ಹೈ ಹೈಕೋರ್ಟ್ ಮಧ್ಯಂತರ ಆದೇಶ ಕೇವಲ ಸಿಡಿಸಿ ಇರುವ ಕಾಲೇಜಿಗೆ ಮಾತ್ರ ಅನ್ವಯ –  ಹೈಕೋರ್ಟ್ ಸ್ಪಷ್ಟನೆ

JANANUDI.COM NETWORK

ಬೆಂಗಳೂರು, ಫೆ.18:  ಹೈಕೋರ್ಟ್ ಮಧ್ಯಂತರ ಆದೇಶವು ಸಿಡಿಸಿ (ಕಾಲೇಜು ಅಭಿವೃದ್ಧಿ ಸಮಿತಿ) ಇರುವ ಪದವಿಪೂರ್ವ ಕಾಲೇಜುಗಳಿಗೆ ಮಾತ್ರ ಅನ್ವಯ. ಎಂದು ತಿಳಿಸಿದೆ. ಅದನ್ನು ಹೊರತುಪಡಿಸಿ ಯಾವುದೇ ಪದವಿ ಕಾಲೇಜು ಅಥವಾ ಹೈಸ್ಕೂಲ್ ಅಥವಾ ಅಲ್ಪಸಂಖ್ಯಾತ ಇಲಾಖೆಯ ಅಧೀನದ ಶಾಲೆಗಳಿಗೆ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಋತುರಾಜ ಅವಸ್ಥಿ ಒತ್ತಿ ಹೇಳಿದ್ದಾರೆ.

ಹಿಜಾಬ್ ನಿಷೇಧ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಯವರ ತ್ರಿ ಸದಸ್ಯ ಪೀಠ ಇಂದು ಈ ಸೂಚನೆ ನೀಡಿದೆ.

ವಿಚಾರಣೆಯ ಕೊನೆಯಲ್ಲಿ ಅರ್ಜಿದಾರರ ಪರ ವಕೀಲ ತಾಹಿರ್ ಅವರು ರಾಜ್ಯಾದ್ಯಂತ ಶಿಕ್ಷಕರ ಸಮೇತ ಹಲವು ಕಾಲೇಜುಗಳಲ್ಲಿ ಹಿಜಾಬ್ ಧರಿಸಿದವರನ್ನು ಅಕ್ರಮವಾಗಿ ತಡೆಯಲಾಗುತ್ತಿದೆ. ಕಾಲೇಜಿನ ಗೇಟುಗಳಲ್ಲಿ ಪೊಲೀಸರನ್ನು ನಿಯೋಜಿಸಿ ಒತ್ತಡ ತರಲಾಗುತ್ತಿದೆ ಎಂದು ನ್ಯಾಯಾಲಯದ ಗಮನ ಸೆಳೆದರು.

    ಆಗ ಕೋಪಗೊಂಡ ಮುಖ್ಯ ನ್ಯಾಯಮೂರ್ತಿಗಳು, ನಾವು ಕೇವಲ CDC (ಕಾಲೇಜು ಅಭಿವೃದ್ಧಿ ಸಮಿತಿ)  ಇರುವ ಸರಕಾರಿ ಪದವಿಪೂರ್ವ ಕಾಲೇಜಿಗೆ ಮಾತ್ರ ಆದೇಶ ಮಾಡಿದ್ದೇವೆ. ನೀವು ಹೇಳಿದ  ರೀತಿಯಲ್ಲಿ ಸಮಸ್ಯೆ ಇದ್ದರೆ ಕಿರುಕುಳಕ್ಕೆ ಒಳಗಾದವರಿಂದ ಪತ್ರ ಕೊಡಿಸಿ ಎಂದು ಮೌಖಿಕ ಆದೇಶ ನೀಡಿದ್ದಾರೆ.