ಸಮಾಜಸೇವೆಯಲ್ಲಿ ಪರಮಾತ್ಮನನ್ನು ಕಂಡ ಮೆಂಡೋನ್ಸಾ ಸಹೋದರರು

ಸುನಿಲ್ ಮೆಂಡೋನ್ಸಾ ಮತ್ತು ಅನಿಲ್ ಮೆಂಡೋನ್ಸಾ (ಮೆಂಡೋನ್ಸಾ ಸಹೋದರರು)

ಹಿಂದೂ, ಕ್ರಿಸ್ತ, ಮುಸಲ್ಮಾನ್, ಸಿಖ್ ಮತ್ತು ಸರ್ವ ಧರ್ಮಗಳಲ್ಲಿ ಸಾರುವುದು ಒಂದೇ ಪರರ ಕಷ್ಟಕ್ಕೆ ಸ್ಪಂದಿಸುವ ವ್ಯಕ್ತಿ ದೇವರ ಸ್ವರೂಪಿ ಅಥವಾ ದೇವಾದೂತ ಎಂದು ಕರೆಯಲ್ಪಡುತ್ತಾರೆ, ಪರರ ಕಷ್ಟ ಪರೋಪಕಾರಿ ಜೀವನ ಅಳವಡಿಸಿಕೊಂಡಾಗ ಮಾತ್ರ ಆ ವ್ಯಕ್ತಿಯ ಜನ್ಮ ಶ್ರೇಷ್ಠ ಜನ್ಮ ಆಗಲು ಮಾತ್ರ ಸಾಧ್ಯ.

ಯಾವ ಅಪೇಕ್ಷೆಯಿಲ್ಲದೇ ಸಮಾಜದ ಎಲ್ಲಾ ಸಮುದಾಯದವರಿಗೆ ಮಾಡುವ ಸಮಾಜ ಸೇವೆಯಲ್ಲಿಯೇ ಸ್ವರ್ಗ ಸಾರ್ಥಕತೆ ಇದೆ, ಕರಾವಳಿ ಪ್ರದೇಶದ ನಾಡೇ ಹಾಗೇ ಕಷ್ಟ,ಸುಖ ಅಂತ ಬಂದವರಿಗೆ ಮೊದಲು ಆತಿಥ್ಯ ನೀಡಿ ಅದರಲ್ಲಿಯೇ ಸಂತೋಷ ಪಡುವವರೇ ಹೆಚ್ಚು, ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಮ್ಮ ಕನ್ನಡದ ಕಂಪಿನಲ್ಲಿ ಬೆಳೆದ ವೈದ್ಯರು, ಇಂಜಿನಿಯರ್, ತಂತ್ರಜ್ಞಾನ, ಕ್ರೀಡೆ, ಸಮಾಜ ಸೇವಕರು ಇತರೆ ವಿಭಾಗಗಳಲ್ಲಿ ಗ್ರಾಮೀಣ ಮಟ್ಟದಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದ ವರೆಗೆ ತನ್ನದೇ ಅದ ಕೊಡುಗೆ ನೀಡುತ್ತಾ ನಮ್ಮ ರಾಜ್ಯ ಮತ್ತು ರಾಷ್ಟ್ರದ ಧ್ವಜ ರಾರಾಜಿಸುವಂತೆ ಮಾಡಿರುವ ಕೀರ್ತಿ ಪತಾಕೆ ಇಂತಹ ಮಹನೀಯರಿಗೆ ಸಲುತ್ತದೆ.

ಹಾಗೇ ಮೂಡಬಿದ್ರೆಯ ಹೊಸಬೆಟ್ಟುವಿನ ಶ್ರೀ ಮರ್ಸೆಲ್ ಮೆಂಡೋನ್ಸಾ ಮತ್ತು ಶ್ರೀಮತಿ ಆಪೋಲಿನ್ ಮೆಂಡೋನ್ಸಾ ದಂಪತಿಗಳ ಪುತ್ರರಾದ ಸುನೀಲ್ ಮೆಂಡೋನ್ಸಾ ಮತ್ತು ಅನಿಲ್ ಮೆಂಡೋನ್ಸಾ ಸಹೋದರರು ಈ ದಿಸೆಯಲ್ಲಿ ಯುವ ಪಡೆಯನ್ನು ಕಟ್ಟಿಕೊಂಡು ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ, ಹುಟ್ಟು ಹುಟ್ಟುತ್ತ ಅಣ್ಣ ತಮ್ಮಂದಿರು ಬೆಳ ಬೆಳೆಯುತ್ತ ದಾಯದಿಗಳು ಎಂದು ಹಿರಿಯರು ಹೇಳುತ್ತಾರೆ, ಈ ಮಾತಿಗೆ ತದ್ವಿರುದವಾಗಿರುವ ಸಹೋದರರು ತಮ್ಮನ್ನು ತಾವು ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಇಂದಿನ ಯುವಪೀಳಿಗೆಗೆ ಮಾದರಿಯಾಗಿರುವ ಮೆಂಡೋನ್ಸಾ ಸಹೋದರರು ನಿಜವಾದ ಹೀರೋಗಳು.

