JANANUDI.COM NETWORK
ಬೆಂಗಳೂರು- ಕೊರೊನಾ ಸೋಂಕು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಶಾಲೆ-ಕಾಲೇಜುಗಳನ್ನು ಆರಂಭಿಸಲಾಗಿದೆ . ಇತ್ತೀಚೆಗೆ ರಾಜ್ಯ ಸರ್ಕಾರ 1 ರಿಂದ 5 ನೇ ತರಗತಿಯನ್ನು ಆರಂಭಿಸಲು ಅವಕಾಶ ನೀಡಿತು. ಈಗ ನವೆಂಬರ್ 8 ರಿಂದ ಎಲ್ ಕೆ ಜಿ ಹಾಗೂ ಯುಕೆಜಿ ಭೌತಿಕ ತರಗತಿ ಆರಂಭಕ್ಕೂ ಅವಕಾಶ ನೀಡಿದೆ.
ಎಲ್ ಕೆ ಜಿ ಮತ್ತು ಯುಕೆಜಿ ಆರಂಭದ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ‘ಎಲ್ ಕೆ ಜಿ ಮತ್ತು ಯುಕೆಜಿ ಮಕ್ಕಳು ತರಗತಿಗೆ ಬರುವ ಮುನ್ನ ಕೆಲವೊಂದು ಮಾರ್ಗಸೂಚಿನೀಡಿದೆ.
1 ಪೋಷಕರ ಅನುಮತಿ ಪತ್ರ ತರುವುದು ಕಡ್ಡಾಯ.
2 ಮಕ್ಕಳ ಪೋಷಕರು ಎರಡೂ ಡೋಸ್ ಕೊರೊನಾ ಲಸಿಕೆ ಪಡೆದಿರುವುದು ಕಡ್ಡಾಯ.
3 ಕೊರೊನಾ ಪಾಸಿಟಿವಿಟಿ ರೇಟ್ 2% ಗಿಂತ ಕಡಿಮೆ ಇರುವ ಜಿಲ್ಲೆಯಲ್ಲಿ ತರಗತಿ ಆರಂಭಕ್ಕೆ ಅವಕಾಶ. 4 ಬೆಳಗ್ಗೆ 9.30 ರಿಂದ 3.30 ರವರೆಗೆ ತರಗತಿ ನಡೆಸಬಹುದು.
5 ಕೊರೊನಾ ಸೋಂಕಿನ ಲಕ್ಷಣ ಇರುವ ಮಕ್ಕಳಿಗೆ ತರಗತಿಗೆ ಪ್ರವೇಶವಿಲ್ಲ.
ಎಂದು ಶಿಕ್ಷಣ ಇಲಾಖೆ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