ಕೋಲಾರ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಪ್ರತಿ ವರ್ಷದಂತೆ ಅನುಷ್ಠಾನಗೊಳಿಸುತ್ತಿರುವ ಗಂಗಾ ಕಲ್ಯಾಣ ಯೋಜನೆ , ಸ್ವಾವಲಂಬಿ ಸಾರಥಿ ಯೋಜನೆ , ಶ್ರಮಶಕ್ತಿ ಸಾಲದಯೋಜನೆ , ವೃತ್ತಿ ಪ್ರೋತ್ಸಾಹ ಯೋಜನೆ , ಶ್ರಮಶಕ್ತಿ ( ವಿಶೇಷ ಮಹಿಳಾ ಯೋಜನೆ ) , ಸಮುದಾಯ ಆಧಾರಿತ ತರಬೇತಿ ಯೋಜನೆ.
ಈ ಯೋಜನೆಗಳಲ್ಲಿ ಸಾಲಸೌಲಭ್ಯ ಪಡೆಯಲು ಮತೀಯ ಅಲ್ಪಸಂಖ್ಯಾತರಿಂದ ( ಅಂದರೆ ಮುಸ್ಲಿಂ , ಕ್ರಿಶ್ಚಿಯನ್ , ಜೈನರು , ಬೌದ್ದರು , ಸಿಬ್ಬರು , ಪಾರ್ಸಿಗಳು ಜನಾಂಗದವರಿಂದ ) ಆನ್ – ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಮೇಲ್ಕಂಡ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಇರಬೇಕಾದ ಅರ್ಹತೆಗಳು ಮತ್ತು ಮಾನದಂಡ ಸರ್ಕಾರಿ ಆದೇಶದಲ್ಲಿ ಸೂಚಿಸಿದಂತೆ ಅರ್ಜಿದಾರರು ಮತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು. ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 15 ವರ್ಷದಿಂದ ಖಾಯಂ ನಿವಾಸಿಯಾಗಿರಬೇಕು.
ಶೇ .33 ರಷ್ಟು ಮಹಿಳೆಯರಿಗೆ ಮೀಸಲಾತಿ ಇರುತ್ತದೆ. ಶೇ .3 ರಷ್ಟು ಅಂಗವಿಕಲರಿಗೆ ಮತ್ತು…
[7:30 pm, 25/08/2023] Shabbir Ahmad Kolar: ಕೋಲಾರ : ವ್ಯವಸ್ಥಾಪಕ ನಿರ್ದೇಶಕರು , ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ( ನಿ ) ಬೆಂಗಳೂರು , ಇವರ ಸುತ್ತೋಲೆ ಪತ್ರದ ದಿನಾಂಕ 22-08-2023ರ ಪತ್ರದಲ್ಲಿ ಸೂಚಿಸಿರುವಂತೆ 2023-24ನೇ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ CET / NEETS ವೃತ್ತಿಪರ ಕೋರ್ಸ್‌ಗಳಲ್ಲಿ .
ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಾದ ಅಂದರೆ ವೈದ್ಯಕೀಯ, ( ಎಂ.ಬಿ.ಬಿ.ಎಸ್ . , ಎಂ.ಡಿ. , ಎಂ.ಎಸ್ . ) ದಂತ ವೈದ್ಯಕೀಯ ( ಬಿ.ಡಿ.ಎಸ್ . , ಎಂ.ಡಿ.ಎಸ್ . ) ಆಯುಷ್ ( ಬಿ.ಆಯುಷ್ , ಎಂ.ಆಯುಷ್ ) ಇಂಜಿನಿಯರಿಂಗ್ & ಟೆಕ್ನಾಲಜಿ ( ಬಿ.ಇ. / ಬಿ.ಟೆಕ್ , ಎಂ.ಇ. / ಎಂ.ಟೆಕ್ ) ಬ್ಯಾಚುಲರ್ ಆಪ್ ಆರ್ಕಿಟೆಕ್ಟರ್ ಮತ್ತು ಬಿ.ಆರ್ಕ್ , ಎಂ.ಆರ್ಕ್ MBA , MCA , LLB , B.Sc In Horticulture , Agricultural Engineering , Dairy Technology , Forestry , Veterinary and Animal Technology , Fisheries , Sericulture , Home / Community Sciences Food Nutrition and Dietetics , B.Pharma , M.Pharma Pharma D and D Pharma .
