ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಅಂಗಡಿ ಮುಚ್ಚಿರುವುದರಿಂದ ಆರ್ಯ ವೈಶ್ಯ ಜನಾಂಗದ ಜೀವನ ದುಸ್ತರವಾಗಿದೆ. ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದವರಿಗಂತೂ ಸಂಕಷ್ಟ ಎದುರಾಗಿದೆ ಎಂದು ಮುಖಂಡ ಎಸ್.ಆರ್.ಅಮರನಾಥ್ ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ದಾನಿಗಳಾದ ಎಂ.ಎಸ್.ಶಾಂತಮ್ಮ , ಎನ್.ಎಸ್.ಲಕ್ಷ್ಮೀಪತಿ ಶೆಟ್ಟಿ ಅವರು ಆರ್ಯ ವೈಶ್ಯ ಜನಾಂಗದ ಬಡವರಿಗೆ ನೀಡಿದ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಈ ದಂಪತಿಗಳು ಸಂಕಷ್ಟದ ಸಂದರ್ಭದಲ್ಲಿ ಬಡವರ ನೆರವಿಗೆ ಬಂದಿರುವುದು ಸ್ತುತ್ಯಾರ್ಹ ಸಂಗತಿಯಾಗಿದೆ ಎಂದು ಹೇಳಿದರು.
ದಾನಿ ಎನ್.ಎಸ್.ಲಕ್ಷ್ಮೀಪತಿ ಶೆಟ್ಟಿ ಮಾತನಾಡಿ, ಕಷ್ಟದಲ್ಲಿರುವ ವ್ಯಕ್ತಿಗೆ ನೆರವಾಗುವುದು ಮಾನವ ಧರ್ಮ. ಅದರಲ್ಲೂ ಹಸಿದವರಿಗೆ ಅನ್ನ ಹಾಕುವುದು ಪುಣ್ಯದ ಕೆಲಸ. ಹಾಗಂತಲೇ ಪಟ್ಟಣದ 35 ಕುಟುಂಬಗಳಿಗೆ ತಲಾ ರೂ.5 ಸಾವಿರ ಮೌಲ್ಯದ ದಿನಸಿ ಕಿಟ್ ವಿತರಿಸಲಾಗಿದೆ ಎಂದು ಹೇಳಿದರು.
ಮುಖಂಡರಾದ ಎಸ್.ಜಿ.ಆದೆಪ್ಪಯ್ಯ ಶೆಟ್ಟಿ, ಎಸ್.ಸಿ.ಅಮರನಾಥ್ ಇದ್ದರು.