ಬೆಂಗಳೂರು: ಕುಂದಲಹಳ್ಳ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿಯನ್ನು ಇಂಟೆಲಿಜೆನ್ಸ್ ತಂಡ ವಶಕ್ಕೆ
ಪಡೆದಿದೆ. ಈ ಶಂಕಿತ ಸೇರಿ ಇನ್ನು ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಿಸಿಟಿವಿ ದೃಶ್ಯದಲ್ಲಿ ಸೆರೆಯಾದಂತೆ ಮುಖಕ್ಕೆ ಮಾಸ್ಕ್ ಹಾಗೂ ತಲೆಗೆ ಟೋಪಿ ಹಾಕಿ ಕೊಂಡಿದ್ದ ವ್ಯಕ್ತಿಯೇ ಶಂಕಿತನೆಂದು ಪತ್ತೆ ಹಚ್ಚಲಾಗಿದೆ. ಘಟನೆಗೆ
ಸಂಬಂಧಿಸಿದಂತೆ ಒಟ್ಟು ನಾಲ್ವರನ್ನು ಇಂಟೆಲಿಜೆನ್ಸ್ ತಂಡ ವಶಕ್ಕೆ ಪಡೆದುಕೊಂಡಿದೆ. ಶಂಕಿತ ಆರೋಪಿಗಳು ಇದನ್ನೆಲ್ಲ ಏಕೆ ಮಾಡಿದ್ದಾರೆ ಎಂದು. ವಿಚಾರಣೆ ನಂತರ ತಿಳಿದು ಬರಲಿದೆ.
ದೂರುದಾರ ರಾಜೇಶ್ ಅವರು ಕೆಫೆಯ ಬೆಸಿನ್ ಬಳಿ ಆರೋಪಿ. ಬ್ಯಾಗ್ ಇಡೋದನ್ನ ಗಮನಿಸಿದ್ದರು. ಹೋಟೆಲ್ಗೆ ಬಂದವನೇ ಆತುರ ಆತುರವಾಗಿ 1130ಗೆ ರವೆ ಇಡ್ಲಿ ತಿಂದು ಬ್ಯಾಗ್ ಇಟ್ಟು ಹೋಗಿದ್ದಾನೆ. ಹೀಗಾಗಿ ರಾಜೇಶ್ ಅವರೇ ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಐಪಿಸಿ.ಸೆಕ್ಷನ್ 324 ಪ್ರಕಾರ ಅಪಾಯಕಾರಿ ಆಯುಧಗಳು ಅಥವಾ ವಿಧಾನಗಳಿಂದ ಸ್ವಯಂಪ್ರೇರಣೆಯಿಂದ ಗಾಯವನ್ನು ಉಂಟುಮಾಡುವುದು. 307 ಕೊಲೆ ಯತ್ನ,1208 ಕ್ರಿಮಿನಲ್ ಪಿತೂರಿಯಡಿ ಕೇಸ್ ದಾಖಲಾಗಿದೆ.