ಇಂತಹ ಪದವಿ ಕೋರ್ಸ್‌ಗಳಲ್ಲಿ ಆಯ್ಕೆಯಾದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಅರಿವು ರಿನಿವಲ್ ( Arivu Renewal ) ಸಾಲದ ಯೋಜನೆಯಡಿ ( ವಿದ್ಯಾಭ್ಯಾಸ ಸಾಲ ) ಸಾಲ ಪಡೆಯಲು ಅಪೇಕ್ಷಿಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅಂದರೆ ಮುಸ್ಲಿಂ , ಕ್ರಿಶ್ಚಿಯನ್ , ಜೈನ್ , ಬೌದ್ಧರು , ಸಿಖ್ , ಪಾರ್ಸಿ ಇವರುಗಳು.
ಈ ಹಿಂದಿನ ವರ್ಷದಲ್ಲಿ ಪಡೆದಿರುವ ಸಾಲದ ಮೊತ್ತದ ಶೇ 12 % ರಷ್ಟನ್ನು ಪಾವತಿಸಿ ನಿಗಮದ ಈ ಕೆಳಕಂಡ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ .
ಮುಂದುವರೆದು ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗಿದ್ದು ಬೇರೆ ಬೇರೆ ವರ್ಷಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಅರಿವು ವಿದ್ಯಾಭ್ಯಾಸ ಸಾಲ ಪಡೆಯದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ ಮತ್ತು ಇಂತಹ ವಿದ್ಯಾರ್ಥಿಗಳು ಯಾವುದೇ ರಿನಿವಲ್ ಮೊತ್ತವನ್ನು ಪಾವತಿಸುವ ಅಗತ್ಯವಿರುವುದಿಲ್ಲ ಹಾಗೂ ಸಲ್ಲಿಸಿದ ಅರ್ಜಿಯ ಹಾರ್ಡ್ ಕಾಪಿಗಳನ್ನು ಮತ್ತು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿರುವ Original New Indemnity Bond ಮತ್ತು ಇತರೆ ಮೂಲ ದಾಖಲಾತಿಗಳೊಂದಿಗೆ ಜಿಲ್ಲಾ ವ್ಯವಸ್ಥಾಪಕರ ಕಛೇರಿಗೆ ಸಲ್ಲಿಸಬೇಕಾಗಿರುತ್ತದೆ ಮತ್ತು ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ನಿಗದಿಪಡಿಸಿರುವುದಿಲ್ಲ .
ಅರಿವುರಿನಿವಲ್ ( Arivu Renewal ) ಸಾಲದ ಯೋಜನೆಯ ಆನಲೈನ್ Kmdconline.karnataka.gov.in ಈ ವೆಬ್‌ಪೇಜ್ ಮೂಲಕ ತಿಳಿಯಬಹುದು. ಹೆಚ್ಚಿನ ಮಾಹಿತಿಗಾಗಿ ಅರ್ಜಿ ಸಲ್ಲಿಸಬೇಕಾದ ಕಛೇರಿ ವಿಳಾಸ ಕೋಲಾರ ಜಿಲ್ಲಾ ಕಛೇರಿ , ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ( ನಿ ) , ಮೊದಲನೇ ಮಹಡಿ , ಮೌಲಾನಾಅಜಾದ್ ಭವನ , ಶ್ರೀ ದೇವರಾಜ್ ಅರಸು ಬಡಾವಣೆ , 2 ನೇ ಬ್ಲಾಕ್ , ವಾರ್ಡ್ ನಂ -01 , ಟಮಕ -563103 , ದೂ ಸಂ – 08152-200786 , ಸಹಾಯವಾಣಿ ಸಂಖ್ಯೆ : 8277799990. ( 24 * 7 ) ಗೆ ಸಂಪರ್ಕಿಸಬಹುದು ಎಂದು ಕೋಲಾರ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ( ನಿ ) , ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .