ಸುಮಾರು ೩೦ ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ೫೦ ಸಾವಿರ ಲೀಟರ್ ನೀರಿನ ಸಾಮರ್ಥ್ಯದ ಈ ಟ್ಯಾಂಕ್ನ ೫ ಆಧಾರಸ್ಥಂಬಗಳು ಬಹುತೇಕ ಶಿಥಿಲಾವಸ್ಥೆ ತಲುಪಿದ್ದವು. ಜೊತೆಗೆ ಪಕ್ಕದ ಪಾರ್ಕಿಂಗ್ ಜಾಗದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣದ ಕಾಮಗಾರಿಯು ನಡೆಯಲಿದ್ದು, ಈಗಾಗಲೇ ಇದ್ದ ಮರಗಳು ಹಾಗೂ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲಾಗಿದೆ.
ಗುರುವಾರ ಬೆಳಗ್ಗೆ ಟ್ಯಾಂಕ್ನ ಸಮೀಪದ ಪಾರ್ಕಿಂಗ್ನಲ್ಲಿದ್ದ ವಾಹನಗಳನ್ನು ಹಾಗೂ ಸಾರ್ವಜನಿಕರನ್ನು ಮತ್ತು ಅಕ್ಕಪಕ್ಕದ ಕಟ್ಟಡಗಳಲ್ಲಿದ್ದ ಜನರನ್ನು ತೆರವುಗೊಳಿಸಿ, ಹಿಟಾಚಿ ಮೂಲಕ ಟ್ಯಾಂಕ್ನ ಎರಡು ಆಧಾರ ಕಂಬಗಳನ್ನು ಜಖಂಗೊಳಿಸಿ ನಂತರ ಲೋಹದ ಹಗ್ಗ ಕಟ್ಟಿ ಎಳೆಯುವ ಮೂಲಕ ಟ್ಯಾಂಕನ್ನು ಧರೆಗುರುಳಿಸಲಾಯಿತು. ಈ ಸಂದರ್ಭದಲ್ಲಿ ಯಾರಿಗೂ ಯಾವುದೇ ರೀತಿಯ ಹಾನಿಯಾಗಿಲ್ಲ.