ಕೋಲಾರ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಮುಖ್ಯ ಶಿಕ್ಷಕಿಯಾದ ಆರ್ . ಹೇಮಾರವರಿಗೆ ಸನ್ಮಾನ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ : – ೨೦೨೧ – ೨೨ ನೇ ಸಾಲಿನ ಕೋಲಾರ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕೋಲಾರ ಮೆಥೋಡಿಸ್ಟ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾದ ಆರ್ . ಹೇಮಾ ರವರನ್ನು ಜಿಲ್ಲಾ ಮೆಥೋಡಿಸ್ಟ್ ಡಿಎಸ್ ರವರಾದ ಶಾಂತಕುಮಾರ್ ರವರು ಸನ್ಮಾನಿಸಿ ಗೌರವಿಸಿದರು . ಈ ಸಂದರ್ಭದಲ್ಲಿ ಪಾಸ್ಟರ್‌ ಜಯವಂತ್ , ಮೆಥೋಡಿಸ್ಟ್ ಕಾಲೇಜಿನ ಪ್ರಾಂಶುಪಾಲರಾದ ರೈಸಲ್ ಸಹನಾ , ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಸರಿತಾ , ನಿವೃತ್ತ ಪ್ರಾಶುಪಾಲ ರಂಜನಿಕಾಂತ್ , ಮೆಥೋಡಿಸ್ಟ್ ಮ್ಯಾನೆಜರ್ ಸುಜನ ಅನೂಕ್ , ಸಿಆರ್‌ಪಿ ಜಮೀರ್ ಅಹಮದ್ , ಶಿಕ್ಷಕರಾದ ಸುನೀತಾ , ಸಾಲ್‌ಡೀನ್ , ಕಾಂತ , ಆಶಾ , ಕಿರಣ್ , ಪ್ರಮೀಳ ಕುಮಾರ್ , ದೈಹಿಕ ಶಿಕ್ಷಕ ಸುರೇಶ್ ಬಾಬು , ಲಕ್ಷ್ಮೀ ದೇವಮ್ಮ , ಲಕ್ಷ್ಮೀ , ಅಶ್ವಿನಿ , ಮಲದ್ವಿ ಮೆಥೋಡಿಸ್ಟ್ ಕಾಲೇಜ್ , ಪ್ರೌಢಶಾಲೆ , ಹಿರಿಯ ಪ್ರಾಥಮಿಕ ಶಾಲೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು .