ಶ್ರೀನಿವಾಸಪುರ : ನಾವು ರೈತಪರವಾಗಿ ಎಂದು ಸಭೆಗಳಲ್ಲಿ ಮಾತನಾಡಿದ ಸರ್ಕಾರವು ಇಂದು ರೈತರನ್ನ ಬೀದಿಗೆ ತಳ್ಳಿದೆ ಎಂದು ರೈತ ಸಂಘದ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ವೀರಭದ್ರಸ್ವಾಮಿ ಹೇಳಿದರು.
ತಾಲೂಕಿನ ದಳಸನೂರು ಗ್ರಾಮದಲ್ಲಿ ಶುಕ್ರವಾರ ಲೋಕಸಭೆ ಚುನಾವಣೆ ಮತದಾನ ಬಹಿμÁ್ಕರ ಮಾಡಲು ಗ್ರಾಮಸ್ಥರ ನಿರ್ಧಾರಿಸಿದ್ದು,
ನೂರಾರು ಎಕರೆ ಸಾಗುವಳಿ ಜಮೀನು ವಶಕ್ಕೆ ಪಡೆದಿರುವ ಅರಣ್ಯ ಇಲಾಖೆ ರೈತರ ಜಮೀನು ಕಳೆದುಕೊಂಡ್ರು.
ರೈತರ ನೆರವಿಗೆ ಬಾರದ ಸರ್ಕಾರದ ಕ್ರಮಕ್ಕೆ ಖಂಡಿಸಿದರು.
ಜಂಟಿ ಸರ್ವೆ ಮಾಡಿಸಿ ರೈತರ ನೆರವಿಗೆ ಬರುವಂತೆ ಸರ್ಕಾರಕ್ಕೆ ಒತ್ತಾಯಮಾಡುತ್ತಿದ್ದೇವೆ ಎಂದು ತಿಳಿಸಿದರು.
ಗ್ರಾಮದಲ್ಲಿ ಬ್ಯಾನರ್ ಅಳವಡಿಸಿ ಚುನಾವಣೆಯಲ್ಲಿ ಮತದಾನ ಬಹಿμÁ್ಕರಕ್ಕೆ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು. ಇನ್ನು ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ವತಿಯಿಂದ ಭೂಮಿಯನ್ನು ಕಳೆದುಕೊಂಡಿರುವ ರೈತರೊಂದಿಗೆ ಉಗ್ರಹೋರಾಟ ಮಾಡಿ ಚುನಾವಣೆಯನ್ನು ಬಹಿಸ್ಕರಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಮಯದಲ್ಲಿ ಗ್ರಾಮಸ್ಥರಾದ ರೈತ ಮುಖಂಡ ಡಿ.ವಿ.ವೀರಭದ್ರಗೌಡ , ಟಿ.ರಾಮಪ್ಪ, ವೆಂಕಟೇಶಪ್ಪ, ಪಾಳ್ಯ ಗೋಪಾಲರೆಡ್ಡಿ ಚಾನ್ಪಾಷ, ಕೃಷ್ಣಪ್ಪ, ವೆಂಕಟರಾಮಿರೆಡ್ಡಿ, ಡಿ.ಎಲ್.ವೀರಭದ್ರೇಗೌಡ, ಎಸ್.ರವೀಂದ್ರ, ರಾಜಶೇಖರ್, ಜಗದೀಶ್, ನಂದೀಶ್, ಷಫಿವುಲ್ಲಾ, ರಜಾಕ್, ಸಲೀಮ್, ಮುಜೀದ್ಪಾಷ ಇದ್ದರು.