

ಶ್ರೀನಿವಾಸಪುರ : ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾರರು ಮತ ಚಲಾವಣೆ ಮಾಡುತ್ತಿದ್ದಾರೆ . ತಾಲ್ಲೂಕಿನ ಕೋಡಿಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಕ್ಕಲಗಡ್ಡ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರಾಗಿದಂತಹ ಸೀತಪ್ಪ ರವರು ವಿಧವಶರಾಗಿ ತೆರವಾಗಿದ್ದಂತಹ ಸ್ಥಾನಕ್ಕೆ ಭಾನುವಾರ ಉಪ ಚುನಾವಣಾ ದಿನಾಂಕವನ್ನು ಚುನಾವಣಾಧಿಕಾರಿಗಳು ನಿಗದಿ ಮಾಡಲಾಗಿದ್ದು ಯಾವುದೇ ವಿಧಾನ ಸಭೆ ಚುನಾವಣೆಗೆ ಕಮ್ಮಿ ಇಲ್ಲಾ ಎಂಬಂತೆ ಚುನಾವಣೆ ನಡೆಯುತ್ತಿದೆ. ಗ್ರಾಮದಲ್ಲಿ ಒಟ್ಡು 1185 ಮತದಾರರು ಇದ್ದು, ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಬೂತ್ ನಂ. 61 ರಲ್ಲಿ ಚುನಾವಣೆ ನಡೆಯಿತು.
ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಎನ್ ವಿ ವೆಂಕಟರವಣ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎನ್ ಎಸ್ ಶ್ರೀನಿವಾಸ್ ಕಣದಲ್ಲಿದ್ದು ಕೇವಲ ಕೆಲವೇ ತಿಂಗಳು ಅವಧಿ ಇದ್ದರೂ ಸಹಾ ಎರಡೂ ಪಕ್ಷಗಳ ಮುಖಂಡರು ಪ್ರತಿಷ್ಟೆಯನ್ನಾಗಿ ತೆಗೆದುಕೊಂಡು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮುಖಂಡರು ನಾ ನಾ ರೀತಿಯ ಕಸರತ್ತು ಮಾಡುತ್ತಿದ್ದಾರೆ.
ಇನ್ನು ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗೌನಿಪಲ್ಲಿ ಪೊಲೀಸರಿಂದ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.