ಅಹಿಂದ ವರ್ಗ ಸರ್ಕಾರ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ದಿ ಪಥದತ್ತ ಸಾಗಬೇಕು

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ, ಅಹಿಂದ ವರ್ಗ ಸರ್ಕಾರ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ದಿ ಪಥದತ್ತ ಸಾಗಬೇಕೆಂದು ಅಹಿಂದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಪ್ರಸಾದ್ ಬಾಬು ತಿಳಿಸಿದರು.
ಪಟ್ಟಣದ ಕನಕಭವನದಲ್ಲಿ ತಾಲ್ಲೂಕು ಅಹಿಂದ ಒಕ್ಕೂಟ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಸಾದ್‍ಬಾಬು ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪ್ರತಿಯೊಬ್ಬರು ಪಡೆದುಕೊಂಡು ಅರ್ಥಿಕವಾಗಿ ಮುಂದೆ ಬರಬೇಕು ಈ ಅಹಿಂದ ಒಕ್ಕೂಟವು ಜಿಲ್ಲೆಯಲ್ಲಿ ಅತ್ಯಂತ ಬಲಿಷ್ಟವಾಗಿದೆ ಕಟ್ಟೆಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ಸಿಗಬೇಕೆಂಬುದು ನಮ್ಮ ಆಶೆಯವಾಗಿದೆ. ಅಹಿಂದ ಸಮುದಾಯಗಳ ಸಮಸ್ಯೆಗಳ ನಿವಾರಣೆಗೆ ಅಹಿಂದ ವರ್ಗಗಳು ಒಗ್ಗೂಡಬೇಕು ಈ ಒಂದು ಒಕ್ಕೂಟದಲ್ಲಿ ಯಾವುದೇ ರಾಜ ಕಾರಣ ತರಬಾರದು ಪಕ್ಷ ರಾಜಕಾರಣ ಅವರವರ ವ್ಯಯುಕ್ತಿಕ ವಿಚಾರ ಎಂದು ಸ್ಪಷ್ಟಪಡಿಸಿದರು.
ಈ ತಾಲ್ಲೂಕಿನಲ್ಲಿ ಸುಂದರವಾದ ಸಮುದಾಯಭವನ ನಿರ್ಮಾಣವಾಗಬೇಕು 1 ವರ್ಷದ ಒಳಗೆ ಜಾಗವನ್ನು ಗುರುತಿಸುವುದರ ಜೊತೆಗೆ ಸುಜ್ಜಿತ ಕಟ್ಟಡ ನಿರ್ಮಾಣವಾಗಬೇಕು. ಕೋಲಾರದಲ್ಲಿ ದೇವರಾಜು ಅರಸರ ಕಛೇರಿಯಲ್ಲಿ ಒಂದು ಕೊಠಡಿಯನ್ನು ನೀಡಿದ್ದೇವೆ. ನಿಮ್ಮ ಸಮಸ್ಯೆ ಯಾವುದೆ ಇದ್ದಲ್ಲಿ ಇಲ್ಲಿಗೆ ಬಂದು ತಿಳಿಸಿ. ನಿಮಗೆ ಯಾವುದೇ ಕೆಲಸವಿದ್ದರೂ ನಮ್ಮ ಗಮನಕ್ಕೆ ತನ್ನಿ ಪರಿಹರಿಸುವ ಕೆಲಸ ಮಾಡುತ್ತೇವೆ. ಎಲ್ಲಾ ರಾಜಕೀಯ ವಿಚಾರದಲ್ಲಿ ಎಲ್ಲಾ ಹಿಂದುಳಿದ ವರ್ಗಗಳು ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಬುದ್ದಿ ಕಲಿಸುವ ಕಾಲ ಸನ್ನಿಹಿತವಾಗಿದೆ. ಸಮುದಾಯದವರು ಒಗ್ಗಟನ್ನು ಕಾಪಾಡಿಕೊಂಡು ಸಕ್ರಿಯವಾದಲ್ಲಿ ನಾವು ಮಾಡುವ ಕಾರ್ಯಗಳು ಯಶ್ವಿಸಿಯಾಗಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಈ ಅಹಿಂದ ಒಕ್ಕೂಟಕ್ಕೆ ಒಳ್ಳೆಯ ಭವಷ್ಯವಿದೆ. ಕೋಲಾರದಲ್ಲಿ ದೇವರಾಜ್ ಅರಸರ ಪ್ರತಿಭೆಯನ್ನು ಪ್ರಾರಂಭ ಮಾಡುತ್ತೇವೆ. ಈ ಒಕ್ಕೂಟವನ್ನು ಬಹಳ ಎತ್ತರವಾಗಿ ಬೆಳೆಸುವ ಕಾರ್ಯ ಮಾಡೋಣ ದಲಿತ ಮತ್ತು ಅಹಿಂದ ವರ್ಗ ಈ ದೇಶದ ಬೆನ್ನೆಲಬು ಮುಂದಿನ ತಾಲ್ಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆ ಬರುತ್ತಿದ್ದು, ನಮ್ಮ ಅಹಿಂದ ವರ್ಗಗಳ ಒಕ್ಕೂಟವು ಈಗಿನಿಂದಲೇ ಸಕ್ರಿಯವಾಗಿ ಸಿದ್ದರಾಗಬೇಕೆಂದು ಕರೆ ನೀಡಿದರು.
