ವರದಿ : ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ : ಸ್ವಾಮಿ ವಿವೇಕಾನಂದರ ಆದರ್ಶ ಪಾಲನೆ ಇಂದಿನ ಅಗತ್ಯವಾಗಿದೆ ಎಂದು ತಿಮ್ಮಸಂದ್ರ ನಂದಗೋಕುಲ ಆಶ್ರಮದ ಸುಧೀರ ಚೈತನ್ಯ ಸ್ವಾಮೀಜಿ ಹೇಳಿದರು . ಪಟ್ಟಣದ ಕರ್ನಾಟಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಸಮಾರಂಭದಲ್ಲಿ ಮಾತನಾಡಿ , ಧರ್ಮ ಮತ್ತು ಧಾರ್ಮಿಕ ಆಚರಣೆ ಕುರಿತು ಸ್ವಾಮಿ ವಿವೇಕಾನದರ ಅಭಿಪಾಯ ಎಲ್ಲ ಧರ್ಮಗಳ ಜನರ ಮೆಚ್ಚುಗೆಗೆ ಪಾತ್ರವಾಗಿದೆ . ಶಿಕ್ಷಣದ ಬಗ್ಗೆ ಅವರು ಹೊಂದಿದ್ದ ಅಭಿಪ್ರಾಯ ಪಾಲನೆಯಿಂದ ಸಮಾಜದ ಎಲ್ಲ ವರ್ಗದ ಜನರಿಗೂ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದರು . ಶಾಲೆಯ ಮುಖ್ಯ ಶಿಕ್ಷಕ ಎಂ.ಬೈರೇಗೌಡ ಮಾತನಾಡಿ , ಸ್ವಾಮಿ ವಿವೇಕಾನಂದರ ಆದರ್ಶವನ್ನು ಮಕ್ಕಳಲ್ಲಿ ಬಿತ್ತುವ ಕೆಲಸ ನಿರಂತರವಾಗಿ ನಡೆಯಬೇಕು . ವಿವೇಕಾನಂದರ ವ್ಯಕ್ತಿತ್ರ ಹಾಗೂ ವಿದ್ವತ್ತು ಜಗತ್ತಿನ ಜನರ ಮನಸ್ಸು ಗೆದ್ದಿತ್ತು ಎಂದು ಹೇಳಿದರು . ಎಸ್ಡಿಎಂಸಿ ಅಧ್ಯಕ್ಷ ಆನಂದರೆಡ್ಡಿ , ಶಿಕ್ಷಕರಾದ ರಾಮಚಂದ್ರ , ನಾಗರಾಜ್ , ಚೇತನ್ , ಮಹೇಶ್ , ಪ್ರಸನ್ನ , ನಾರಾಯಣಸ್ವಾಮಿ , ಶಿಕ್ಷಕಿಯರಾದ ಶಶಿಕಲಾ , ಗೌರಮ್ , ಶ್ರೀದೇವಿ , ಗೀತಾಂಜಲಿ , ಅಶ್ವಿನಿ , ರೆಡ್ಡಮ್ಮ ಇದ್ದರು .