ಹಿಜಾಬ್‌ ವಿವಾದ: ವಾದಗಳು ಮುಕ್ತಾಯ, ತೀರ್ಪನ್ನು ಕಾಯ್ದಿರಿಸಿದ ಹೈಕೋರ್ಟ್‌

JANANUDI.COM NETWORK

ಬೆ೦ಗಳೂರು: ಶಿಕ್ಷಣ ಸ೦ಸ್ಥೆಗಳಲ್ಲಿ ಹಿಜಾಬ್‌ನ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ವಿವಿಧ ಅರ್ಜಿಗಳ ಕುರಿತು ಕರ್ನಾಟಕ ಹೈಕೋರ್ಟ್‌ ವಾದಗಳನ್ನು ಆಲಿಸಿ ವಾದವನ್ನು ಮುಕ್ತಾಯಗೊಳಿಸಿದ್ದು, ತನ್ನ ಆದೇಶವನ್ನು ಕಾಯ್ದಿರಿಸಿದೆ. ಶುಕ್ರವಾರ ಕೋರ್ಟ್‌ ನಲ್ಲಿ ವಾದ ಮುಕ್ತಾಯವಾಗಿದ್ದು. ಈಗ ಎಲ್ಲರ ಮನಸಿನಲ್ಲಿ ನ್ಯಾಯಾಲಯದ ತೀರ್ಪು ಏನು ಬರುವುದೆಂದು ಕಾತರಿಕೆ ಆರಂಭವಾಗಿದೆ.
ನ್ಯಾಯಮೂರ್ತಿ ರಿತುರಾಜ್‌ ಅವಸ್ಸಿ, ನ್ಯಾ. ಕೃಷ್ಣ ಎಸ್‌.ದೀಕ್ಚಿತ್‌, ನ್ಯಾ. ಖಾಜಿ ಜೈಬುನ್ನಿಸಾ ತ್ರಿಸದಸ್ಯ ನ್ಯಾಯಪೀಠ ಸತತ 11 ನೇ ದಿನ ಹಿಜಾಬ್‌ಗೆ ಸ೦ಬ೦ಧಿಸಿದ ಅರ್ಜಿಗಳ ವಿಚಾರಣೆಗಳನ್ನು ನಡೆಸಿ, ವಾದ ಮುಕ್ತಾಯ ಗೊಳಿಸಿ ತೀರ್ಪು ಕಾಯ್ದಿರಿಸಿದ್ದಾರೆ.
ಉಡುಪಿ ಮತ್ತು ಕು೦ದಾಪುರದ ಸರ್ಕಾರಿ ಪಿಯು ಕಾಲೇಜಿನ ಅರ್ಜಿದಾರ ವಿದ್ಯಾರ್ಥಿನಿಯರ ಪರ ಸರ್ಕಾರದ ವಾದಕ್ಕೆ ಪ್ರತಿವಾದ ಮಂಡಿಸಿದ ಕಾಮತ್‌, ಸರ್ಕಾರದ ವಾದ ಮತ್ತು ವಿವರಣೆಗಳನ್ನು ಅಲ್ಲಗಳೆದಿದ್ದಾರೆ. ಹಿಜಾಬ್‌ ನಿರ್ಬಂಧಿಸಿ ಫೆ.5ರಂದು ಸರ್ಕಾರ ಹೊರಡಿಸಿದ ಆದೇಶವನ್ನು ವಿರೋಧಿಸಿದ್ದಾರೆ.