ಇದೇ ಸಮಯದಲ್ಲಿ ತಾಲ್ಲೂಕು ಮಟ್ಟದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು.
ತಾಲ್ಲೂಕು ಅಹಿಂದ ಒಕ್ಕೂಟದ ಅಧ್ಯಕ್ಷರಾಗಿ ಕುಂಬಾರ ಸಮುದಾಯದ ಎಸ್. ವೇಣುಗೋಪಾಲ್, ಉಪಾಧ್ಯಕ್ಷರಾಗಿ ಸವಿತಾ ಸಮಾಜದ ನರಸಿಂಹಮೂರ್ತಿ, ದರ್ಜಿ ಸಮುದಾಯದ ಅಮರನಾಥ್, ತೊಗಟವೀರ ಸಮುದಾಯದ ಮಂಜುನಾಥ್ ವಿಶ್ವಕರ್ಮ ಸಮುದಾಯದ ಹರ್ಷವರ್ಧನ್, ಕಾರ್ಯದರ್ಶರಾಗಿ ಗಂಗ ಮತಸ್ಥರ ಸಮುದಾಯದ ಎಸ್.ಎನ್. ಸತ್ಯನಾರಾಯಣ, ಗಾಣಿಗ ಸಮುದಾಯದ ಎಲ್.ಐ.ಸಿ. ಶ್ರೀನಿವಾಸ್. ನಗರ್ತ ಸಮುದಾಯದ ಶ್ರೀನಿವಾಸ್‍ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾಗಿ ಎನ್. ಕೃಷ್ಣಮೂರ್ತಿ, ಅಪ್ಪುರೊಳ್ಳ ವೆಂಕಟೇಶ್, ನಾರಾಯಣಸ್ವಾಮಿ, ಕಾರ್ಯದರ್ಶಿಯಾಗಿ ಕುರುಬ ಸಮುದಾಯದ ಕೆ.ವಿ. ಮಂಜುನಾಥ್ ಸಂಘಟನಾ ಕಾರ್ಯದರ್ಶಿಯಾಗಿ ಸವಿತ ಸಮುದಾಯದ ವೆಲ್ಡಿಂಗ್ ಶ್ರೀನಿವಾಸ್, ಶ್ರೀರಾಮ.ಆರ್. ಮಂಜುನಾಥ್, ಶಂಕರ್, ಬಾಬು, ವೆಂಕಟರವಣಪ್ಪ, ರಮೇಶ್, ಮಾಧ್ಯಮ ಕಾರ್ಯದರ್ಶಿಗಳಾಗಿ ಮಡಿವಾಳ ಸಮಾಜದ ಎನ್. ಮುರಳಿ ಮೋಹನ್, ನಾಗೇಂದ್ರ, ಚ. ಶ್ರೀನಿವಾಸಮೂರ್ತಿ, ಆಯ್ಕೆಯಾಗಿದ್ದಾರೆ.
ಇದೇ ಸಂದರ್ಭದಲ್ಲಿ ಅಹಿಂದ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ನಂದೀಶ್, ಕುರುಬರ ಸಂಘದ ಅಧ್ಯಕ್ಷ ವೇಮಣ್ಣ, ಬೆಸ್ತರ ಸಮಾಜ ಮುಖಂಡರಾದ ಜಮಾಕಾಯಿಲು ವೆಂಕಟೇಶ್, ಲಕ್ಷ್ಮೀಪುರ ಜಗದೀಶ್, ಗಾಣಿಗ ಸಮುದಾಯದ ಕೃಷ್ಣಪ್ಪ, ರಜುಪುತ ಸಮುದಾಯದ ರಾಜೇಶ್‍ಸಿಂಗ್, ಉಪ್ಪರಸಮಾಜದ ಶ್ರೀನಿವಾಸಪ್ಪ, ಗೊಂದಳ ಸಮಾಜದ ಶಂಕರ್‍ಕೊಂಡೆ, ಸವಿತ ಸಮಾಜದ ಎಸ್. ಮಂಜುನಾಥ್, ಮರಾಠ ಸಮುದಾಯದ ವೇಣುಗೋಪಾಲರಾವ್, ಪರ್ವತರಾಜು ನಟರಾಜು, ತಾಲ್ಲೂಕಿನ ಅಹಿಂದ ವರ್ಗಗಳ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.