWORK


ಬೆಳಗಾವಿಯಲ್ಲಿ 24-12-2021 ರಂದು ಸದನದಲ್ಲಿ ಪ್ರತಿಪಕ್ಷಗಳ ವಿರೋಧದ ತರ್ಕಾಗಳ ಮಧ್ಯೆಯೂ ಧ್ವನಿಮತದ ಮೂಲಕ ವಿವಾದಿತ ಮತಾಂತರ ನಿಷೇಧಮಸೂದೆ ಅಂಗೀಕಾರವಾಗಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಕರ್ನಾಟಕ ವಿಧಾನಸಭೆಯಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಕಾನೂನನ್ನು ಮಂಡಿಸಿದ್ದು, ವಿಧೇಯಕ ಧ್ವನಿ ಮತದ ಮೂಲಕ ಅಂಗೀಕಾರ ಪಡೆದಿದೆ.


ಆಷ್ಟಕ್ಕೆ ಇದು ಶಾಸನವಾಗುತ್ತಿಲ್ಲ, ಅದಕ್ಕೆ ವಿಧಾನ ಪರಿಷಷತ್ತಿನಲ್ಲಿ ಮಾನ್ಯತೆ ಸಿಗಬೇಕಾಗಿದೆ. ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2021 ಪಾಸ್ ಆದರೆ ಮಾತ್ರ ಕಾಯ್ದೆ ಪರಿಪೂರ್ಣವಾಗಿ ಕಾರ್ಯರೂಪಕ್ಕೆ ಬರಲಿದೆ. ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಗೆ ಸ್ಪಷ್ಟ ಮತ ಇಲ್ಲದಿರುವುದರಿಂದ, ಬಿಲ್ ಅನುಮೋದನೆ ಆಗುವುದು ಅನುಮಾನ ಎದ್ದು ಕಾಣುತ್ತದೆ.


