ಶ್ರೀನಿವಾಸಪುರ: ಸರ್ಕಾರವೇ ಜನರ ಬಳಿ ಬಂದು ಅವರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಸರ್ಕಾರದಿಂದ ಬರುವ ಪ್ರತಿಯೊಂದು ಯೋಜನೆಯ ಅನುದಾನಗಳ ಬಗ್ಗೆ ಪ್ರತಿಯೊಬ್ಬ ರೈತರಿಗೂ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಬೇಕೆಂಬ ಉದ್ಧೇಶದಿಂದ ಸರ್ಕಾರವು ಗ್ರಾಮ ವಾಸ್ತವ್ಯ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಮುಖೇನ ನಮ್ಮ ವ್ಯಾಪ್ತಿಗೆ ಬರುವ ಸಮಸ್ಯೆಗಳು ಏನೇ ಇದ್ದರೂ ಇತ್ಯಾರ್ಥ ಪಡಿಸುವುದಾಗಿ ತಾಲ್ಲೂಕು ದಂಡಾಧಿಕಾರಿಗಳಾದ ಶೀರೀನಾ ತಾಜ್ ರವರು ತಿಳಿಸಿದರು.
ಯಲ್ದೂರು ಹೋಬಳಿ ಕೊಳತೂರು ಗ್ರಾಮ ಪಂಚಾಯಿತಿಯಲ್ಲಿ ಏರ್ಪಡಿಸಿದ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿದಿನ ರೈತರು – ಸಾರ್ವಜನಿಕರು ತಾಲ್ಲೂಕು ಕಛೇರಿ ಹಾಗೂ ಇತರೆ ಕಛೇರಿಗಳಿಗೆ ಅಲೆದಾಟ ತಪ್ಪಬೇಕೆಂದು ಸರ್ಕಾರವು ಈ ಕಾರ್ಯಕ್ರಮವನ್ನು ಆಯೋಜಿಸಿದೆ. ನಮ್ಮ ಕಂದಾಯ ಇಲಾಖೆಗೆ ಸಂಬಂಧಪಟ್ಟ ವೃದ್ಯಾಪ್ಯ ವೇತನ, ಸ್ಮಶಾನ ಒತ್ತುವರಿ, ಭೂಮಿಗೆ ಸಂಬಂಧ ಪಟ್ಟ ಏನೇ ಸಮಸ್ಯೆಇದ್ದರೂ ಸ್ಥಳದಲ್ಲೆ ಇತ್ಯಾರ್ಥ ಪಡಿಸುವುದಾಗಿ ಮತ್ತು ಅರ್ಜಿಗಳನ್ನು ಪಡೆಯುವುದಾಗಿ ಹಾಗೂ ಬೇರೆ ಇಲಾಖೆಗಳಲ್ಲಿ ಬರುವ ಯೋಜನೆ ಅನುದಾನಗಳ ಬಗ್ಗೆ ಸಾರ್ವಜನಿಕರು ಮಾಹಿತಿ ಪಡೆದು ಫಲಾನುಭವಿಗಳಾಗಬಹುದು ಎಂದು ಹೇಳಿದರು.
ಈ ಸಂದರ್ಬದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗೆ ಬರುವ ಯೋಜನೆ ಮತ್ತು ಅನುದಾನಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎನ್. ಶ್ರೀನಿವಾಸ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮೆಹರ್ ತಾಜ್, ಗ್ರಾಮ ಪಂಚಾಯಿತಿ ಸದಸ್ಯ ಆನಂದ ರೆಡ್ಡಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು ಶ್ರೀನಿವಾಸ್, ಕೃಷಿ ಇಲಾಖೆಯ ಸಹಾಯಕ ನಿದೇಶಕರು ಕೆ.ಸಿ. ಮಂಜುನಾಥ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರು ಕೃಷ್ಣಪ್ಪ, ಸಿರೆಸ್ತೇದಾರ್ ಬಲರಾಮೇ ಗೌಡ,, ರೆವಿನ್ಯೂ ಅಧಿಕಾರಿ ಜನಾರ್ಧನ್, ಗ್ರಾಮ ಲೆಕ್ಕಿಗರು ಸಾಕಮ್ಮ ಮತ್ತು ಇತರೆ ಸರ್ಕಾರಿ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.