ಸುನೀಲ್ ಮೆಂಡೋನ್ಸಾರವರು ದೂರದ ಇಸ್ರೇಲ್ ನಲ್ಲಿ ಕೆಲಸ ಮಾಡುವ ಸಮಯದಲ್ಲಿ ಸ್ನೇಹಿತರ ಜೊತೆಗೂಡಿ ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ಎಂಬ ಸಂಸ್ಥೆ ಕಟ್ಟಿಕೊಂಡು ಕರ್ನಾಟಕದ್ಯಂತ ಅನೇಕ ಅಸಹಾಯಕ ಕುಟುಂಬಗಳಿಗೆ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ ನೀಡುವುದು, ಸುನಿಲ್ ಪ್ರಯತ್ನದಿಂದ ಮುಚ್ಚುವ ಹಂತದಲ್ಲಿ ಶಾಲೆಗಳು ಮಾದರಿ ಶಾಲೆಗಳಾಗಿ ಮಾಡಿದ್ದಾರೆ ಹಾಗೇ ನೂರಾರು ಅನಾರೋಗ್ಯ ಪೀಡಿತ ಬಡ ಕುಟುಂಬಗಳಿಗೆ ಶಸ್ತ್ರ ಚಿಕಿತ್ಸೆಗೆ ಆರ್ಥಿಕ ಸಹಾಯ, ತನ್ನ ಊರಿಗೆ ವಾಪಸದ ಮೇಲೂ ಕೂಡಾ ಇಸ್ರೇಲ್ ನಲ್ಲಿ ಇರುವ ಹೆಲ್ಪಿಂಗ್ ಫ್ರೆಂಡ್ಸ್ ನ ಸದಸ್ಯರು ಮತ್ತು ಬೆಳ್ಮಣ್ಣಿನ ಹ್ಯೂಮನಿಟಿ ಟ್ರಸ್ಟ್ ನ ಜೊತೆಗೂಡಿ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ, ಇವರ ಈ ಸಮಾಜಸೇವೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ ಹಾಗೇ ಆಗಸ್ಟ್ 27 ರಂದು ನಡೆದ ಉಚಿತ ವಸತಿ ಯೋಜನೆಯ ಕಾರ್ಯಕ್ರಮದಂದು ಹ್ಯೂಮನಿಟಿ ಟ್ರಸ್ಟ್ ನೀಡುವ ಶ್ರೇಷ್ಠ ‘ಅಭಿಮಾನಿ’ ಗೌರವ ಎಂಬ ವಿಶೇಷ ಪುರಸ್ಕಾರ ನೀಡಿ ಗೌರವಿಸಿದೆ.