ಈ ಕಾಯಿದೆಯ ಅನುಸಾರ ಆಮಿಷದದಿಂದ, ಹಣ ಆಸೆಯಿಂದ ವಸ್ತು ರೂಪದಲ್ಲಿ ನೀಡುವ ಮೂಲಕ ಮತಾಂತರಿಸಿದರೆ ಅದು ಅಪರಾಧ ಆಗಲಿದೆ. ಅಲ್ಲದೇ ಮದುವೆಯಾಗೋದಾಗಿ ವಾಗ್ದಾನ ಮಾಡೋದು, ನಿಮಗೆ ಒಳ್ಳೆಯ ಜೀವನ ನೀಡುತ್ತೇವೆ. ಒಂದು ಧರ್ಮವನ್ನು ಮತ್ತೊಂದು ಧರ್ಮಕ್ಕೆ ಹೋಲಿಕೆ ಮಾಡಿ ಧಕ್ಕೆ ಮಾಡಿ ಮನವೊಲಿಸೋದು ಅಪರಾಧವಾಗಲಿದೆ.
ಇನ್ನೂ ಯಾರೇ ವ್ಯಕ್ತಿಯನ್ನು ಶಾರೀರಕ ಹಾನಿ ಉಂಟು ಮಾಡುವ, ಬೆದರಿಕೆ ಒಡ್ಡುವ, ಮಾನಸಿಕ ಒತ್ತಡ, ದೈಹಿಕ ಬಲಪ್ರಯೋಗ ಬಳಸಿ, ಆತನ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಮತಾಂತರಿಸೋದು ಕೂಡ ಒತ್ತಾಯಪೂರ್ವಕವಾದಂತ ಮತಾಂತರ ಆಗಲಿದೆ.
ಇಷ್ಟು ಮಾತ್ರ ಅಲ್ಲದೇ ಮತಾಂತರಗೊಳ್ಳಲಿರುವಂತ ವ್ಯಕ್ತಿಯು 2 ತಿಂಗಳ ಮೊದಲೇ ಸಕ್ಷಮ ಪ್ರಾಧಿಕಾರದ ಮುಂದೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಮಸೂದೆ ಪ್ರಕಾರ, ಯಾರೇ ಮತಾಂತರಗೊಂಡ ವ್ಯಕ್ತಿ, ಆತನ ಪಾಲಕರು, ಸೋದರ, ಸೋದರಿ ಅಥವಾ ಆತನ ರಕ್ತ ಸಂಬಂಧಿ, ಮದುವೆ ಅಥವಾ ದತ್ತು ಮೂಲಕ ಸಂಬಂಧಿ ದೂರು ನೀಡಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಯಾವುದೇ ವ್ಯಕ್ತಿಯನ್ನು ಆಮಿಷ, ಬಲವಂತ, ಒತ್ತಾಯದ ಮೂಲಕ ಮತಾಂತರ ಮಾಡಿದಲ್ಲಿ ಮೂರು ವರ್ಷಗಳಿಂದ 5 ವರ್ಷಗಳ ವರೆಗೆ ಕಾರಾಗೃಹ ಶಿಕ್ಷೆ, 25 ಸಾವಿರ ರೂ.ದಂಡ ವಿಧಿಸಬಹುದಾಗಿದೆಯೆಂದು ಈ ಶಾಸನದಲ್ಲಿ ಇದೆ. ಅಪ್ರಾಪ್ತ ಅಥವಾ ಅಸ್ವಸ್ಥಚಿತ್ತ ವ್ಯಕ್ತಿ ಅಥವಾ ಮಹಿಳೆ ಅಥವಾ ಎಸ್ಸಿ-ಎಸ್ಟಿ ವರ್ಗಕ್ಕೆ ಸೇರಿದವರನ್ನು ಮತಾಂತರ ಮಾಡಿದರೆ ಮತ್ತಷ್ಟೂ ಉಗ್ರ ಶಿಕ್ಷೆ 3 ವರ್ಷದಿಂದ 10 ವರ್ಷ ಜೈಲು ಶಿಕ್ಷೆ ಅಥವಾ 50ಸಾವಿರ ರೂ.ದಂಡ, ಸಾಮೂಹಿಕ ಮತಾಂತರಕ್ಕೆ 3ರಿಂದ 10ವರ್ಷ ಜೈಲು ಶಿಕ್ಷೆ, 1ಲಕ್ಷ ರೂ.ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
ಒಂದು ಧರ್ಮದ ಪುರುಷ ಮತ್ತೊಂದು ಧರ್ಮದ ಮಹಿಳೆಯೊಂದಿಗೆ ಮದುವೆಗೆ ಮುಂಚೆ ಅಥವಾ ನಂತರ ಆತನೆ, ಆಕೆಯೇ ಮತಾಂತರಗೊಳಿಸುವ ಮೂಲಕ ಕಾನೂನು ಬಾಹಿರ ಮತಾಂತರ ಅಥವಾ ವಿಪರ್ಯಯದ ಏಕಮಾತ್ರ ಉದ್ದೇಶಕ್ಕಾಗಿ ಮಾಡಿದ ಮದುವೆ ಅಸಿಂಧು ಎಂದು ಕೂಡ ಇದೆ.
ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಖಾತ್ರಿಗೊಳಿಸಲಾಗಿದೆ. ಯಾವುದೇ ವ್ಯಕ್ತಿ ತಮ್ಮ ಆಯ್ಕೆಯ ಯಾವುದೇ ಧರ್ಮವನ್ನು ಅಂಗೀಕರಿಸಲು, ಆಚರಿಸಲು ಮತ್ತು ಪ್ರಸಾರ ಮಾಡಲು ಮುಕ್ತವಾಗಿರುವರು.
ರಾಜ್ಯದಲ್ಲಿ ಆಮಿಷ, ಒತ್ತಾಯ, ಬಲವಂತದ ಮತಾಂತರ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿವೆ. ಹೀಗಾಗಿ ಇಂತಹ ಘಟನೆಗಳನ್ನು ತಡೆಗಟ್ಟಲು ಮತ್ತು ಇಂತ ಕೃತ್ಯಗಳಲ್ಲಿ ತೊಡಗಿರುವ ವ್ಯಕ್ತಿಗಳನ್ನು ಶಿಕ್ಷಿಸಲು ಅವಕಾಶ ಕಲ್ಪಿಸಲು ಈ ವಿಧೇಯಕವನ್ನು ತರಲಾಗಿದೆ ಎಂದು ವಿಧೇಯಕದಲ್ಲಿ ಮಂಡಿಸಲಾಗಿದೆ.
ಆದರೂ ಕೂಡ ಇಲ್ಲಿಯ ವರೆಗೆ ಎಷ್ಟು ಮತಾಂತರ ಪ್ರಕರಣಗಳಿವೆ ಎಂಬ ದಾಖಲೆ ರಾಜ್ಯ ಸರ್ಕಾರದ ಹತ್ತಿರ ಇಲ್ಲದಿರುವುದು, ವಿಪರ್ಯಾಸ.
ಮತಾಂತರ ಪ್ರಕ್ರಿಯೆಗಳಿಗೆ ಬೆಲೆಯಿಲ್ಲ. ಯಾರು ನಿಜವಾಗಿ ತಮ್ಮ ಸ್ವಂತ ಬುದ್ದಿಯಿಂದ, ಆತ್ಮ ಸಾಕ್ಷಿಗೆ ಅನುಗುಣವಾಗಿ ಮತಾಂತರ ಗೊಳ್ಳುತಾನೋ ಆತನು ಮತಾಂತರ ಗೊಳ್ಳುತ್ತಾನೆ, ಅಂದರೆ ಅವನು ಮನ ಪರಿವರ್ತನಗೊಂಡು, ಮನಾಂತರಗೊಳ್ಳುತ್ತಾನೆ, ಇದುವೇ ನೈಜ್ಯ ಮತಾಂತರ. ಇಷ್ಟವಿಲ್ಲದ ಮತಾಂತರ, ಬಲತ್ಕಾರದಿಂದ ಮತಾಂತರ ಮಾಡಿದರೂ, ಆತ ಆ ಧರ್ಮವನ್ನು ಸರಿಯಾಗಿ ಪಾಲಿಸುವುದಿಲ್ಲವೆಂಬುದು ಖಚಿತ. ಬಲತ್ಕಾರದ ಮತಾಂತಾರಯೆಂಬುದು ಅದೊಂದು ಅಪ್ರಯೋಜನಕಾರಿ.
ಒಂದು ದಿವಸಕ್ಕೆ ಇಷ್ಟೊಂದು ಮತಾಂತರ ಆಗುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸುವರು ಇದ್ದಾರೆ, ಹಾಗಾದರೆ ಕ್ರೈಸ್ತರ ಜನ ಸಂಖ್ಯೆ ಗಣನೀಯವಾಗಿ ಏರಬೇಕಾಗಿತ್ತು, ಬದಲಿಗೆ ಇಳಿದಿದೆ.