ಸಮೂಹ ಹಾಲು ಕರೆಯುವ ಯಂತ್ರಗಳ ಉದ್ಘಾಟನೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ : ಕೋಲಾರ ತಾಲೂಕು ಮಟ್ಟಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸಮೂಹ ಹಾಲು ಕರೆಯುವ ಯಂತ್ರಗಳ ಉದ್ಘಾಟನೆ ಹಾಗೂ ಹಾಲು ಉತ್ಪಾದಕರಿಗೆ ಉಚಿತ ಆಹಾರ ಕಿಟ್‌ಗಳನ್ನು ಒಕ್ಕೂಟದ ನಿರ್ದೇಶಕ ಡಿ.ವಿ. ಹರೀಶ್‌ರವರು ವಿತರಣೆ ಮಾಡಿದರು . ಈ ಸಂದರ್ಭದಲ್ಲಿ ಮಾತನಾಡುತ್ತಾ , ಘಟಕಕ್ಕೆ ಒಕ್ಕೂಟದಿಂದ ಸುಮಾರು ೩.೫ ಲಕ್ಷ ರೂಗಳನ್ನು ಮಂಜೂರು ಮಾಡಿಸಿದ್ದು ಇದರಲ್ಲಿ ಘಟಕದ ವೆಚ್ಚ ಮತ್ತು ಸಿವಿಲ್ ಕಾಮಗಾರಿಗಾಗಿ ಅನುಧಾನ ಇರುವುದಾಗಿ ತಿಳಿಸಿದರು . ಇದರ ಸದುಪಯೋಗವನ್ನು ಎಲ್ಲಾ ಹಾಲು ಉತ್ಪಾದಕರು ಬಳಸಿಕೊಳ್ಳಲು ಕರೆ ನೀಡಿದರು . ರಾಸುಗಳು ಸಮೂಹ ಹಾಲು ಕರೆಯುವ ಯಂತ್ರಗಳಲ್ಲಿ ಹಾಲು ಕರೆಯುವುದರಿಂದ ಕೆಚ್ಚಲು ಬಾವು ಬರುವ ಸಾಧ್ಯತೆಗಳು ಇರುವುದಿಲ್ಲ ಹಾಗೂ ಒಕ್ಕೂಟದಿಂದ ಸಂಘಕ್ಕೆ ಲೀಟರ್‌ಗೆ ರೂ . ೧.೩ಂಪೈಸೆ ಹೆಚ್ಚಿಗೆ ನೀಡಲಾಗುವುದು . ಇದರಲ್ಲಿ ರೂ .೧.೧೦ ಪೈಸೆ ಉತ್ಪಾದಕರಿಗೆ ಮತ್ತು ರೂ .೧.೨೦ ಪೈಸೆ ಸಂಘದ ನಿರ್ವಹಣೆಗೆ ಬರುತ್ತದೆಂದು ತಿಳಿಸಿಸರು . ಈ ವ್ಯವಸ್ಥೆಯಿಂದ ಶುದ್ಧ ಮತ್ತು ಗುಣಮಟ್ಟದ ಹಾಲು ಉತ್ಪಾದನೆಗೆ ಸಹಕಾರಿಯಾಗುತ್ತದೆ . ಗ್ರಾಮದಲ್ಲಿ ಮಹಿಳೆಯರಿಗೆ ಹಾಲು ಕರೆಯುವ ಭವಣಿಯಿಂದ ಮುಕ್ತಿ ಸಿಗುತ್ತದೆಂದರು . ಇಂತಹ ಹಾಲಿನಿಂದ ಒಕ್ಕೂಟದಲ್ಲಿ ಹಾಲಿನ ಉತ್ಪನ್ನಗಳನ್ನು ತಾಯರಿಸುವುದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಸಿಗುವುದಾಗಿ ತಿಳಿಸಿದರು ಹಾಗೂ ಉತ್ಪಾದಕರು ಒಕ್ಕೂಟದಿಂದ ಸಿಗುವ ಸೌಲಭ್ಯಗಳಾದ ರಾಸುಗಳ ಗುಂಪುವಿಮೆ , ಹಾಗೂ ತಾಂತ್ರಿಕ ಸೌಲಭ್ಯಗಳನ್ನು ಬಳಸಿಕೊಂಡು , ಉತ್ಪಾದನ ವೆಚ್ಚ ಕಡಿಮೆ ಮಾಡಿ , ಗುಣಮಟ್ಟದ ಹಾಲು ಉತ್ಪಾದನೆಗೆ ಒತ್ತು ನೀಡಲು ತಿಳಿಸಿದರು .
ಹಾಲು ತಾಲೂಕಿನ ಉಪವ್ಯವಸ್ಥಾಪಕರಾದ ಶ್ರೀಧರಮೂರ್ತಿ ಮಾತನಾಡಿ , ಸಂಘಗಳಲ್ಲಿ ಸಮೂಹ ಕರೆಯುವ ಯಂತ್ರಗಳನ್ನು ಅಳವಡಿಸಿ ಹಾಲಿನ ಜೈವಿಕ ಗುಣಮಟ್ಟವನ್ನು ಕಾಪಡಬಹುದೆಂದು ತಿಳಿಸಿದರು . ಜಿಡ್ಡಿನ ಆಧಾರದ ಮೇಲೆ ಧರ ನೀಡಬೇಕೆಂದು ತಿಳಿಸಿದರು . ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ವಿ . ನಾಗರಾಜ್ , ಮುಖಂಡರಾದ ಎನ್ ಚೌಡೇಗೌಡ , ಎಂ.ಎಸ್ . ಸೊಣೇಗೌಡ , ಎನ್ ಮಂಜುನಾಥಗೌಡ , ಗ್ರಾಮಪಂಚಾಯಿತಿ ಸದಸ್ಯರು , ಕಾರ್ಯಕಾರಿ ಮಂಡಳಿ ಸದಸ್ಯರುಗಳು , ಹಾಗೂ ಹಾಲು ಉತ್ಪಾದಕರು , ಗ್ರಾಮಸ್ಥರು ಮತ್ತು ಶಿಬಿರದ ವಿಸ್ತರಣಾಧಿಕಾರಿಗಳಾದ ಅಣ್ಣಪ್ಪ , ಶ್ರೀನಿವಾಸ್ , ನಾಗೇಂದ್ರ ಎಸ್ . ಎಸ್ . ರಾಮಾಂಜಿನಪ್ಪ , ಮತ್ತು ಸಂಘದ ಸಿಬ್ಬಂದಿ ಹಾಜರಿದ್ದರು
.