ಅನಿಲ್ ಮೆಂಡೋನ್ಸಾ ರವರಿಗೆ ಚಿಕ್ಕ ವಯಸ್ಸಿನಿಂದಲೂ ಸಮಾಜ ಸೇವೆಯಲ್ಲಿ ತುಡಿತ, ವೃತ್ತಿಯಲ್ಲಿ ಬಾಡಿ ಬಿಲ್ಡರ್ ಆಗಿರುವ ಜೊತೆಗೆ ಐರಾವತ ಆಂಬುಲೆನ್ಸ್ ನ ಮಾಲೀಕರಾಗಿರುವ ಇವರು, ಇದುವರೆಗೂ ಎಷ್ಟೋ ರೋಗಿಗಳ ಪಾಲಿನ ಅಪಾತ್ಬಾಂಧವರಾಗಿದ್ದಾರೆ ಮತ್ತಷ್ಟು ಮೃತಪಟ್ಟ ರೋಗಿಗಳ ಕುಟುಂಬದ ಜೊತೆಯಲ್ಲಿ ನಿಂತು ಅದೆಷ್ಟೋ ಕುಟುಂಬಗಳಿಗೆ ಹೆಗಲು ನೀಡಿ ಅವರ ಅಂತಿಮ ಕಾರ್ಯಗಳನ್ನು ನೆರೆವೇರಿಸಿರುವ ಉದಾರಣೆಗಳಿವೆ, ಅನಿಲ್ ರವರು ರಕ್ತದಾನಿಗಳಾಗಿದ್ದು ಅನೇಕ ಬಾರಿ ರಕ್ತದಾನ ಮಾಡಿದ್ದಾರೆ ಎಂಬುದು ನಮ್ಮ ಹೆಮ್ಮ, ಮೊದಲ ಬಾರಿಗೆ ಉತ್ತರ ಪ್ರದೇಶದ ಅನೇಕ ಮಾಧ್ಯಮದವರು ಮತ್ತು ವೈದ್ಯರು ಪ್ರಶಂಸೆ ವ್ಯಕ್ತಪಡಿಸಿದರು, ಕಾರಣ ಅಂದು ಹಿಂದೂ ಕ್ರಿಸ್ತ, ಮುಸ್ಲಿಂ ಸಹೋದರರು ಎಂಬ ಭಾವೈಕ್ಯತೆಗೆ ಸಾಕ್ಷಿಯಾಗಿದ್ದು ‘ಐರಾವತ’ ಎಂಬ ಆಂಬುಲೆನ್ಸ್, ಕೇವಲ 41 ಘಂಟೆಗಳಲ್ಲಿ ಯಾವುದೇ ವೈದ್ಯಕೀಯ ಸಿಬ್ಬಂದಿಗಳ ಸಹಾಯವಿಲ್ಲದೆ ಜೋರೋ ಟ್ರಾಫಿಕ್ ವ್ಯವಸ್ಥೆ ಇಲ್ಲದೆ ಕೋಮದಲ್ಲಿದ್ದ ಹಸನ್ ಎಂಬ ರೋಗಿಯನ್ನು ಮೂಡಬಿದ್ರೆಯಿಂದ ಮುರಾದಾಬಾದ್ ಗೆ 2700 ಕಿಮೀ ದೂರ ಪ್ರಯಾಣ ಮಾಡಿ ರೋಗಿಯನ್ನು ಮುರಾದಾಬಾದ್ ನ ಶ್ರೇಯ ನ್ಯೂರೋ ಗೆ ಸೇರಿಸಿ ಒಟ್ಟು ಇಂಧನಕ್ಕೆ ಖರ್ಚಾಗಿದ್ದು ಬರೋಬರಿ 48 ಸಾವಿರ ಆದರೆ ಅವರು ಪಡೆದದ್ದು ಮಾತ್ರ ಹಸನ್ ರವರ ಮನೆಯವರು ನೀಡಿದ ಒಂದಷ್ಟು ಹಣ ಮಾತ್ರ, ಅನಿಲ್ ರವರ ಇನ್ನೂ ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದು ಇವರ ಈ ಸೇವೆಯನ್ನು ಗುರುತಿಸಿದ ಸಂಘ ಸಂಸ್ಥೆಗಳು ನೂರಾರು ಪ್ರಶಸ್ತಿ ನೀಡಿ ಗೌರವಿಸಿವೆ, 2021 ರಲ್ಲಿ ಉತ್ತಮ ಜೀವ ರಕ್ಷಕ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಜಿಲ್ಲಾ ಮಟ್ಟದ ರಾಜ್ಯೋತ್ಸವದ ಪ್ರಶಸ್ತಿ, ಇಂತಹ ಸಹೋದರರು ಶ್ರೇಷ್ಠರಲ್ಲಿ ವಿಶೇಷರು, ನಿಮ್ಮ ಈ ನಿಷ್ಕಲ್ಮಶ ಸೇವೆಗೆ ಇನ್ನಷ್ಟು ಪ್ರಶಸ್ತಿಗಳು ಸಿಗಲಿ ಇಂದು ಸಮಾಜದಲ್ಲಿ ನಾವು ನಮ್ಮ ಕುಟುಂಬ ಎಂಬ ಸ್ವಾರ್ಥಿಗಳ ತುಂಬಿರುವವರ ನಡುವೆ ನಮ್ಮ ಮೆಂಡೋನ್ಸಾ ಸಹೋದರರು ವಿಭಿನ್ನ, ಸರ್ಕಾರ ಮತ್ತು ಮತ್ತಷ್ಟು ಸಂಘ ಸಂಸ್ಥೆಗಳು ಮೆಂಡೋನ್ಸಾ ಸಹೋದರರ ಜೊತೆ ಕೈಜೋಡಿಸಿದರೆ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ನೀಡಿದಂತಗುತ್ತದೆ.